ETV Bharat / state

ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಜ.9 ರಂದು ರೈಲು ತಡೆ ಚಳವಳಿ : ವಾಟಾಳ್ ನಾಗರಾಜ್ - ವಾಟಾಳ್ ನಾಗರಾಜ್

ಸರ್ಕಾರದ ನೀತಿ ಖಂಡಿಸಿ ರಾಜ್ಯಾದ್ಯಂತ ರೈಲು ಸಂಚಾರ ತಡೆಯಲಾಗುವುದು. ಸಾರ್ವಜನಿಕರು ಜ. 9ರಂದು ರೈಲು ಸಂಚಾರಕ್ಕೆ ಮುಂದಾಗದೇ ಬಂದ್ ಗೆ ಸಹಕರಿಸುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಮನವಿ ಮಾಡಿದರು.

ವಾಟಾಳ್ ನಾಗರಾಜ್
Vatal Nagaraj
author img

By

Published : Dec 15, 2020, 7:14 AM IST

ಚಾಮರಾಜನಗರ: ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ಮುಂದಾಗಿದ್ದು, ಜ.9 ರಂದು ರೈಲು ತಡೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ತಿಳಿಸಿದರು.

ಜನವರಿ 9 ರಂದು ರೈಲು ತಡೆ ಚಳವಳಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ನೀತಿ ಖಂಡಿಸಿ ರಾಜ್ಯಾದ್ಯಂತ ರೈಲು ಸಂಚಾರ ತಡೆಯಲಾಗುವುದು. ಸಾರ್ವಜನಿಕರು ಅಂದು ರೈಲು ಸಂಚಾರಕ್ಕೆ ಮುಂದಾಗದೇ ಬಂದ್ ಗೆ ಸಹಕರಿಸಿ ಎಂದು ಮನವಿ ಮಾಡಿದರು.

ಜ.9 ರಂದು ರೈಲು ತಡೆ ಚಳವಳಿ ಬಗ್ಗೆ ವಾಟಾಳ್ ನಾಗರಾಜ್ ಮಾಹಿತಿ

ರಾಜ್ಯದಲ್ಲಿ ಬಹಳಷ್ಟು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ. ಆದರೆ ಅವರು ಎಂದಿಗೂ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಲಿಲ್ಲ. ಮತ್ತು ಅವರಿಗೆ ರಾಜ್ಯದ ಬಗ್ಗೆ ಪ್ರಾಮಾಣಿಕತೆ, ನಂಬಿಕೆ ಮತ್ತು ಪ್ರೀತಿ ಇತ್ತು. ಆದರೆ ಯಡಿಯೂರಪ್ಪ ಅವರಿಗೆ ಪ್ರಾಮಾಣಿಕತೆಯಾಗಲಿ ಅಥವಾ ನಂಬಿಕೆ ಮತ್ತು ಪ್ರೀತಿಯಾಗಲಿ ಇಲ್ಲ. ಜೊತೆಗೆ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಗಡಿ ನಾಡಿನ‌ ಬಗ್ಗೆ ಚಿಂತನೆಯೂ ಇಲ್ಲ ಎಂದು ವಾಟಾಳ್​ ಕಿಡಿಕಾರಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ಕನ್ನಡಿಗರಿಗೆ ಅಪಾಯವಾಗಿದೆ

ಮರಾಠ ಅಭಿವೃದ್ಧಿ ಪ್ರಾಧಿಕಾರ ಕನ್ನಡಿಗರಿಗೆ ಬಹಳ ಅಪಾಯವಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ತಮ್ಮ ಪ್ರಾಧಿಕಾರ ರಚನೆ ಮಾಡುವಂತೆ ತಮಿಳು, ತೆಲುಗು, ಮಲಯಾಳಿ ಭಾಷಿಕರು ಒತ್ತಡ ತರುತ್ತಾರೆ. ಆಗ ಎಲ್ಲ ಭಾಷಿಕರ ಪ್ರಾಧಿಕಾರ ರಚನೆಯಾದಾಗ ರಾಜ್ಯದಲ್ಲಿ ಕನ್ನಡಿಗರ ಪರಿಸ್ಥಿತಿ ಹೀನಾಯ ಪರಿಸ್ಥಿತಿಗೆ ತಲುಪಿ ರಾಜ್ಯ ಛಿದ್ರವಾಗಲಿದೆ. ಹೀಗಿರುವಾಗ ಸರ್ಕಾರ ಈ ಕ್ರಮ ಕೈಗೊಳ್ಳುವುದು ಸರಿಯಲ್ಲ. ಈಗಾಗಲೇ ಇದನ್ನು ವಿರೋಧಿಸಿ ರಾಜ್ಯ ಬಂದ್ ಮಾಡಲಾಗಿದೆ. ಜನವರಿ 9 ರಂದು ರಾಜ್ಯದಲ್ಲಿ ಎರಡನೇ ಹಂತದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಜನರು ಬೆಂಬಲಿಸಕು ಎಂದು ವಾಟಾಳ್​ ನಾಗರಾಜ್​ ಕರೆ ನೀಡಿದರು.

ಓದಿ :ಇಂದು ವಿಶೇಷ ಪರಿಷತ್ ಕಲಾಪ: ಸಭಾಪತಿ ಮೇಲಿನ ಅವಿಶ್ವಾಸ ನಿರ್ಣಯ ಪ್ರಸ್ತಾಪ ಇಲ್ಲ

ಸಾರಿಗೆ ನೌಕರರ ಸಮಸ್ಯೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸರ್ವಪಕ್ಷ ಸಭೆ ಕರೆದು ಮಾತನಾಡಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರು ಈ ವಿಚಾರದಲ್ಲಿ ಮೌನವಾಗಿದ್ದಾರೆ, ಇದಕ್ಕೆ ಕಾರಣವೇನು ಅನ್ನೋದು ಗೊತ್ತಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದವರಿಗೆ ಹೆರಿಗೆಯಾಗಿ, ಬಾಣಂತಿಯಾಗಿದ್ದಾರಾ ಎಂದು ಪ್ರಶ್ನಿಸಿದ ವಾಟಾಳ್​ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂಗಳಾ ಕುಮಾರಸ್ವಾಮಿ, ಸಿದ್ದರಾಮಯ್ಯ ಹೊರಗೆ ಬಂದು ಸಾರಿಗೆ ನೌಕರರ ವಿಚಾರದಲ್ಲಿ ತಮ್ಮ ನಿಲುವೇನು ಎಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.