ETV Bharat / state

ಚಾಮರಾಜನಗರದ ಈ ಗಣಪನಿಗಿಲ್ಲ ಜಾತಿ ಹಂಗು.. ಅರ್ಚಕರ ಅಗತ್ಯ ಮೊದಲೇ ಇಲ್ಲ.. - chamarajanagara Ganesha temple

ಯಾವುದೇ ಶುಭ ಕಾರ್ಯಕ್ಕೂ ಮುನ್ನ ಜನರು ದೇವಾಲಯಕ್ಕೆ ಬಂದು ಗಣಪನನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಿ ಹೋಗಲಿದ್ದಾರೆ. ಜಾತಿ-ಮತದ ಬೇಧವಿಲ್ಲದೆ ಎಲ್ಲಾ ಸಮುದಾಯಕ್ಕೂ ಈ ಗಣಪ ಒಲಿದಿದೆ. ಅರ್ಚಕರಿಲ್ಲದೆ ಭಕ್ತರೇ ಪೂಜೆ ಮಾಡುವುದು ವಿಶೇಷ..

no-caste-system-in-ganesha-temple-at-chamarajanagara
ಚಾಮರಾಜನಗರದ ಗಣಪ
author img

By

Published : Sep 10, 2021, 7:35 PM IST

Updated : Sep 10, 2021, 10:25 PM IST

ಚಾಮರಾಜನಗರ : ದೇವಾಲಯ ಅಂದ ಮೇಲೆ ಅರ್ಚಕರಿರುವುದು ಸಾಮಾನ್ಯ. ಅವರೇ ಪೂಜೆ ಸಲ್ಲಿಸಿ ಮಂಗಳಾರತಿ ಮಾಡುವುದನ್ನು ನಾವೆಲ್ಲರು ನೋಡಿರುತ್ತೇವೆ. ಆದರೆ, ಈ ಗಣಪನ ದೇವಾಲಯಕ್ಕೆ ಅರ್ಚಕರೇ ಇಲ್ಲ. ಜಾತಿ-ಮತದ ಹಂಗೂ ಇಲ್ಲ.

ಕೊಳದ ಗಣಪತಿ ವಿಶೇಷತೆ ಬಗ್ಗೆ ಅರ್ಚಕರು ಮಾತನಾಡಿದರು

ನಗರದಲ್ಲಿರುವ ಕೊಳದ ಗಣಪತಿ ದೇವಾಲಯ ಸಾಕಷ್ಟು ಜನರಿಗೆ ಆರಾಧ್ಯ ದೈವವಾಗಿದೆ. ಅಲ್ಲದೆ, ಸ್ಪರ್ಶ ಗಣಪ ಎಂದೇ ಪ್ರಸಿದ್ಧಿ ಪಡೆದಿದೆ. ಯಾವುದೇ ಸಮಯದಲ್ಲಾದರೂ ಭಕ್ತರೇ ದೇವಾಲಯದ ಗರ್ಭಗುಡಿಯೊಳಗೆ ತೆರಳಿ ಗಣಪನನ್ನು ಪೂಜಿಸಬಹುದಾಗಿದೆ.

ವಿವಾಹ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ಇಷ್ಟಾರ್ಥ ಕರುಣಿಸುವನೆಂಬ ನಂಬಿಕೆ ಈ ಗಣಪನಿಗಿದೆ. 21 ಗರಿಕೆಗಳನ್ನು ತಂದು ಪೂಜಿಸಿದರೆ ಸಾಕು ಭಕ್ತರ ಬಯಕೆ ಈಡೇರುವ ನಂಬಿಕೆ ಈಗಲೂ ನಡೆದುಕೊಂಡು ಬಂದಿದೆ.

ಈ ಕುರಿತು ಹರಳುಕೋಟೆ ಜನಾರ್ದನ ದೇವಾಲಯದ ಅರ್ಚಕ ಅನಂತಪ್ರಸಾದ್ ಮಾತನಾಡಿದ್ದಾರೆ. ದಿನದ 24 ಗಂಟೆಗಳಲ್ಲಿ ಯಾವ ಸಮಯದಲ್ಲಾದರೂ ಈ ದೇವರನ್ನು ಪೂಜಿಸಬಹುದಾಗಿದೆ. 21 ದಿನಗಳಲ್ಲಿ ಇಷ್ಟಾರ್ಥ ಈಡೇರಿರುವ ಹಲವು ನಿದರ್ಶನಗಳಿವೆ.

ಯಾವುದೇ ಶುಭ ಕಾರ್ಯಕ್ಕೂ ಮುನ್ನ ಜನರು ದೇವಾಲಯಕ್ಕೆ ಬಂದು ಗಣಪನನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಿ ಹೋಗಲಿದ್ದಾರೆ. ಜಾತಿ-ಮತದ ಬೇಧವಿಲ್ಲದೆ ಎಲ್ಲಾ ಸಮುದಾಯಕ್ಕೂ ಈ ಗಣಪ ಒಲಿದಿದೆ. ಅರ್ಚಕರಿಲ್ಲದೇ ಭಕ್ತರೇ ಪೂಜೆ ಮಾಡುವುದು ವಿಶೇಷ ಎಂದರು.

ಭಕ್ತಾದಿಯಾದ ಚಂದ್ರಶೇಖರ್ ಗಣಪತಿ ಮಹಿಮೆ ಬಗ್ಗೆ ಮಾತನಾಡಿದ್ದಾರೆ. 'ನಾನು ಚಿಕ್ಕಂದಿನಿಂದಲೂ ಈ ದೇವಾಲಯಕ್ಕೆ ತಪ್ಪದೇ ಬರುತ್ತಿದ್ದೇನೆ. ಆಗಿನಿಂದಲೂ ಅರ್ಚಕರು ಯಾರು ಇಲ್ಲ. ಗಣಪತಿಗೆ ಬೆಣ್ಣೆ ಅಲಂಕಾರ, ಅಭಿಷೇಕ ಮಾಡಿಸಬೇಕೆನ್ನುವವರು ಮಾತ್ರ ಅವರೇ ಅರ್ಚಕರೊಬ್ಬರನ್ನು ಕರೆತಂದು ಅಲಂಕಾರ ಮಾಡಿಸಿ, ವಿಶೇಷ ಪೂಜೆ ಮಾಡಿಸುತ್ತಾರೆ‌. ಉಳಿದಂತೆ, ಭಕ್ತರೇ ಗಣಪನನ್ನು ಸ್ಪರ್ಶಿಸಿ ಪ್ರಾರ್ಥಿಸುತ್ತೇವೆ. ಇಷ್ಟಾರ್ಥಗಳೆಲ್ಲಾ ಸಿದ್ಧಿಸಲಿದೆ. ನನಗೆ ಈ ದೇವರಲ್ಲಿ ಬಹಳ ನಂಬಿಕೆ' ಎಂದರು.

ಗಣಪನ ದೇವಾಲಯಕ್ಕೆ ಹೊಂದಿಕೊಂಡಂತೆ ಸುಬ್ರಹ್ಮಣ್ಯ, ಆಂಜನೇಯ, ಅಯ್ಯಪ್ಪಸ್ವಾಮಿ ದೇವಾಲಯಗಳಿವೆ. ಅಲ್ಲಿನ ದೇಗುಲಗಳಿಗೆ ಅರ್ಚಕರಿದ್ದಾರೆ. ಆದರೆ, ಇಲ್ಲಿ ಮಾತ್ರ ಭಕ್ತರೇ ಗಣಪನನ್ನು ಸ್ಪರ್ಶಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಓದಿ: ಈ ಕ್ಷೇತ್ರಕ್ಕೆ ಭಕ್ತಿಯ ಕಾಣಿಕೆಯೇ 11 ಟನ್ ಗಂಟೆಗಳು.. ಇಲ್ಲಿದೆ ಪ್ರಸಿದ್ಧ ದೇವಾಲಯದ ಮಾಹಿತಿ..

Last Updated : Sep 10, 2021, 10:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.