ETV Bharat / state

ಚಾಮರಾಜನಗರದಲ್ಲಿ ಬೌದ್ಧ ಧರ್ಮ ಅಪ್ಪಿದ ಮುಸ್ಲಿಂ ವ್ಯಕ್ತಿ ! - chamarajanagar Muslim man accepted the buddisim

ತೆಲಂಗಾಣದ ಹೈದರಾಬಾದ್ ನಿವಾಸಿ ಶಹವನಾಜ್ ಆಲಿ ಎಂಬುವರು ಬುದ್ಧನ ಪಂಚಶೀಲತತ್ವಗಳಿಗೆ ಆಕರ್ಷಿತರಾಗಿ ಬಂತೇ ಭೋಧಿದತ್ತ ಅವರ ಸಮ್ಮುಖದಲ್ಲಿ ಬೌದ್ಧ ಭಿಕ್ಕು ದೀಕ್ಷೆ ಪಡೆದರು.

ಬೌದ್ಧ ಧರ್ಮ ಅಪ್ಪಿದ ಮುಸ್ಲಿಂ ವ್ಯಕ್ತಿ
ಬೌದ್ಧ ಧರ್ಮ ಅಪ್ಪಿದ ಮುಸ್ಲಿಂ ವ್ಯಕ್ತಿ
author img

By

Published : Oct 14, 2020, 8:06 PM IST

ಚಾಮರಾಜನಗರ: ಮುಸ್ಲಿಂ ವ್ಯಕ್ತಿಯೊಬ್ಬರು ಇಂದು ನಗರದ ನಳಂದ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ, ಭಿಕ್ಕು ದೀಕ್ಷೆ ಪಡೆದರು.

ತೆಲಂಗಾಣದ ಹೈದರಾಬಾದ್ ನಿವಾಸಿ ಶಹವನಾಜ್ ಆಲಿ (40) ಎಂಬುವರು ಬುದ್ಧನ ಪಂಚಶೀಲತತ್ವಗಳಿಗೆ ಆಕರ್ಷಿತರಾಗಿ ಬಂತೇ ಭೋಧಿದತ್ತ ಅವರ ಸಮ್ಮುಖದಲ್ಲಿ ಬೌದ್ಧ ಭಿಕ್ಕು ದೀಕ್ಷೆ ಪಡೆದರು. ಧಮ್ಮ ಕ್ರಾಂತಿ ಬಂತೇಜಿಯಾಗಿ ಮರು ನಾಮಕರಣಗೊಂಡರು. ಧಮ್ಮ ಕ್ರಾಂತಿ ಬಂತೇಜಿ ಅವರು ಆಟೋಮೊಬೈಲ್ಸ್​​ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ.

ಬೌದ್ಧ ಧರ್ಮ ಅಪ್ಪಿದ ಮುಸ್ಲಿಂ ವ್ಯಕ್ತಿ
ಬೌದ್ಧ ಧರ್ಮ ಅಪ್ಪಿದ ಮುಸ್ಲಿಂ ವ್ಯಕ್ತಿ

ಈ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಳೆದ 10 ವರ್ಷದಿಂದ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದೆ. 5 ವರ್ಷದ ಹಿಂದೆ ನಾಗಪುರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಧಮ್ಮ ದೀಕ್ಷೆ ಸ್ಥಳಕ್ಕೆ ಭೇಟಿ ನೀಡಿ ನಾನು ಗಡ್ಡವನ್ನು ತೆಗೆದೆ, ಅಂದಿನಿಂದಲೇ ಧ್ಯಾನವನ್ನು ಅಭ್ಯಸಿಸುತ್ತಿದ್ದೇನೆ. ನನ್ನ ಬೌದ್ಧ ಧರ್ಮ ಸ್ವೀಕಾರಕ್ಕೆ ಯಾರದೇ ವಿರೋಧವಿದ್ದರೂ ನನಗೆ ಭಯವಿಲ್ಲ, ಸಂವಿಧಾನಕ್ಕಾಗಿ, ಸಮಾಜಕ್ಕಾಗಿ ಜೀವನದಲ್ಲಿ ಶಾಂತಿ ಬಯಸಿ ಭಿಕ್ಕುವಾಗಿದ್ದೇನೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.