ಗುಂಡ್ಲುಪೇಟೆ: ಅಂಬೇಡ್ಕರ್ ಮನೆ ಮತ್ತು ಗ್ರಂಥಾಲಯ ದ್ವಂಸ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿವಿಎಸ್ ಮುಖಂಡರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಬಿವಿಎಸ್ ನ ಜಿಲ್ಲಾ ಉಪಾಧ್ಯಕ್ಷ ಜೆ. ಸ್ವಾಮಿ ಮಾತನಾಡಿ, ಮಹಾರಾಷ್ಟ್ರದ ದಾದರ್ನಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಾಸವಾಗಿದ್ದ ಮನೆ ರಾಜಗೃಹ ಮತ್ತು ಅವರ ಗ್ರಂಥಾಲಯವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಇದು ಪೂರ್ವಗ್ರಹ ಪೀಡಿತವಾಗಿದ್ದು, ಉದ್ದೇಶ ಪೂರ್ವಕವಾದ ಕೃತ್ಯವಾಗಿದೆ ಎಂದು ಗುಡುಗಿದರು.
ಈ ಕೃತ್ಯದ ಹಿಂದೆ ಇರುವ ಎಲ್ಲರನ್ನೂ ಬಂಧಿಸಿ ರಾಷ್ಟ್ರ ದ್ರೋಹದಡಿ ಪ್ರಕರಣ ದಾಖಲು ಮಾಡಿ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ, ಸಂಘಟನೆಯಿಂದ ಉಪ ತಹಶೀಲ್ದಾರ್ ಮೋಹನ್ ಕುಮಾರ್ ಮೂಲಕ ರಾಜ್ಯ ಪಾಲರಿಗೆ ಮನವಿ ಕಳಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲರಾದ ಮಾಧು, ಕೋಟೆಕೇರೆ ಯೋಗೇಶ್, ತಾಲೂಕು ಸಂಚಾಲಕ ಶಿವಬಸವಯ್ಯ, ಹೋರದಹಳ್ಳಿ ಶ್ರೀನಿವಾಸ್ ಪಾಳ್ಯ, ಗುತ್ತಿಗೆದಾರರು ಲೇಖಕರಾದ ನಾಗರಾಜ್, ಗೌರೀಶ್ ಮತ್ತಿತರರು ಹಾಜರಿದ್ದರು.