ETV Bharat / state

'ಲಾಕ್​ಡೌನ್​ ಮಾಡದಿದ್ದರೆ ಕೊರೊನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ' - ಸಚಿವ ಸುರೇಶ್ ಕುಮಾರ್

ಕಂಪ್ಲೀಟ್ ಲಾಕ್​ಡೌನ್​ ಪರಿಹಾರವಾದರೂ ಆದರಿಂದ ಆಗುವ ಬಾಧಕಗಳನ್ನು ಚರ್ಚಿಸಬೇಕಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

Minister  Suresh Kumar
ಸಚಿವ ಸುರೇಶ್ ಕುಮಾರ್
author img

By

Published : May 7, 2021, 1:09 PM IST

ಚಾಮರಾಜನಗರ: ಜನತಾ ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ. ಕೊರೊನಾ ಚೈನ್ ಲಿಂಕ್ ತುಂಡರಿಸಬೇಕಾದರೆ ಲಾಕ್​ಡೌನ್​ ಅನಿವಾರ್ಯ ಎಂದು ಸಚಿವ ಎಸ್​. ಸುರೇಶ್ ಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕ್ಲೋಸ್ ಡೌನ್​ನಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಹಾಗಾಗಿ, ಲಾಕ್​ಡೌನ್​ ಜಾರಿಯಾಗಬೇಕೆಂದು ಎಲ್ಲರೂ ಹೇಳುತ್ತಿದ್ದಾರೆ. ಇಂದು ಸಂಜೆ ಸಿಎಂ ಸಭೆ ಕರೆಯುತ್ತಿದ್ದಾರೆ. ಇನ್ನು ಒಂದೆರೆಡು ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ

ಕಂಪ್ಲೀಟ್ ಲಾಕ್​ಡೌನ್​ ಪರಿಹಾರವಾದರೂ ಆದರಿಂದ ಆಗುವ ಬಾಧಕಗಳನ್ನು ಚರ್ಚಿಸಬೇಕಿದೆ. ದುಡಿಮೆ ನಂಬಿರುವವರ ಬಗ್ಗೆಯೂ ಯೋಚಿಸಬೇಕಿದೆ. ಬೇರೆ ಜಿಲ್ಲೆಗಳಲ್ಲಿ ಈಗ ಲಾಕ್​ಡೌನ್​ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯ ಸ್ಥಿತಿ, ಅಂಕಿ-ಸಂಖ್ಯೆಗಳನ್ನು ಸಿಎಂ ಅವರಿಗೆ ತಿಳಿಸುತ್ತೇನೆ ಎಂದರು.

ಕಳೆದ 24 ಗಂಟೆಗಳಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 6 ಮಂದಿ ಕೊರೊನಾ ಸೋಂಕಿತರು ಹಾಗೂ ಇಬ್ಬರು ಕೊರೊನಾ ಲಕ್ಷಣಗಳಿರುವ ವ್ಯಕ್ತಿಗಳು ಸಾವವನ್ನಪ್ಪಿದ್ದಾರೆ. ವೆಂಟಿಲೇಟರ್​​ನಲ್ಲಿರುವ 26 ಮಂದಿ ವರದಿ ನೋಡಿದೆ. ವೆಂಟಿಲೇಟರ್​ನಲ್ಲಿದ್ದರೂ ಕೆಲವರ ಉಸಿರಾಟ 60,70,80 ಇದೆ.‌ ಲಕ್ಷಣ ಕಂಡು ಬಂದ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿ. ಕೊರೊನಾ ಬಂದಾಗ ಆತಂಕ ಪಡದೆ ಆತ್ಮಸ್ಥೈರ್ಯ ಇರಲಿ ಜಿಲ್ಲೆಯ ಜನರಿಗೆ ಮನವಿ ಮಾಡಿದರು.

ಸದ್ಯ ನಮ್ಮಲ್ಲಿ 200 ಜಂಬೋ ಸಿಲಿಂಡರ್, 700ಲೀ. ಲಿಕ್ವಿಡ್ ಆ್ಯಕ್ಸಿಜನ್ ಇದೆ. 100 ಸಿಲಿಂಡರ್ ಮಧ್ಯಾಹ್ನದವರೆಗೆ ಬರಲಿದೆ. ಕೆಲ ಎಂಜಿನಿಯರ್ ತಂಡ ಬರಲಿದ್ದು, ಆಮ್ಲಜನಕ ಪ್ಲಾಂಟ್ ಕೂಡ ಚೆಕ್ ಮಾಡಲಿದ್ದಾರೆ. ಸಚಿವ ಸುಧಾಕರ್ ಭರವಸೆ ಕೊಟ್ಟಂತೆ 7 ಸಾವಿರ ಲೀ. ಲಿಕ್ವಿಡ್ ಆಕ್ಸಿಜನ್ ನಮಗೆ ಕೊಡಬೇಕೆಂದು ನೋಡಲ್ ಅಧಿಕಾರಿಗೆ ಸೂಚಿಸಿರುವುದಾಗಿ ಸಚಿವ ಸುರೇಶ್​ ಕುಮಾರ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಸೋಂಕು ಕಡಿಮೆ ಆಗಬೇಕಾದರೆ ಲಾಕ್​ಡೌನ್ ಅನಿವಾರ್ಯ: ಸಚಿವ ಸುಧಾಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.