ಚಾಮರಾಜನಗರ : ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಹುತಾತ್ಮರಾಗಿ ಇಂದಿಗೆ 29 ವರ್ಷವಾದ ಹಿನ್ನೆಲೆಯಲ್ಲಿ ಹನೂರು ತಾಲೂಕಿನ ಗೋಪಿನಾಥಂನಲ್ಲಿ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.
ಶ್ರೀನಿವಾಸ್ ನೆರವಿನಲ್ಲಿ ನಿರ್ಮಾಣಗೊಂಡಿರುವ ಮಾರಿಯಮ್ಮ ದೇಗುಲದಲ್ಲಿ ಗ್ರಾಮಸ್ಥರೆಲ್ಲರೂ ಜಮಾಯಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಸಲ್ಲಿಸಿದರು. ಮಲೆಮಹದೇಶ್ವರ ವನ್ಯಜೀವಿಧಾಮ ಡಿಎಫ್ಒ ಏಡುಕುಂಡಲು, ಕಾವೇರಿ ವನ್ಯಜೀವಿಧಾಮದ ಡಿಎಫ್ಒ ರಮೇಶ್ ಹಾಜರಿದ್ದರು.
ವೀರಪ್ಪನ್ ಶರಣಾಗುತ್ತೇನೆಂದು ಸಂಚು ಮಾಡಿ ಡಿಸಿಎಫ್ ಶ್ರೀನಿವಾಸ್ ಅವರನ್ನು 1991ರ ನವೆಂಬರ್ 10ರಂದು ಗೋಪಿನಾಥಂನಿಂದ ಅಣತಿ ದೂರದ ನಲ್ಲೂರು ಬಳಿ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ.
ಅಪ್ಪಟ ಗಾಂಧಿವಾಗಿದ್ದ ಶ್ರೀನಿವಾಸ್ ಗೋಪಿನಾಥಂ ಜನರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು, ಮಾರಿಯಮ್ಮ ದೇಗುಲ ನಿರ್ಮಿಸಿ ಕೊಟ್ಟಿದ್ದು, ಇಂದಿಗೂ ಅವರ ಫೋಟೋ ಗ್ರಾಮದ ಪ್ರತಿಯೊಬ್ಬರ ಮನೆಗಳಲ್ಲೂ ಇದೆ. ದೇವಾಲಯದಲ್ಲಿ ಶ್ರೀನಿವಾಸ್ ಅವರಿಗೇ ಪ್ರಥಮ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.