ಕೊಳ್ಳೆಗಾಲ (ಚಾಮರಾಜನಗರ): ಲಾಕ್ಡೌನ್ ಹಿನ್ನೆಲೆ ಜನರು ಮನೆಯಿಂದ ಸುಖಾಸುಮ್ಮನೆ ಹೊರ ಬರುತ್ತಿರುವ ಹಿನ್ನೆಲೆ ಶಾಸಕ ಎನ್.ಮಹೇಶ್ ಕೈ ಮುಗಿದು ಜನರಿಗೆ ಮನವಿ ಮಾಡಿದ್ದಾರೆ.
ದೇಶಾದ್ಯಂತ ಕೇಂದ್ರ, ರಾಜ್ಯ ಸರ್ಕಾರ ಕೊರೊನಾ ವಿರುದ್ಧ ಸಮರ ಸಾರಿವೆ. ಜಿಲ್ಲಾಡಳಿತ ಲಾಕ್ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮವಹಿಸಿದ್ದರೂ ಅನಗತ್ಯವಾಗಿ ಜನರು ಬೀದಿಗೆ ಬರುತ್ತಿದ್ದಾರೆ. ದಯಮಾಡಿ ಮನೆಯಿಂದ ಹೊರ ಬರಬೇಡಿ ಎಂದು ಶಾಸಕ ಎನ್.ಮಹೇಶ್ ಕೈ ಮುಗಿದು ಮನವಿ ಮಾಡಿದ್ದಾರೆ.