ETV Bharat / state

ಚಾಮರಾಜೇಶ್ವರ ರಥ ನಿರ್ಮಾಣಕ್ಕಾಗಿ ಕಂಬಳಿ ಹಾಸಿ ವಾಟಾಳ್ ಧರಣಿ... - ಸಚಿವ ಸಂಪುಟ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್

ಶೀಘ್ರದಲ್ಲಿ ಚಾಮರಾಜೇಶ್ವರ ನೂತನ ರಥ ನಿರ್ಮಾಣ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಚಳವಳಿಗಾರ ವಾಟಾಳ್ ನಾಗರಾಜ್ ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಕಂಬಳಿ ಹಾಸಿ ಪ್ರತಿಭಟಿಸಿದ್ದಾರೆ.

protest-by-vatal-nagaraju-in-chamarajanagara
ಚಾಮರಾಜೇಶ್ವರ ರಥ ನಿರ್ಮಾಣಕ್ಕಾಗಿ ಕಂಬಳಿ ಹಾಸಿ ವಾಟಾಳ್ ಧರಣಿ...
author img

By

Published : Feb 9, 2020, 7:55 PM IST

ಚಾಮರಾಜನಗರ: ಚಾಮರಾಜೇಶ್ವರ ನೂತನ ರಥ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಕಂಬಳಿ ಹಾಸಿ ಪ್ರತಿಭಟಿಸಿದರು.

ಚಾಮರಾಜೇಶ್ವರ ರಥ ನಿರ್ಮಾಣಕ್ಕಾಗಿ ಕಂಬಳಿ ಹಾಸಿ ವಾಟಾಳ್ ಧರಣಿ

ಇದೇ ವೇಳೆ ಸಚಿವ ಸಂಪುಟ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೆಲವು ಜಿಲ್ಲೆಗಳಿಗೇ ಖಜಾನೆ ಕೊಡುತ್ತಾರೆ. ಚಾಮರಾಜನಗರಕ್ಕೆ ಹಣವನ್ನೇ ನೀಡುವುದಿಲ್ಲ, ಈ ರೀತಿ ತಾರತಮ್ಯವನ್ನು ಯಡಿಯೂರಪ್ಪ ಮಾಡಬಾರದು, ಯಾವ ಜಿಲ್ಲೆಗಳಲ್ಲಿ ಮಂತ್ರಿಗಳು ಇರುವುದಿಲ್ಲವೋ, ಆ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟಿಸಲು ಚಿಂತನೆ ನಡೆಸಿದ್ದೇನೆ ಎಂದರು.

ಇನ್ನು, ಚಾಮರಾಜನಗರ- ಕನಕಪುರ- ಬೆಂಗಳೂರು ರೈಲು ಯೋಜನೆಯೂ ನೆನೆಗುದಿಗೆ ಬಿದ್ದಿದ್ದು, ಸರ್ಕಾರದ ಗಮನ ಸೆಳೆಯುವ ಸಲುವಾಗಿ ಮುಂದಿನ ದಿನಗಳಲ್ಲಿ ಕನಕಪುರ- ಮಳವಳ್ಳಿ- ಟಿ.ನರಸೀಪುರ- ಚಾಮರಾಜನಗರ ಮಾರ್ಗವಾಗಿ ರ್ಯಾಲಿ ನಡೆಸುತ್ತೇನೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.