ಕೊಳ್ಳೇಗಾಲ (ಚಾಮರಾಜನಗರ): ನರೇಗಾ ಯೋಜನೆ ಕೊರೊನಾ ಪರಿಸ್ಥಿತಿಯಲ್ಲಿ ಕಾರ್ಮಿಕರ ನೆರವಾಗಿದೆ. ಸಾಮಾಜಿಕ ಮತ್ತು ಶಾರೀರಿಕ ಅಂತರ ಬಳಸಿಕೊಂಡು ಲಕ್ಷಾಂತರ ಕಾರ್ಮಿಕರು ನರೇಗಾ ಸದ್ಬಳಕೆ ಮಾಡಿಕೊಂಡರು. ನರೇಗಾ ಉದ್ಯೋಗ ಒದಗಿಸುವುದರಲ್ಲಿ ಚಾಮರಾಜನಗರ ರಾಜ್ಯದಲ್ಲಿ 7 ಸ್ಥಾನವನ್ನು ಪಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಪ್ರತಿ ಮಾದರಿ ಪಂಚಾಯತಿಯಗಳಲ್ಲಿ ಇಂಗುಗುಂಡಿ, ಮಳೆ ನೀರಿನ ಕೊಯ್ಲು, ಪೌಷ್ಠಿಕ ತೋಟ, ಸಂಜೀವಿನಿ ಶೆಡ್, ತಡೆಗೋಡೆ, ಶಾಲೆಗಳಲ್ಲಿ ಆಟದ ಮೈದಾನ ಮಾಡ ಹೊರಟಿರುವುದು ಉತ್ತಮವಾದ ಕೆಲಸವಾಗಿದೆ. ಇದರಿಂದ ಅಂತರ್ಜಲ ಅಭಿವೃದ್ಧಿಯಾಗುತ್ತದೆ. ಶಾಲಾ ಮಕ್ಕಳಿಗೂ ಅರಿವು ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 86,149 ಕುಟುಂಬಗಳ 1,48,166 ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ. ಕೊರೊನಾ ಸಂದಿಗ್ಧತೆಯಲ್ಲಿ ನರೇಗಾ ಆಸರೆಯಾಗಿದೆ. ನರೇಗಾದಲ್ಲಿ ರಾಜ್ಯದಲ್ಲೇ 7 ಸ್ಥಾನವನ್ನು ಚಾಮರಾಜನಗರ ಪಡೆದಿದೆ. ಮುಂದೆ ಕೂಡ ಒಳ್ಖೇಯ ಸಾಧನೆ ಪಡೆದು, ರಾಜ್ಯಕ್ಕೆ ಪ್ರಥಮವಾಗಬೇಕು ಎಂದು ಆಶಿಸಿದರು.