ETV Bharat / state

ಸಿದ್ದರಾಮಯ್ಯ ಸರ್ಕಾರದಂತೆ ನಮ್ಮದು ಖಾಲಿ ಡಬ್ಬಿಯಲ್ಲ: ಕೈ ಪಕ್ಷಕ್ಕೆ ಕಟೀಲ್​ ಟಾಂಗ್

ಕೊಳ್ಳೇಗಾಲ ಪ್ರವಾಸಿ ಮಂದಿರದಲ್ಲಿ ಕೋರ್ ಕಮಿಟಿ ಸಭೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

author img

By

Published : Jul 30, 2020, 2:08 PM IST

nalin kumar
ನಳೀನ್ ಕುಮಾರ್ ಕಟೀಲ್

ಕೊಳ್ಳೇಗಾಲ: ಯಡಿಯೂರಪ್ಪ ಜನಮಾನಸದಲ್ಲಿದ್ದಾರೆ. ಸಿದ್ದರಾಮಯ್ಯ ಸರ್ಕಾರದಂತೆ ನಮ್ಮದು ಖಾಲಿ ಡಬ್ಬಿ ಸರ್ಕಾರವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿ ಎಂದು ಜನ ಅಪೇಕ್ಷೆ ಪಟ್ಟಿದ್ದರು. ನಾಟಕದ ಪ್ರೀತಿ ಆಟವಾಡಿ ಯಡಿಯೂರಪ್ಪ ಮುಖ್ಯಮಂತ್ರಿಯಾಗ ಬಾರದು ಎಂದು ಅಡ್ಡಗಾಲಿಟ್ಟರು. ಸಿದ್ದರಾಮಯ್ಯ ಮನಸ್ಸಿಂದ ಅಲ್ಲದೇ, ದ್ವೇಷದ ರಾಜಕಾರಣದ ಜೊತೆಗೆ ಪ್ರೀತಿ ಬೆರೆಸಿದ್ದಾರೆ ಅಷ್ಟೇ ಎಂದು ಕಟೀಲ್​ ವ್ಯಂಗ್ಯವಾಡಿದ್ದಾರೆ.

ನಳೀನ್ ಕುಮಾರ್ ಕಟೀಲ್ ಲೇವಡಿ

ಇದೀಗ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ನೆರೆ, ಬರ, ಉಪಚುನಾವಣೆ, ಕೋವಿಡ್​ನಂತಹ ಸಂದರ್ಭ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಕೃಷಿಕ್ ಸಮ್ಮಾನ್, ನೇಕಾರ್ ಯೋಜನೆಯಂತಹ ಯೋಜನೆ ಜಾರಿಗೊಳಿಸಿದ್ದಾರೆ. ಯಡಿಯೂರಪ್ಪ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಮಾತನಾಡುವ ಅವಶ್ಯಕತೆಯಿಲ್ಲ.

ಯಡಿಯೂರಪ್ಪರನ್ನು ಜನ ಹೃದಯದಲ್ಲಿಟ್ಟು ಪೂಜೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಯಾರು ಮಾಡ್ತಾರೆ? 21 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಇವರೇನು ಮಾಡ್ತಿದ್ರು? ಇವರ ಕಾಲದಲ್ಲಿ ಮೈಸೂರು, ಮಂಗಳೂರು ಜೈಲೊಳಗೆ ಮರ್ಡರ್, ಮೂರು ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ನೀವು ಏನೂ ಮಾಡಲಿಲ್ಲ. ಸರ್ಕಾರದಲ್ಲಿ ನಮ್ಮ ಡಬ್ಬಿ ತುಂಬಿದೆ. ರಕ್ತದ ಕೋಡಿ ಹರಿದಾಗ ನಿಮ್ಮ ಕಣ್ಣಲ್ಲಿ ನೀರು ಬರಲಿಲ್ಲ. ಯಡಿಯೂರಪ್ಪ ಏನೂ ಅಂತಾ ಜನರಿಗೆ ಅರ್ಥವಾಗಿದೆ. ಅದಕ್ಕೆ ನಿಮ್ಮ ಅವಶ್ಯಕತೆ ಜನರಿಗಿಲ್ಲ ಎಂದು ನಳೀನ್​ ಕುಮಾರ್​​ ಕಟೀಲ್​​ ವ್ಯಂಗ್ಯವಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.