ಚಾಮರಾಜನಗರ: ಒಬ್ಬ ಮನುಷ್ಯನಿಗೆ 5 ಕೆಜಿ ಅಕ್ಕಿ ಸಾಕು ಎಂದು ನೀಡಿದ್ದ ಹೇಳಿಕೆಯನ್ನು ಆಹಾರ ಸಚಿವ ಉಮೇಶ್ ಕತ್ತಿ ಸಮರ್ಥಿಸಿಕೊಂಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಕೆ.ಗುಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಮನುಷ್ಯನ ಲೆಕ್ಕದಲ್ಲಿ 5 ಕೆಜಿ ಅಕ್ಕಿ ಸಾಕು. ಊಟ ಮಾಡಿ ಬದುಕಲು 5 ಕೆಜಿ ಮನುಷ್ಯ ಪ್ರಾಣಿಗೆ ಸಾಕು ಎಂಬ ಹೇಳಿಕೆಯನ್ನು ವಾಪಸ್ ಪಡೆಯಲ್ಲ ಎಂದಿದ್ದಾರೆ.
10 ಕೆಜಿ ಅಕ್ಕಿ ಕೊಡ್ತೀನಿ ಅಂತ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಾನೆ. ಇದು ಸಿಎಂ ಆದ ಬಳಿಕ ಕೊಡುತ್ತಾನೆ. ಈ ಹಿಂದೆ ಮುಖ್ಯಮಂತ್ರಿ ಆದಾಗ ಯಾಕೆ ಕೊಡಲಿಲ್ಲ. ಮೊದಲು 5 ಕೆಜಿ ಕೊಟ್ಟ ಆಮೇಲೆ 7 ಕೆ.ಜಿ ಮಾಡಿದ. ಮತ್ತೆ ಒಂದು ಕೆಜಿ ಕಳೆದ ಎಂದು ಏಕವಚನದಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಕೆ.ಗುಡಿಯಲ್ಲಿ ನಿರ್ಬಂಧ ನಡುವೆಯೂ ವಾರಾಂತ್ಯದ ಸಫಾರಿ ನಡೆದಿರುವುದು, ಬೂದಿಪಡಗ ಗೆಸ್ಟ್ ಹೌಸ್ನಲ್ಲಿ ಸಂಬಂಧಿಕರೊಂದಿಗೆ ಉಪ ವಲಯ ಅರಣ್ಯಾಧಿಕಾರಿ ಒಬ್ಬರು ಕ್ರಿಕೆಟ್ ಆಡಿದ ಬಗೆಗಿನ ಪ್ರಶ್ನೆಗೆ ಮಾಹಿತಿ ಇಲ್ಲ. ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹಾರಿಕೆ ಉತ್ತರ ಕೊಟ್ಟರು.
ಓದಿ: ಮೈಸೂರಿನಲ್ಲಿ ರೇಪ್ ಆದರೆ ನನ್ನನ್ನು ಯಾಕೆ ಕೇಳ್ತಿರಪ್ಪೋ: ಜಿ.ಎಂ. ಸಿದ್ದೇಶ್ವರ್