ಚಾಮರಾಜನಗರ: ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಈಗ ಲೋಕಾಯುಕ್ತವೂ ಕೂಡ ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಇಳಿದಿದೆ.
ಈ ಹಿಂದೆ ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಕಳಸದ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ ಸರ್ಕಾರ 3 ದಿನದೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಇದಾದ ಬಳಿಕ ವಿಪಕ್ಷಗಳ ತೀವ್ರ ಆಕ್ಷೇಪದ ಪರಿಣಾಮ ಹೈಕೋರ್ಟ್ ಸೂಚನೆಯಿಂದ ಎಚ್ಚೆತ್ತುಕೊಂಡು ದುರ್ಘಟನೆಯ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೂಡ ಕೇಶವ ನಾರಾಯಣ, ವೇಣುಗೋಪಾಲ ನೇತೃತ್ವದ ಸಮಿತಿ ನೇಮಿಸಿ ತನಿಖೆಗೆ ಆದೇಶಿಸಿದೆ. ಇದೀಗ ಪ್ರಕರಣದ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆಯೂ ಮುಂದಾಗಿದೆ.
ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ... ಎರಡನೇ ದಿನವೂ ದಾಖಲೆಗಳ ಜಪ್ತಿ
ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ತನಿಖೆಗಳು ನಡೆಯುತ್ತಿದ್ದು, ದುರಂತಕ್ಕೆ ವಿವಿಧ ಆಯಾಮ ದೊರೆಯುವ ಸಾಧ್ಯತೆ ಇದೆ. ಜತೆಗೆ ನಾಲ್ಕು ತನಿಖೆಗಳು ನಡೆಯುವುದರಿಂದ ಗೊಂದಲ ಏರ್ಪಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.