ETV Bharat / state

ಮಹಾಮಾರಿಯ ಆರ್ಭಟಕ್ಕೆ ತಾಯಿ - ಮಗ ಬಲಿ: ಮನೆ ಸ್ಯಾನಿಟೈಸ್​ ಆಗಿಲ್ಲ ಎಂದು ಆತಂಕಗೊಂಡ ಜನ! - kollegala corona news 2021

ಕೊಳ್ಳೇಗಾಲ ಪಟ್ಟಣದ ದಕ್ಷಿಣ ಬಡಾವಣೆಯಲ್ಲಿ ತಾಯಿ ಹಾಗೂ ಮಗ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

corona
ಕೊರೊನಾ
author img

By

Published : Apr 29, 2021, 10:10 PM IST

ಕೊಳ್ಳೇಗಾಲ: ಪಟ್ಟಣದಲ್ಲಿ ಒಂದೇ ದಿನ ತಾಯಿ ಹಾಗೂ ಮಗನನ್ನು ಮಾರಕ ಕೊರೊನಾ ಸೋಂಕು ಬಲಿ ಪಡೆದಿದೆ.

ಪಟ್ಟಣದ ದಕ್ಷಿಣ ಬಡಾವಣೆಯ ನಿವಾಸಿಯಾದ ಮಹಿಳೆ (ತಾಯಿ,65) ‌ವ್ಯಕ್ತಿಯೊರ್ವ (ಮಗ, 47) ಕೊರೊನಾದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಆದರಿಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಕೊರೊನಾದಿಂದಾಗಿ ಕುಟುಂಬದ ಮೂರು ಸದಸ್ಯರು ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ದುರಾದೃಷ್ಟವಶಾತ್ ತಾಯಿ, ಮಗನನ್ನು ಕೊರೊನಾ ಬಲಿ ತೆಗೆದುಕೊಂಡಿದೆ. ಕುಟುಂಬದ ಮತ್ತೋರ್ವ ಸದಸ್ಯ ( ತಂದೆ) ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ವಾಪಸ್​ ತೆರಳಿದ್ದಾರೆ.

ನಿನ್ನೆ ಇಲ್ಲಿನ ಸರ್ಕಾರಿ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೊರೊನಾದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ಇಂದು ಇನ್ನಿಬ್ಬರು ವೈರಸ್​ಗೆ ಬಲಿಯಾಗಿದ್ದಾರೆ. ಇಷ್ಟಾದರೂ ಮೃತಪಟ್ಟವರ ಮನೆ ಸ್ಯಾನಿಟೈಸ್ ಮಾಡದೇ ಸ್ಥಳೀಯ ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದು, ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಓದಿ: ಮಂಡ್ಯ ಜಿಲ್ಲೆಯ ಈ ಊರಲ್ಲಿ 25 ಜನರಿಗೆ ಸೋಂಕು ದೃಢ : ಗ್ರಾಮಕ್ಕೇ ದಿಗ್ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.