ETV Bharat / state

ನೋಡೊಕೆ ಕೇವಲ 34 ಸೆಂ.ಮೀ. ಅಷ್ಟೇ ಆದ್ರೂ ಇವು ಕಚ್ಚಿದ್ರೇ ನಾಗಪ್ಪನಿಗಿಂತ ಡೇಂಜರ್! - ಚಾಮರಾಜನಗರದಲ್ಲಿ ರಕ್ತ ಮಂಡಲ ಹಾವು ಪತ್ತೆ

ಭಾರತದ ನಾಲ್ಕು ವಿಷಕಾರಿ ಹಾವುಗಳಲ್ಲಿ ಒಂದಾಗಿರುವ ರಕ್ತ ಮಂಡಲದ ಹಾವು(Echis Carinatus) ಚಾಮರಾಜ ನಗರದಲ್ಲಿ ಕಂಡು ಬಂದಿದ್ದು ಸ್ಥಳೀಯರನ್ನ ಬೆಚ್ಚಿ ಬೀಳಿಸಿದೆ.

ಚಾಮರಾಜನಗರದಲ್ಲಿ ರಕ್ತ ಮಂಡಲ ಹಾವು ಪತ್ತೆ
author img

By

Published : Nov 8, 2019, 9:13 PM IST

ಚಾಮರಾಜನಗರ: ನೋಡೋಕೆ ಚಿಣಮಿಣ ಅಂತಾ ಕಪ್ಪು ಮೂತಿಯ ಹಾವು ಒಂದೆಡೆಯಾದರೇ ಸರಸರನೇ ಹರಿಯುವ ಹಾವು ಮತ್ತೊಂಡೆದೆ. ನೋಡೋಕೆ ಬಹಳ ಚೆಂದ ಕಾಣುವ ಈ ಹಾವುಗಳು ಸಖತ್ ಡೇಂಜರಸ್​ ಆಗಿದ್ದು ಚಾಮರಾಜನಗರದಲ್ಲಿ ಪತ್ತೆಯಾಗಿವೆ.

ಎರಡು ಅಪರೂಪದ ಹಾವುಗಳನ್ನ ರಕ್ಷಣೆ ಮಾಡಿದ ಉರಗ ಪ್ರೇಮಿ

ನಗರ ಪ್ರದೇಶಗಳಲ್ಲಿ ಬಹಳ ಅಪರೂಪವಾಗಿ ಕಾಣುವ ಹವಳದ ಹಾವು ಮತ್ತು ರಕ್ತ ಮಂಡಲದ ಹಾವುಗಳು ಕಟ್ಟಡ ಕೆಲಸದ ವೇಳೆ ಕಂಡುಬಂದು ಎಲ್ಲರನ್ನೂ ಬೆಚ್ಚಿ ಬೀಳಿಸಿವೆ. ತಲೆ ಮತ್ತು ಬಾಲದಲ್ಲಿ ಕಪ್ಪು ಬಣ್ಣದಿಂದ ಕೂಡಿರುವ ಹವಳದ ಹಾವುಗಳು(Ptyas mucosa) ಶೀತ ವಲಯ, ಕುರುಚಲು ಕಾಡುಗಳಲ್ಲೂ ಕಾಣಿಸಿಕೊಳ್ಳುತ್ತವೆ. ರಾತ್ರಿ ವೇಳೆ ಇವು ಕಚ್ಚಿದರೆ ಬೆಳಗಾಗುವಷ್ಟರಲ್ಲಿ ಮನುಷ್ಯ ಸಾಯುತ್ತಾನೆ ಎಂಬ ನಂಬಿಕೆ ಮಹಾರಾಷ್ಟ್ರದಲ್ಲಿರುವುದರಿಂದ ಇದಕ್ಕೆ ರಾತ್ ಎಂದೂ ಕರೆಯುತ್ತಾರೆ.

ಇನ್ನು, ರಕ್ತ ಮಂಡಲದ ಹಾವುಗಳು (Echis Carinatus) ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರುವುದು. ಆದರೆ ಚಾಮರಾಜನಗರದಲ್ಲಿ ಸಿಕ್ಕಿರುವುದು ಬಹಳ‌ ಅಪರೂಪ, ಭಾರತದ ನಾಲ್ಕು ವಿಷಕಾರಿ ಹಾವುಗಳಲ್ಲಿ ಇದೂ ಒಂದಾಗಿದ್ದು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಆಂತರಿಕ ರಕ್ತಸ್ರಾವವಾಗಿ ಹೃದಯಾಘಾತವಾಗುವ ಸಂಭವ ಹೆಚ್ಚಿರುತ್ತದೆ. ಹವಳದ ಹಾವು ಮತ್ತು ರಕ್ತಮಂಡಲದ ಹಾವುಗಳು 34 ರಿಂದ 35 ಸೆ.ಮೀ. ಬೆಳೆಯಲಿದ್ದು, ನಾಗರ ಹಾವಿಗಿಂತ ಬಹಳ ವಿಷಕಾರಿಯಾಗಿದೆ. ಬರಿಗೈಯಲ್ಲಿ ಹಿಡಿಯುವ ಸಾಹಸ ಯಾರು ಮಾಡಲಾರರು ಎಂದು ಎರಡೂ ಹಾವುಗಳನ್ನು ರಕ್ಷಿಸಿದ ಉರಗಪ್ರೇಮಿ ಸ್ಮೇಕ್ ಚಾಂಪ್ ತಿಳಿಸಿದರು.

ಅಲ್ಲದೆ ಯಾವುದೇ ಹಾವುಗಳು ಕಂಡುಬಂದಲ್ಲಿ ಅವುಗಳನ್ನು ಕೊಲ್ಲದೆ ಉರಗ ಪರಿಣಿತರು ಇಲ್ಲವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ಸ್ನೇಕ್ ಚಾಂಪ್ ಮನವಿ ಮಾಡಿದರು.

Intro:ನೋಡೊಕೆ ಜಸ್ಟ್ 34 ಸೆಂ.ಮೀ ಅಷ್ಟೇ ಆದ್ರೂ ಇವು ಕಚ್ಚಿದ್ರೇ ನಾಗಪ್ಪನಿಗಿಂತ ಡೇಂಜರ್!

ಚಾಮರಾಜನಗರ: ನೋಡೋಕೆ ಚಿಣಮಿಣ ಅಂತಾ ಕಪ್ಪು ಮೂತಿಯ ಹಾವು ಒಂದೆಡೆಯಾದರೇ ಸರಸರನೇ ಹರಿಯುವ ಹಾವು ಮತ್ತೊಂಡೆದೆ, ನೋಡೋಕೆ ಬಹಳ ಚೆಂದದಂತೆ ಕಾಣುವ ಈ ಹಾವುಗಳು ಸಖತ್ ಡೇಂಜರಸ್ .

Body:ಹೌದು, ನಗರ ಪ್ರದೇಶಗಳಲ್ಲಿ ಬಹಳ ಅಪರೂಪವಾಗಿ ಕಾಣುವ ಹವಳದ ಹಾವು ಮತ್ತು ರಕ್ತ ಮಂಡಲದ ಹಾವುಗಳು ಕಟ್ಟಡ ಕೆಲಸದ ವೇಳೆ ಕಂಡುಬಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದವು.

ತಲೆ ಮತ್ತು ಬಾಲದಲ್ಲಿ ಕಪ್ಪು ಬಣ್ಣದಿಂದ ಕೂಡಿರುವ ಹವಳದ ಹಾವುಗಳು ಶೀತ ವಲಯ, ಕುರುಚಲು ಕಾಡುಗಳಲ್ಲೂ ಕಾಣಿಸಿಕೊಳ್ಳುತ್ತವೆ. ರಾತ್ರಿ ವೇಳೆ ಇವು ಕಚ್ಚಿದರೇ ಬೆಳಗ್ಗೆ ವರೆಗೆ ಮನುಷ್ಯ ಸಾಯುತ್ತಾನೆ ಎಂಬ ನಂಬಿಕೆ ಮಹಾರಾಷ್ಟ್ರದಲ್ಲಿರುವುದರಿಂದ ಇದಕ್ಕೆ ರಾತ್ ಎಂದಲೂ ಕರೆಯುತ್ತಾರೆ. ಇನ್ನು, ರಕ್ತ ಮಂಡಲದ ಹಾವುಗಳು ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರಲಿದ್ದು ಚಾಮರಾಜನಗರದಲ್ಲಿ ಸಿಕ್ಕಿರುವುದು ಬಹಳ‌ ಅಪರೂಪ, ಭಾರತದ ನಾಲ್ಕು ವಿಷಕಾರಿ ಹಾವುಗಳಲ್ಲಿ ಇದೂ ಒಂದಾಗಿದ್ದು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಆಂತರಿಕ ರಕ್ತಸ್ರಾವವಾಗಿ ಹೃದಯಾಘಾತವಾಗುವ ಸಂಭವ ಹೆಚ್ಚಿರುತ್ತದೆ. ಹವಳದ ಹಾವು ಮತ್ತು ರಕ್ತಮಂಡಲದ ಹಾವುಗಳು 34-35 cm. ಅಷ್ಟೇ ಬೆಳೆಯಲಿದ್ದು ನಾಗರಹಾವಿಗಿಂತ ಬಹಳ ವಿಷಕಾರಿಯಾಗಿದೆ, ಬರಿಗೈಯಲ್ಲಿ ಹಿಡಿಯುವ ಸಾಹಸ ಯಾರು ಮಾಡಲಾರರು ಎಂದು ಎರಡೂ ಹಾವುಗಳನ್ನು ರಕ್ಷಿಸಿದ ಉರಗಪ್ರೇಮಿ ಸ್ಮೇಕ್ ಚಾಂಪ್ ತಿಳಿಸಿದರು.

Conclusion:ಯಾವುದೇ ಹಾವುಗಳು ಕಂಡುಬಂದಲ್ಲಿ ಅವುಗಳನ್ನು ಕೊಲ್ಲದೇ ಉರಗ ಪರಿಣತರು ಇಲ್ಲವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ಅವರು ಮನವಿ ಮಾಡಿದರು.

ಬೈಟ್ - ಸ್ನೇಕ್ ಚಾಂಪ್, ಉರಗ ಪ್ರೇಮಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.