ಚಾಮರಾಜನಗರ: ಪೂಜೆಗೆ ಹೋಗುವುದಾಗಿ ತೆರಳಿ ಮನೆಯಿಂದ ಬಂದ ಗೃಹಿಣಿ ತನ್ನ ಮಗುವಿನೊಂದಿಗೆ ಶವವಾಗಿ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಪಾಳ್ಯ ಗ್ರಾಮದ ಸಂಗೀತಾ(23) ಹಾಗೂ ಮೂರು ವರ್ಷದ ಮಗ ಕರಣ್ ಮೃತ ದುರ್ದೈವಿಗಳಾಗಿದ್ದಾರೆ.
ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದಾಗಿ ತೆರಳಿದ ತಾಯಿ ಹಾಗೂ ಮಗು, ಗ್ರಾಮದ ಸಮೀಪದ ಗೀರನ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವೃತ್ತ ನಿರೀಕ್ಷಕ ಶ್ರೀಕಾಂತ್ ಮತ್ತು ಪಿಎಸ್ಐ ವಿ. ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.