ETV Bharat / state

ಪತ್ನಿಯನ್ನೇ ಕೊಂದ ಪತಿ: ಅಪ್ಪನ ವಿರುದ್ಧ ಸಾಕ್ಷ್ಯ ಹೇಳಿದ 8ರ ಬಾಲಕಿ - ಜೀವಾವಧಿ ಶಿಕ್ಷೆ

ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಗ್ರಾಮದಲ್ಲಿ ಗಂಡನೇ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಚಾಮರಾಜನಗರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (District and Sessions Court) ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

court
court
author img

By

Published : Nov 11, 2021, 1:19 PM IST

ಚಾಮರಾಜನಗರ: ಗಿರವಿ ಇಟ್ಟಿದ್ದ ಚಿನ್ನದ ನೆಕ್​ಲೆಸ್ ಅನ್ನು ಬಿಡಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯನ್ನೇ ಕೊಲೆ ಮಾಡಿದ್ದ ಪತಿಗೆ ಚಾಮರಾಜನಗರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (District and Sessions Court) ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಗ್ರಾಮದ ತೊಳಚನಾಯಕ ಎಂಬಾತ ಶಿಕ್ಷೆಗೊಳಗಾದ ಅಪರಾಧಿ‌. ತಾಯಿ ಪುಷ್ಪಾಬಾಯಿ ಕೊಲೆ ಮಾಡಿರುವುದನ್ನ ನೋಡಿದ್ದ 8 ವರ್ಷದ ಮಗಳು, ಅಪ್ಪನ ವಿರುದ್ಧ ಸಾಕ್ಷ್ಯ ನುಡಿದು ಶಿಕ್ಷೆಯಾಗುವಂತೆ ಮಾಡಿದ್ದಾಳೆ.

ಏನಿದು ಪ್ರಕರಣ? :

ಪುಷ್ಪಬಾಯಿ ಅವರನ್ನು ತೊಳಚನಾಯಕಗೆ ಮದುವೆ ಮಾಡಿಕೊಡುವ ಸಂದರ್ಭದಲ್ಲಿ ಆಕೆಯ ಮಾವಂದಿರು 20 ಗ್ರಾಂ ತೂಕದ ಚಿನ್ನದ ನೆಕ್‌ಲೆಸ್‌ ನೀಡಿದ್ದರು. ತೊಳಚನಾಯಕನ ಸಹೋದರನೊಬ್ಬ ಬೈಕ್‌ ಅನ್ನು ಆಟೋರಿಕ್ಷಾವೊಂದಕ್ಕೆ ಗುದ್ದಿಸಿದ್ದ ಪ್ರಕರಣದಲ್ಲಿ ನ್ಯಾಯ ತೀರ್ಮಾನ ಮಾಡಿದ್ದ ಗ್ರಾಮದ ಯಜಮಾನರು, ಆಟೋ ದುರಸ್ತಿಗೆ ದಂಡಕಟ್ಟುವಂತೆ ಹೇಳಿದ್ದರು. ದಂಡದ ಹಣಕ್ಕಾಗಿ ತೊಳಚನಾಯಕ ತನ್ನ ಪತ್ನಿಯ ಬಳಿಯಿದ್ದ ನೆಕ್‌ಲೆಸ್‌ ಅಡವಿಟ್ಟು ದುಡ್ಡು ತಂದಿದ್ದ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ; ಬಿಟ್ ಕಾಯಿನ್ ಹಗರಣದ ಕುರಿತು ನಮೋಗೆ ಮಾಹಿತಿ?

ಇನ್ನು ಅಡವಿಟ್ಟ ನೆಕ್‌ಲೆಸ್‌ ಬಿಡಿಸಿ ಕೊಡುವಂತೆ ಪುಷ್ಪಬಾಯಿ ಪದೇ ಪದೆ ಹೇಳುತ್ತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ತೊಳಚನಾಯಕ ಹಾಗೂ ಮನೆಯವರು, ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಈ ವಿಚಾರಕ್ಕೆ ತೊಳಚನಾಯಕ ಹಾಗೂ ಪುಷ್ಪಬಾಯಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. 2017ರ ಮಾರ್ಚ್ 27 ರಂದು ಗಲಾಟೆ ವಿಕೋಪಕ್ಕೆ ತಿರುಗಿ ಕೊಡಲಿಯಿಂದ ಪತ್ನಿಯನ್ನು ಹೊಡೆದು ಕೊಂದಿದ್ದ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: VIDEO: ಚೆನ್ನೈನಲ್ಲಿ ಮುಂದುವರಿದ ಮಳೆಯಾರ್ಭಟ.. ತಗ್ಗು ಪ್ರದೇಶಗಳು ಜಲಾವೃತ

ವಾದ - ಪ್ರತಿ ವಾದ ಆಲಿಸಿದ ನ್ಯಾ. ಲೋಕಪ್ಪ ಅವರು, ಆರೋಪಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಜೊತೆಗೆ ಮಗಳು ಅಂದು ನಡೆದ ಘಟನೆಯನ್ನು ವಿವರಿಸಿದ್ದನ್ನು ಪರಿಗಣಿಸಿ ತೊಳಚನಾಯಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಎಂ.ಎಸ್.ಉಷಾ ವಾದ ಮಂಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.