ಚಾಮರಾಜನಗರ : ಹಿಜಾಬ್ ವಿವಾದದ ಬಗ್ಗೆ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಅಗತ್ಯವಿಲ್ಲ ಎಂದು ಹಾಲಪ್ಪ ಆಚಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯೊಳಗೆ ಹಿಜಾಬ್ ಅಗತ್ಯವಿಲ್ಲ. ಹಿಜಾಬ್ ಸಂಬಂಧ ಈ ಮಟ್ಟಿಗೆ ಸಮಸ್ಯೆ ಉದ್ಭವಿಸುವುದು ತರವಲ್ಲ. ಖಾಸಗಿ ಶಾಲಾ ಮಂಡಳಿಗಳು, ಸರ್ಕಾರಿ ಶಾಲೆಗಳಲ್ಲಿ ಅದರ ಮುಖ್ಯಸ್ಥರು ಈ ಬಗ್ಗೆ ಕ್ರಮ ವಹಿಸಬೇಕು ಎಂದರು.
ಹಿಜಾಬ್ ಬಗ್ಗೆ ನಡೆಯುತ್ತಿರುವ ಗಲಾಟೆ ಅನವಶ್ಯಕ. ನಮ್ಮ ಮಕ್ಕಳನ್ನು ಸಂಸ್ಕಾರ ಕಲಿಯಲೆಂದು ಶಾಲೆಗೆ ಕಲಿಸುತ್ತೇವೆ. ಶಾಲೆ ಎಂದರೆ ಶಿಸ್ತು ಇರಬೇಕು. ಶಾಲೆಗೆ ಅದರದ್ದೇ ಆದ ನಿಯಮ-ಕಟ್ಟುಪಾಡು ಇರಲಿದೆ. ಶಿಕ್ಷಣ ಇಲಾಖೆಯ ಸಚಿವರು ಸಮರ್ಥರಿದ್ದಾರೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಲಿದ್ದಾರೆ ಎಂದರು.
ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ಧರಿಸದಂತೆ ವಿದ್ಯಾರ್ಥಿಗಳಿಗೆ ಶಾಸಕ ಎಂ ಪಿ ರೇಣುಕಾಚಾರ್ಯ ಮನವಿ
ಸಿಎಂ ದೆಹಲಿ ಪ್ರವಾಸ ಸಂಬಂಧ ಪ್ರತಿಕ್ರಿಯಿಸಿ, ರಾಜ್ಯ ಬಜೆಟ್ ಮಂಡಿಸಬೇಕಿರುವ ವಿಚಾರದ ಜೊತೆಗೆ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಲಷ್ಟೇ ದೆಹಲಿಗೆ ಭೇಟಿ ನೀಡುತ್ತಿದ್ದಾರೆ ಎಂದರು. ಇನ್ನು ಸಿಎಂ ಬದಲಾವಣೆ ಎಂಬುದು ಕೇವಲ ಊಹಾಪೋಹ ಎಂದು ಹೇಳಿದರು.