ETV Bharat / state

ಜಗಮಗಿಸುವ ದೀಪದಡಿ ಸೆಲ್ಫಿ ಸುಗ್ಗಿ.. ಕೊರೊನಾತಂಕ ದೂರ, ಜಾಗೃತಿಯೂ ಮಾಯ!! - People not aware about Social Distance near Chamarajeshwara temple

ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕುರಿತು ಆರೋಗ್ಯ ಇಲಾಖೆಯಾಗಲಿ, ಪೊಲೀಸ್ ಇಲಾಖೆ ಸೇರಿದಂತೆ ಯಾರೊಬ್ಬರು ಜಾಗೃತಿ ಮೂಡಿಸಲು ಮುಂದಾಗದಿರುವುದರಿಂದ ಜನಜಾತ್ರೆಯೇ ದೇಗುಲ ಆವರಣದಲ್ಲಿ ಸೇರಿತ್ತು..

Chamrajnagar
ಜಗಮಗಿಸುವ ದೀಪದಡಿ ಸೆಲ್ಫಿ ಸುರಿಮಳೆ
author img

By

Published : Oct 23, 2020, 9:50 PM IST

ಚಾಮರಾಜನಗರ: ಮಕ್ಕಳು, ಯುವಕ-ಯುವತಿಯರು, ಹಿರಿಯರಾದಿಯಾಗಿ ಜಗಮಗಿಸುವ ದೀಪದಡಿ ಮಾಸ್ಕ್, ಶಾರೀರಿಕ ಅಂತರವಿಲ್ಲದೇ ಸೆಲ್ಫಿ ಸುರಿಮಳೆ ಸುರಿಸಿ ಸಂಭ್ರಮಿಸಿದರು.

ಜಿಲ್ಲಾ ದಸರಾ ಪ್ರಯುಕ್ತ ಚಾಮರಾಜೇಶ್ವರ ದೇಗುಲ ಸೇರಿದಂತೆ ಆವರಣಕ್ಕೆಲ್ಲಾ ಹಾಕಿರುವ ಬಣ್ಣ-ಬಣ್ಣದ ದೀಪಗಳಿಗೆ ಆಕರ್ಷಿತರಾದ ಜನರು ಹಬ್ಬದ ಸಂಭ್ರಮಕ್ಕೆ ಮಾಸ್ಕ್ ಧರಿಸದೇ ಕೊರೊನಾ ಭಯ ಮರೆತರು.

ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಕುರಿತು ಆರೋಗ್ಯ ಇಲಾಖೆಯಾಗಲಿ, ಪೊಲೀಸ್ ಇಲಾಖೆ ಸೇರಿದಂತೆ ಯಾರೊಬ್ಬರು ಜಾಗೃತಿ ಮೂಡಿಸಲು ಮುಂದಾಗದಿರುವುದರಿಂದ ಜನಜಾತ್ರೆಯೇ ದೇಗುಲ ಆವರಣದಲ್ಲಿ ಸೇರಿತ್ತು.

ಮಕ್ಕಳು, ಹಿರಿಯರು ಕೂಡ ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವುದು ಸಾಮಾನ್ಯವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಅರಿವು ಮೂಡಿಸಬೇಕಿದೆ. ಇಲ್ಲದಿದ್ದರೇ, ದಸರಾ ಸಂಭ್ರಮದ ಸೆಲ್ಫಿ ಸ್ಪಾಟ್ ಕೊರೊನಾ ಉಲ್ಬಣ ಕೇಂದ್ರವಾಗಲಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.