ಗುಂಡ್ಲುಪೇಟೆ: ಕೊವಿಡ್-19 ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಿಲ್ಲಾಡಳಿತ ಎಷ್ಟೇ ಕ್ರಮವಹಿಸುತ್ತಿದ್ದರೂ ಕೂಡ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನಿತ್ಯ ತರಕಾರಿಗಳನ್ನು ಕೇರಳದ ವಿವಿಧ ಭಾಗಗಳಿಗೆ ಸರಬರಾಜು ಮಾಡಲು ತಾಲೂಕು ಕಚೇರಿಯಲ್ಲಿ ಪರವಾನಗಿ ನೀಡಲಾಗುತ್ತಿದೆ. ಇದನ್ನು ಪಡೆಯಲು ಸ್ಥಳೀಯ ಮಧ್ಯವರ್ತಿಗಳು ಗುಂಪುಗಟ್ಟಿ ನಿಲ್ಲುತ್ತಿದ್ದಾರೆ. ಪಕ್ಕದಲ್ಲೇ ಪೊಲೀಸರಿದ್ದರೂ ಸಹ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ವಂತೆ.
ಕೇರಳದಲ್ಲಿ ಈಗಾಗಲೇ ಸೋಂಕಿತರು ಹೆಚ್ಚಿದ್ದಾರೆ. ಈ ಭಾಗಕ್ಕೆ ಗುಂಡ್ಲುಪೇಟೆ ತಾಲೂಕಿನಿಂದ 60 ವಾಹನಗಳಲ್ಲಿ ತರಕಾರಿ ಸರಬರಾಜು ಮಾಡುತ್ತಾರೆ. ಕೇರಳದ ಭಾಗದಿಂದ ಬರುವ ವಾಹನಗಳ ಚಾಲಕರನ್ನು ಸಹ ಆರೋಗ್ಯ ಇಲಾಖೆ ಸಿಬ್ಬಂದಿ ಸರಿಯಾದ ಕ್ರಮದಲ್ಲಿ ತಪಾಸಣೆ ಮಾಡುತ್ತಿಲ್ಲ. ಯಾರಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲನೆಗೆ ಬಂದ್ರೆ ಮಾತ್ರ ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತರಾಗಿರುತ್ತಾರೆ. ಇಲ್ಲದಿದ್ರೆ ವೈದ್ಯರು 11 ಗಂಟೆಗೆ ಹೋಗಿ 3 ಗಂಟೆಗೆ ವಾಪಸ್ ಬರುತ್ತಾರೆ. ಪ್ರತಿದಿನ ಎರಡು ರಾಜ್ಯದ 120 ಜನ ಸಂಚಾರ ಮಾಡುತ್ತಾರೆ. ಇವರಿಂದ ಏನಾದರೂ ಸೋಂಕು ಹರಡಿದರೆ ಯಾರು ಜವಾಬ್ದಾರಿ?. ಹಾಗಾಗಿ ಸರಿಯಾಗಿ ತಪಾಸಣೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.