ETV Bharat / state

ಬ್ಲೇಡ್​​ನಿಂದ ಕೈ, ಎದೆ ಕೊಯ್ದುಕೊಂಡು ಪುನೀತ್ ಅಭಿಮಾನಿ ಆತ್ಮಹತ್ಯೆ ಯತ್ನ - puneet Rajkumar fans

ಪುನಿತ್ ಸಾವಿನ ಸುದ್ದಿ ಕೇಳಿ ಹನೂರಿನಲ್ಲಿ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಂದು ಯಳಂದೂರು ತಾಲೂಕಿನಲ್ಲಿನ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

puneet-rajakumar-fan-attempts-to-suicide
ಬ್ಲೇಡ್​​ನಿಂದ ಕೈ, ಎದೆ ಕೊಯ್ದುಕೊಂಡು ಪುನೀತ್ ಅಭಿಮಾನಿ ಆತ್ಮಹತ್ಯೆ ಯತ್ನ
author img

By

Published : Oct 30, 2021, 9:47 AM IST

ಚಾಮರಾಜನಗರ: ನೆಚ್ಚಿನ ನಟನ ಅನೀರಿಕ್ಷಿತ ಸಾವಿನಿಂದ ಕಂಗಲಾದ ಅಭಿಮಾನಿಯೊಬ್ಬ ಬ್ಲೇಡ್​​ನಿಂದ ಕೈ, ಎದೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರದ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ನಡೆದಿದೆ.

ಗಣೇಶ್ (22) ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ. ಅಪ್ಪು ಸಾವಿನ ಸುದ್ದಿ ಕೇಳಿದಾಗಿನಿಂದಲೂ ಬೇಸರಗೊಂಡಿದ್ದ ಗಣೇಶ್ ತೀರಾ ಮನನೊಂದಿದ್ದರಂತೆ. ಇಂದು ಮೊಬೈಲ್​​​ನಲ್ಲಿ ಪುನೀತ್ ಅಂತಿಮ ದರ್ಶನ ಪಡೆಯುತ್ತಿದ್ದ ಗಣೇಶ್ ಏಕಾಏಕಿ ಬ್ಲೇಡ್​​ನಿಂದ ಕೈ, ಎದೆ ಕೊಯ್ದುಕೊಂಡಿದ್ದಾರೆ. ಎಚ್ಚೆತ್ತ ಸ್ನೇಹಿತರು ಯಳಂದೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

puneet-rajakumar-fan-attempts-to-suicide
ಪುನೀತ್ ಅಭಿಮಾನಿ ಆತ್ಮಹತ್ಯೆ ಯತ್ನ

ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಶುಕ್ರವಾರ ಪುನೀತ್ ಸಾವಿನ ಸುದ್ದಿ ನೋಡುತ್ತಿದ್ದಂತೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಅಸುನೀಗಿದ್ದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆಗೂ ಮುನ್ನ ಅಮಿತ್​ ಶಾ ಉತ್ತರಾಖಂಡ್​ಗೆ ಭೇಟಿ, ಕೆಲ ಯೋಜನೆಗಳಿಗೆ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.