ETV Bharat / state

ಚಾಮರಾಜನಗರ: ಮದುವೆಯಾಗಲು 14 ವರ್ಷದ ಬಾಲಕಿ ಕರೆದೊಯ್ದಿದ್ದ ಯುವಕನ ಬಂಧನ - ಬಾಲಕಿಯನ್ನು ಪುಸಲಾಯಿಸಿ ಮದುವೆಯಾಗಲು ಕರೆದೊಯ್ದಿದ್ದವನ ಬಂಧನ

ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ಯುವಕನೊಬ್ಬ ಪ್ರೀತಿ - ಪ್ರೇಮ ಎಂದು ಪುಸಲಾಯಿಸಿ ಬಾಲಕಿಯನ್ನು ವಿವಾಹವಾಗಲು ಕರೆದೊಯ್ದಿದ್ದ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Pocso case in chamarajanagar
ಚಾಮರಾಜನಗರ: ಮದುವೆಯಾಗಲು 14 ವರ್ಷದ ಬಾಲಕಿಯನ್ನು ಕರೆದೊಯ್ದಿದ್ದ ಯುವಕನ ಬಂಧನ
author img

By

Published : Apr 27, 2022, 11:55 AM IST

ಚಾಮರಾಜನಗರ: ಯುವಕನೊಬ್ಬ ಪ್ರೀತಿ - ಪ್ರೇಮ ಎಂದು ಪುಸಲಾಯಿಸಿ ಬಾಲಕಿಯನ್ನು ವಿವಾಹವಾಗಲು ಕರೆದೊಯ್ದಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲೂಕಿನ ಅರಳೀಪುರ ಗ್ರಾಮದ ಪ್ರಕಾಶ್(31) ಬಂಧಿತ ಆರೋಪಿಯಾಗಿದ್ದಾನೆ. ಜಿಲ್ಲೆಯ ಗ್ರಾಮವೊಂದರ ಪ್ರೌಢಶಾಲೆ ವಿದ್ಯಾರ್ಥಿನಿಯನ್ನು ಪ್ರೀತಿ - ಪ್ರೇಮ ಎಂದು ಪುಸಲಾಯಿಸಿ, ಮದುವೆಯಾಗಲು ಮೂರು ದಿನಗಳ ಹಿಂದೆ ಪ್ರಕಾಶ್ ಕರೆದೊಯ್ದಿದ್ದ ಎಂದು ತಿಳಿದು ಬಂದಿದೆ.

ಡೇರಿಗೆ ಹಾಲು ಹಾಕಲು ತೆರಳಿದ್ದ ವೇಳೆ ಮೊಮ್ಮಗಳು ಕಾಣೆಯಾಗಿದ್ದು, ಯಾರೋ ಅಪಹರಿಸಿರಬಹುದು ಎಂದು ಬಾಲಕಿಯ ಅಜ್ಜಿ ದೂರು ಕೊಟ್ಟಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸ್ ಇನ್ಸ್​ಪೆಕ್ಟರ್ ಬಿ.ಪುಟ್ಟಸ್ವಾಮಿ ತಮಿಳುನಾಡಿಗೆ ಕರೆದೊಯ್ದಿದ್ದ ಯುವಕನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಲಕಿ ರಕ್ಷಿಸಿ ಬಾಲಮಂದಿರಕ್ಕೆ ಬಿಡಲಾಗಿದೆ. ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾರಿ ಡ್ರೈವರ್ ಚೆಲ್ಲಾಟ.. ಟೋಲ್ ಸಿಬ್ಬಂದಿಗೆ ಪ್ರಾಣ ಸಂಕಟ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.