ಚಾಮರಾಜನಗರ: ಸ್ನೇಹಿತರನ್ನು ನೋಡಿ ಬರುವುದಾಗಿ ತೆರಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಇಂದು ಕೊಳ್ಳೇಗಾಲ ತಾಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ಪತ್ತೆಯಾಗಿದ್ದಾನೆ.
ಗ್ರಾಮದ ನಂಜುಂಡಸ್ವಾಮಿ ಎಂಬುವರ ಮಗ ಸ್ವಾಮಿ (14) ಮೃತ ಬಾಲಕ. ಈತ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಶಾಲೆಯಲ್ಲಿ SSLC ಓದುತ್ತಿದ್ದು, ಕಳೆದ 16ರಂದು ಶಾಲೆಯಿಂದ ಮನೆಗೆ ಬಂದು ಸ್ನೇಹಿತರನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿ ನಾಪತ್ತೆಯಾಗಿದ್ದ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಸ್ನೇಹಿತರ ನೋಡಿ ಬರುವುದಾಗಿ ಹೋದ ಬಾಲಕ ನಾಪತ್ತೆ
ಇಂದು ಸಿಂಗಾನಲ್ಲೂರು ಗ್ರಾಮದ ಹೊರ ವಲಯದಲ್ಲಿರುವ ರಾಮೇಗೌಡ ತೋಟದ ಜಮೀನಿನ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿಗೆ ಕಾರಣ ನಿಗೂಢವಾಗಿದೆ.