ಕೊಳ್ಳೇಗಾಲ : ದೇಶದ ಬೆನ್ನಲುಬಾದ ರೈತರು ಗಣರಾಜ್ಯೋತ್ಸವ ದಿನದಂದು ರಸ್ತೆಗಿಳಿದು ನ್ಯಾಯ ಕೊಡಿಸಿ ಎಂದು ಪ್ರತಿಭಟನೆ ಮಾಡುತ್ತಿರುವುದು ಈ ದೇಶದ ದುರಂತ ಎಂದು ಶಾಸಕ ನರೇಂದ್ರ ಹೇಳಿದ್ರು.
ಕೊರೊನಾ ಮಾರಿಯ ವಿರುದ್ಧ ಹೋರಾಡಲು ನಮ್ಮ ದೇಶ ಕಂಡು ಹಿಡಿದ ವ್ಯಾಕ್ಸಿನೇಷನ್ಗೆ ಪ್ರಂಪಂಚದಲ್ಲಿ ಹೆಚ್ವಿನ ಬೇಡಿಕೆ ಇದೆ. ಅಂತಹ ವಿಜ್ಞಾನಿಗಳು, ವೈದ್ಯರು ಹಾಗೂ ಸಂಶೋಧನೆಯ ವ್ಯವಸ್ಥೆ ನಮ್ಮಲಿದೆ.
ಇದು ದೇಶದ ಹಿರಿಮೆ. ಆದ್ರೆ, ಸಂವಿಧಾನ ದಿನದಂದು ರೈತರು ಪ್ರತಿಭಟನೆಗಿಳಿಯುವ ಪರಿಸ್ಥಿತಿ ಬರಬಾರದಿತ್ತು. ಸರ್ಕಾರ ದೇಶದ ರೈತರ ಹಿತರಕ್ಷಣೆಗೆ ಪೂರಕವಾದ, ರೈತರು ಒಪ್ಪುವ ಕಾಯ್ದೆ ಹಾಗೂ ಕಾನೂನುಗಳನ್ನು ಜಾರಿಗೆ ತರುವುದು ಒಳಿತು ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ದಶಕ ಕಳೆಯಿತು. ಸಂವಿಧಾನ ಜಾರಿಗೆಯಾಗಿ 72 ವರ್ಷವಾಯಿತು, ಆದರೆ ದೇಶದಲ್ಲಿ ರಾಜಕೀಯ ಸಮಾನತೆ ಪ್ರಜೆಗಳಿಗೆ ಸಿಕ್ಕಿದೆಯೇ ಹೊರತು, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಿಕ್ಕಿಲ್ಲ ಎಂದರು.