ಚಾಮರಾಜನಗರ: ರಾಜ್ಯದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ಅಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡು ರಾತ್ರೋರಾತ್ರಿ ಮನೆಯೊಂದನ್ನು ಖಾಲಿ ಮಾಡಿಸಿರುವ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಕೆಲಸ ಮಾಡುತ್ತಿದ್ದ ಜಯಸ್ವಾಮಿ ಕುಟುಂಬಸ್ಥರು ಇದ್ದ ಮನೆಯನ್ನು ನಿನ್ನೆ ರಾತ್ರಿ ಖಾಲಿ ಮಾಡಿಸಿದ್ದು, ಸೂರಿಲ್ಲದೇ ಕುಟುಂಬ ಬೀದಿಗೆ ಬಿದ್ದಿದೆ. ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ವಿರುದ್ಧ ಜಯಸ್ವಾಮಿ ಕುಟುಂಬ ಸೇರಿದಂತೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಮನೆ ಖಾಲಿ ಮಾಡಿಸಿದ್ದು ಏಕೆ?
ಜಯಸ್ವಾಮಿ ಅವರು ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ನಿಧನರಾದ ಹಿನ್ನೆಲೆ ಅವರ ಕುಟುಂಬ ವಾಸವಿದ್ದ ಈ ಮನೆಯನ್ನು ಖಾಲಿ ಮಾಡುವಂತೆ ಪ್ರಾಧಿಕಾರ ನೋಟಿಸ್ ಜಾರಿಗೂಳಿಸಿತ್ತು.
ಇದನ್ನೂ ಓದಿ: ಕಬಿನಿ ಹಿನ್ನೀರಿನ ನಾಯಳ್ಳದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ ಮೃತದೇಹ ಪತ್ತೆ
ಪ್ರಾಧಿಕಾರದ ಸೂಚನೆಗೆ ವಿರೋಧ ವ್ಯಕ್ತಪಡಿಸಿದ ಜಯಸ್ವಾಮಿ ಮನೆಯವರು ವಾಸ ಮಾಡಲು ತಮಗೆ ಎಲ್ಲೂ ಸಹ ಸೂರಿಲ್ಲ. ಯಾರೂ ಸಹ ತಮಗೆ ನೆರೆವು ನೀಡುವವರಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಮನೆಯ ವಸ್ತುಗಳನ್ನೆಲ್ಲ ಬೀದಿಗೆ ಹಾಕಿ ಮನೆ ಖಾಲಿ ಮಾಡಿಸಿದ್ದು, ಕುಟುಂಬ ಸದ್ಯ ಬೀದಿಗೆ ಬಿದ್ದಿದೆ.