ಚಾಮರಾಜನಗರ: ಚಿಕ್ಕಲ್ಲೂರು ಜಾತ್ರೆ ಸಲುವಾಗಿ ಗಾಂಜಾ ಬೆಳೆದಿದ್ದ ಹನೂರು ತಾಲೂಕಿನ ದೊಮ್ಮನಗದ್ದೆಯ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ರಂಗುನಾಯ್ಕ ಹಾಗೂ ಸರಸಿಬಾಯಿ ದಂಪತಿಯು ತಮ್ಮ ಜಮೀನಿನಲ್ಲಿ ಬದನೆ ಬೆಳೆಯೊಂದಿಗೆ ಗಾಂಜಾ ಬೆಳೆದಿದ್ದ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪಿಐ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಬರೋಬ್ಬರಿ 89 ಕೆಜಿ ಹಸಿ ಗಾಂಜಾ, 12 ಕೆ.ಜಿ. ಒಣ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಲ್ಲೂರು ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಭಂಗಿ ಸೇವೆಯಲ್ಲಿ ಮಾಂಸಕ್ಕೆ ಗಾಂಜಾ ಸೊಪ್ಪನ್ನು ಕೆಲವರು ಬೆರೆಸುವ ರೂಢಿ ಇರುವುದರಿಂದ ಇಷ್ಟೊಂದು ಗಾಂಜಾವನ್ನು ಬೆಳೆದಿದ್ದರು ಎಂದು ತಿಳಿದುಬಂದಿದೆ. ಸದ್ಯ, ಸರಸಿಬಾಯಿಯನ್ನು ಬಂಧಿಸಲಾಗಿದ್ದು ಪತಿ ರಂಗೂನಾಯ್ಕ್ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ಎಎಸ್ಐ ರಾಮು, ಸಿಬ್ಬಂದಿಗಳಾದ ನಂಜುಂಡ, ಲಿಂಗರಾಜು, ಶಿವರಾಜು, ನಾಗೇಂದ್ರ, ಮಾದೇಶ್ ಇನ್ನಿತರರು ಭಾಗವಹಿಸಿದ್ದರು.