ETV Bharat / state

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಧರ್ಮಪತ್ನಿ ನಿಧನ

ಕೊಳ್ಳೇಗಾಲ ಶಾಸಕ ಎನ್.ನ್.ಮಹೇಶ್ ಧರ್ಮಪತ್ನಿ ಭಾನುವಾರ ನಿಧನರಾಗಿದ್ದಾರೆ.

author img

By

Published : Sep 6, 2021, 7:13 AM IST

Updated : Sep 6, 2021, 7:55 AM IST

mla-n-mahesh-wife-passed-away
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಧರ್ಮಪತ್ನಿ ವಿಜಯ ಮಹೇಶ್ ನಿಧನ

ಕೊಳ್ಳೇಗಾಲ: ಶಾಸಕ ಎನ್.ನ್.ಮಹೇಶ್ ಧರ್ಮಪತ್ನಿ ವಿಜಯಾ ಮಹೇಶ್​ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ವಿಜಯಾ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ತಡರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಬೆಂಗಳೂರಿನ ಜೆ.ಪಿ ನಗರದ ಆರ್.ವಿ ಆಸ್ಟರ್ ಆಸ್ಪತ್ರೆಯಲ್ಲಿ ಅವರು ಕೊನೆ ಉಸಿರೆಳೆದಿದ್ದಾರೆ.

ವಿಜಯಾ ಅವರು ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿ, ಆರ್.ವಿ ಅಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ದಿನಗಳ ಹಿಂದಷ್ಟೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಐಸಿಯು ವಾರ್ಡ್​​ನಿಂದ ಜನರಲ್ ವಾರ್ಡ್​​ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಭಾನುವಾರ ತಡರಾತ್ರಿ 12.30ರ ವೇಳೆಗೆ ಮತ್ತೆ ತೀವ್ರ ಏರುಪೇರಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.

mla-n-mahesh-wife-passed-away
ವಿಜಯಾ ಮಹೇಶ್

ಅಪೆಕ್ಸ್ ಬ್ಯಾಂಕ್​ನ ಮ್ಯಾನೇಜರ್ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ವಿಜಯಾ, ಬಹುಜನ ಚಳವಳಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಹಿತ್ಯ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಸಾಕಷ್ಟು ಪುಸ್ತಕ ಹಾಗೂ ಲೇಖನಗಳನ್ನು ಬರೆದಿದ್ದಾರೆ.

ಮೃತರು ಪತಿ ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಇಂದು ಕನಕಪುರದಲ್ಲಿನ ಕಾನ್ಸಿ ಫೌಂಡೇಶನ್​​ನಲ್ಲಿ ವಿಜಯಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಏಷ್ಯನ್ ಎಂಎಎ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಗರಿ.. ಕಿಶೋರ್​​ಗೆ ಗ್ರಾಮಸ್ಥರಿಂದ ಅದ್ಧೂರಿ ಸನ್ಮಾನ

Last Updated : Sep 6, 2021, 7:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.