ಚಾಮರಾಜನಗರ: ಬೈಕ್ನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳಬೆಟ್ಟ ಸಮೀಪ ನಡೆದಿದೆ.
![ಬೈಕ್ನಲ್ಲಿ ಕುಳಿತ ರೀತಿ ವ್ಯಕ್ತಿಯ ಶವ ಪತ್ತೆ](https://etvbharatimages.akamaized.net/etvbharat/prod-images/7775555_bngjpg.jpg)
ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರದ ನೌಕರ ಮಹಾದೇವಸ್ವಾಮಿ(28) ಕೊಲೆಗೀಡಾಗಿರುವ ನೌಕರ. ಈತ ಕಾವೇರಿ ಪಂಪ್ ಹೌಸ್ನಲ್ಲಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ನಂಜನಗೂಡು ತಾಲೂಕಿನ ತೆಳ್ಳನೂರಿನ ಪತ್ನಿ ಮನೆಗೆ ಹೊರಟಿದ್ದ ಎನ್ನಲಾಗ್ತಿದೆ. ಪೊಲೀಸರ ಪ್ರಕಾರ ಹಳೇ ದ್ವೇಷದಿಂದ ದುಷ್ಕರ್ಮಿಗಳು ಅಡ್ಡಗಟ್ಟಿ ತಲೆಗೆ ಹೊಡೆದು ಕೊಂದಿದ್ದಾರೆ. ಹೊಡೆತದ ರಭಸಕ್ಕೆ ರಕ್ತಸ್ರಾವವಾಗಿ ಬೈಕಿನಲ್ಲಿ ಕುಳಿತ ಸ್ಥಿತಿಯಲ್ಲೇ ಪ್ರಾಣ ಬಿಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ಸದ್ಯ, ಮೃತನ ಸಹೋದರ ಮಹೇಶ್ ದೂರು ನೀಡಿದ್ದಾನೆ. ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.