ETV Bharat / state

ರಾಷ್ಟ್ರೀಯ ಶಿಕ್ಷಣ ನೀತಿ, ಹಿಂದಿ ಹೇರಿಕೆ ವಿರುದ್ಧ ಚಿಂತಕ ಪ.ಮಲ್ಲೇಶ್ ಕಿಡಿ

ರಾಜ್ಯ ರೈತ ಸಂಘದ ಗತ್ತು ಮೊದಲಿನಂತೆ ಉಳಿದಿದ್ದರೇ ಒಡೆದು ಇಬ್ಭಾಗವಾಗದಿದ್ದರೆ ಜೊತೆಗೆ ಸಮಾಜವಾದಿ ಹೋರಾಟ, ದಲಿತ ಸಂಘಟನೆಗಳು ಒಗ್ಗಟ್ಟಾಗದಿದ್ದರೆ ಇಂದು ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಇರುತ್ತಿರಲಿಲ್ಲ, ರೈತರೇ ರಾಜ್ಯ ಆಳುತ್ತಿದ್ದರು..

pa mallesh outrage on hindi imposition
ಚಿಂತಕ ಪ.ಮಲ್ಲೇಶ್ ಕಿಡಿ
author img

By

Published : Sep 18, 2020, 7:41 PM IST

ಚಾಮರಾಜನಗರ : ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಹಿಂದಿ ಹೇರಿಕೆ ವಿರುದ್ಧ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಶಿಕ್ಷಣ ಸಚಿವರ ಸಮ್ಮುಖದಲ್ಲೇ ಕಟುವಾಗಿ ಟೀಕಿಸಿದರು.

ಹಿಂದಿ ಹೇರಿಕೆಗೆ ಚಿಂತಕ ಪ.ಮಲ್ಲೇಶ್ ಕಿಡಿ
ಚಾಮರಾಜನಗರ ತಾಲೂಕಿನ ಮುನಚನಹಳ್ಳಿಯಲ್ಲಿ ತೆಂಗು ಸಂಸ್ಕರಣಾ ಘಟಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 34 ವರ್ಷದ ಬಳಿಕ ಮೋದಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ತಂದಿದೆ.‌ ಆದರೆ, ಅದರಲ್ಲಿ ರೈತರಿಗೆ ಸ್ಥಾನವೇ ಇಲ್ಲ, ರೈತನ ಮಗ ರೈತಾಪಿ ಜೀವನಕ್ಕೆ ಹೇಗೆ ಅಂಟಿಕೊಂಡು ಓದಬೇಕೆಂಬ ಸೂಚನೆಯೂ ಇಲ್ಲ, ಇಂತಹ ಶಿಕ್ಷಣ ನೀತಿ ದೇಶವನ್ನು ಮುಂದುವರೆಸುತ್ತದೆ ಎಂದು ಬಿಜೆಪಿಯವರು ಸಾರಾಸಗಾಟಾಗಿ ಕೂಗುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲಾಬೇಕೆಂಬ ಕಟ್ಟಳೆ ಮಾಡಲು ಹಿಂದೆಮುಂದೆ ನೋಡಿದ್ದಾರೆ.
ಹಿಂದಿಯನ್ನು ನಮ್ಮ ಮೇಲೆ ಹೇರುತ್ತಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ಎರಡೇ ಸಾಕು ಎಂಬ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ, ನಮ್ಮ ಮಾತೃಭಾಷೆ ಜೊತೆಗೆ ಚಕ್ಕಂದ ಆಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಎಲ್ಲ ಮಹನೀಯರಿಗೂ ಗೊತ್ತು ಸಂವಿಧಾನದಲ್ಲಿ ಏನಿದೆ ಎಂದು, ಇಂಗ್ಲಿಷ್ ರಾಷ್ಟ್ರಭಾಷೆ ಅಲ್ಲ. ಆದರೆ, ಅದಕ್ಕೆ ರಾಷ್ಟ್ರಭಾಷೆ, ಮಾತೃಭಾಷೆಗಿಂತ ಹೆಚ್ಚು ಒತ್ತು ನೀಡಲಾಗಿದೆ. ರೈತನ ಮಕ್ಕಳು ಏನು ಓದಬೇಕು, ಎಂಬಿಬಿಎಸ್ ಮಾಡಿ ವ್ಯವಸಾಯವನ್ನು ಬಿಡಬೇಕೆ, ಇಂತಹ ಪ್ರಮುಖ ಸಮಸ್ಯೆ ಇರಬೇಕಾದರೇ ಮೋದಿಯವರು ರೈತರ ಮಗ ಏನು ಓದಬೇಕೆಂದು ಚಿಂತಿಸಿಲ್ಲ ಎಂದು ಕಿಡಿಕಾರಿದರು.
ಈ ದೇಶ ಹೀಗಾಗಲು ಗಾಂಧಿಯಲ್ಲ ನೆಹರು ಕಾರಣ. ಹಳ್ಳಿಗಳಿಂದ ಭಾರತವನ್ನು ಕಟ್ಟಬೇಕೆಂಬ ಮಹಾತ್ಮ ಗಾಂಧಿ ಒತ್ತಾಸೆ ಈಡೇರಿದ್ರೆ ಇಂದು ಸಂಘಟನೆಗಳೇ ಬೇಕಿರಲಿಲ್ಲ. ಭಾರತವನ್ನು ಹಳ್ಳಿಗಳಿಂದ, ರೈತರಿಂದ ಕಟ್ಟಬೇಕಿತ್ತು ಎಂದು ಅಭಿಪ್ರಾಯಪಟ್ಟರು. ರಾಜ್ಯ ರೈತ ಸಂಘದ ಗತ್ತು ಮೊದಲಿನಂತೆ ಉಳಿದಿದ್ದರೇ ಒಡೆದು ಇಬ್ಭಾಗವಾಗದಿದ್ದರೆ ಜೊತೆಗೆ ಸಮಾಜವಾದಿ ಹೋರಾಟ, ದಲಿತ ಸಂಘಟನೆಗಳು ಒಗ್ಗಟ್ಟಾಗದಿದ್ದರೆ ಇಂದು ರಾಜ್ಯದಲ್ಲಿ ರಾಜಕೀಯ ಪಕ್ಷಗಳು ಇರುತ್ತಿರಲಿಲ್ಲ, ರೈತರೇ ರಾಜ್ಯ ಆಳುತ್ತಿದ್ದರು ಎಂದರು. ವೇದಿಕೆಯಲ್ಲಿ ಸಚಿವರುಗಳಾದ ಸುರೇಶ್‌ಕುಮಾರ್ ಹಾಗೂ ಎಸ್‌ ಟಿ ಸೋಮಶೇಖರ್, ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ನಿರಂಜನಕುಮಾರ್ ಹಾಗೂ ಇನ್ನಿತರರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.