ETV Bharat / state

ಸಿದ್ದರಾಮಯ್ಯ ತವರಲ್ಲಿ ಸ್ಮಶಾನಕ್ಕಿಲ್ಲ ರಸ್ತೆ: ಕೆಸರು ಗದ್ದೆಯಲ್ಲೇ ಶವ ಹೊತ್ತು ಸಾಗಿದ ಜನ! - ಈಟಿವಿ ಭಾರತ

ಇದು ಈ ಮೊದಲು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಪ್ರಸ್ತುತ ಯತೀಂದ್ರ ಸಿದ್ದರಾಮಯ್ಯ ಇಲ್ಲಿನ ಶಾಸಕರು. ಸಂಸದ ಧ್ರುವನಾರಾಯಣ್ ವ್ಯಾಪ್ತಿಗೆ ಈ ಗ್ರಾಮ ಬರಲಿದೆ. ಸಾಲದೆಂಬಂತೆ ಕಳೆದ ಬಾರಿ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಸಿ.ಮಹದೇವಪ್ಪ ಹುಟ್ಟೂರು ಹದಿನಾರು ಗ್ರಾಪಂ ವ್ಯಾಪ್ತಿಯಲ್ಲೇ ಈ ಊರು ಇದೆ.

ಸ್ಮಶಾನ
author img

By

Published : Apr 7, 2019, 5:15 AM IST

ಚಾಮರಾಜನಗರ/ಮೈಸೂರು: ಸ್ಮಶಾನಕ್ಕೆ ರಸ್ತೆ ಇಲ್ಲದೆ ಗದ್ದೆಗಳ ಮಧ್ಯದಲ್ಲೇ ಶವ ಹೊತ್ತು ಸಾಗಿಸುವ ವಿಡಿಯೋ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹದಿನಾರು ಮೋಳೆ ಎಂಬ ಗ್ರಾಮದಲ್ಲಿ ಸ್ಮಶಾನಕ್ಕೆ ರಸ್ತೆ ಇಲ್ಲದೇ 1 ಕಿಮೀ ಗದ್ದೆ ಮಧ್ಯವೇ ನಡೆಯಬೇಕಾದ ದುಃಸ್ಥಿತಿ ಇದೆ.

ಗದ್ದೆ ಕೆಸರಲ್ಲೇ ಶವ ಸಾಗಿಸುತ್ತಿರುವ ಜನರು

ಸಿದ್ದರಾಮಯ್ಯ ತವರು ಕ್ಷೇತ್ರ ಹಾಗೂ ಸಂಸದ ಧ್ರುವನಾರಾಯಣ್ ವ್ಯಾಪ್ತಿಯಲ್ಲಿ ಈ ಗ್ರಾಮವಿದೆ. ಸಾಲದೆಂಬಂತೆ ಕಳೆದ ಬಾರಿ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಸಿ.ಮಹದೇವಪ್ಪ ಹುಟ್ಟೂರು ಹದಿನಾರು ಗ್ರಾಪಂ ವ್ಯಾಪ್ತಿಯಲ್ಲೇ ಈ ಊರು ಬರಲಿದೆ.

ಗ್ರಾಮದಲ್ಲಿ ಸುಮಾರು 3 ಸಾವಿರ ಜನಸಂಖ್ಯೆ ಇದೆ. ಉಪ್ಪಾರ, ಕುಂಬಾರ, ಕುರುಬ, ಮಡಿವಾಳ, ಗಾಣಿಗ, ಮಾದಿಗ ಜನಾಂಗದ ಯಾರೇ ಮೃತಪಟ್ಟರೂ 1 ಕಿಮೀ ದೂರದ ಕಪಿಲ ನದಿ ಬಳಿಯ ಸ್ಮಶಾನಕ್ಕೆ ಗದ್ದೆಗಳ ಮಧ್ಯನೇ ಹಾದುಹೋಗಬೇಕಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಇನ್ನಾದರು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಗ್ರಾಮಸ್ಥರ ಅಳಲಿಗೆ ಸ್ಪಂದಿಸಬೇಕಿದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.