ETV Bharat / state

ಲೋಕಲ್ ಕದನ: ಸೋತರೂ ಬಂದ ಧ್ರುವ - ಗೆದ್ದರೂ ಬರಲಿಲ್ವಂತೆ ಶ್ರೀನಿವಾಸ್‌! - undefined

ಲೋಕ ಅಖಾಡದಲ್ಲಿ ಪ್ರಬಲ ಪೈಪೋಟಿ ನೀಡಿ ಕೆಲವು ಮತಗಳ ಅಂತರದಿಂದ ಸೋಲೊಪ್ಪಿಕೊಂಡ ಆರ್.ಧ್ರುವನಾರಾಯಣ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು. ಇತ್ತ ಸಂಸದರಾಗಿ ಆಯ್ಕೆಯಾಗಿರುವ ಶ್ರೀನಿವಾಸ್​ ಪ್ರಸಾದ್​ ಪ್ರಚಾರದತ್ತ ಮುಖ ಮಾಡಿಲ್ಲ.

ಧ್ರುವ
author img

By

Published : May 25, 2019, 8:04 PM IST

ಚಾಮರಾಜನಗರ: ಲೋಕಸಭೆ ಚುನಾವಣೆ ಬಳಿಕ ಲೋಕಲ್ ಫೈಟ್ ರಂಗು ಪಡೆಯುತ್ತಿದೆ. ಜಿಲ್ಲೆಯ ಹನೂರು ಮತ್ತು ಯಳಂದೂರು ಪಟ್ಟಣ ಪಂಚಾಯತಿ ಹಾಗೂ ಗುಂಡ್ಲುಪೇಟೆ ಪುರಸಭೆ ಚುನಾವಣೆ ನಡೆಯುತ್ತಿದೆ.

ಲೋಕ ಅಖಾಡದಲ್ಲಿ ಪ್ರಬಲ ಪೈಪೋಟಿ ನೀಡಿ ಕೆಲವು ಮತಗಳ ಅಂತರದಿಂದ ಸೋಲೊಪ್ಪಿಕೊಂಡ ಆರ್.ಧ್ರುವನಾರಾಯಣ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದು ಕಾಂಗ್ರೆಸ್ ಪಾಳಯಕ್ಕೆ ಹೊಸ ಹುರುಪು ನೀಡಿದಂತಾಗಿದೆ. ಪರಾಭವದ ನೋವಿನ ಛಾಯೆ ಇದ್ದರೂ ತೋರಿಸಿಕೊಳ್ಳದ ಧ್ರುವ ನಾರಾಯಣ, ಯಳಂದೂರು ಹಾಗೂ ಹನೂರಿನಲ್ಲಿ ನಗುನಗುತ್ತಲೇ ಕಾರ್ಯಕರ್ತರತ್ತ ಕೈ ಬೀಸಿ ಪ್ರಚಾರ ನಡೆಸಿ ಎಲ್ಲರ ಗಮನ ಸೆಳೆದರು.

ಲೋಕಲ್ ಕದನದ ಪ್ರಚಾರದ ರಂಗು

ಸಂಸದರಾಗಿ ಆಯ್ಕೆಯಾಗಿರುವ ಹಳೆ ಹುಲಿ ವಿ.ಶ್ರೀನಿವಾಸ್ ಪ್ರಸಾದ್ ಗೆದ್ದ ಬಳಿಕ ಜಿಲ್ಲಾಕೇಂದ್ರಕ್ಕೆ ಭೇಟಿಯಿತ್ತು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಮಾತನಾಡಿಸಲಿದ್ದಾರೆ, ಲೋಕಲ್ ಕದನದಲ್ಲಿ ಕಮಲವನ್ನು ಅರಳಿಸಲಿದ್ದಾರೆ ಎಂಬ ಆಸೆ ಹುಸಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತನ ಮಾತಾಗಿದೆ. ದೆಹಲಿಗೆ ತೆರಳಬೇಕಿದ್ದರಿಂದ ಬರಲಾಗಲಿಲ್ಲ ಎಂಬ ಸಮಜಾಯಿಷಿ ಕೇಳಿಬಂದಿದ್ದರೂ ಲೋಕಲ್ ಫೈಟ್​​ನಲ್ಲಿ ನೂತನ ಸಂಸದ ವಿ.ಶ್ರೀ ಹುರುಪು ತುಂಬಬೇಕಿದೆ ಎಂಬುದು ಬಿಜೆಪಿಗರ ಮನದಾಳ.

Intro:ಲೋಕಲ್ ಕದನ : ಸೋತರೂ ಬಂದ ಧ್ರುವ- ಗೆದ್ದರೂ ಬರದ ವಿ.ಶ್ರೀ

ಚಾಮರಾಜನಗರ: ಲೋಕ ಚುನಾವಣಾ ಬಳಿಕ ಲೋಕಲ್ ಫೈಟ್ ರಂಗು ಪಡೆಯುತ್ತಿದ್ದು ಜಿಲ್ಲೆಯ ಹನೂರು ಮತ್ತು ಯಳಂದೂರು ಪಟ್ಟಣ ಪಂಚಾಯಿತಿ ಹಾಗೂ ಗುಂಡ್ಲುಪೇಟೆ ಪುರಸಭೆ ಚುನಾವಣೆ ನಡೆಯುತ್ತಿದೆ.

Body:ಲೋಕ ಅಖಾಡದಲ್ಲಿ ಪ್ರಬಲ ಪೈಪೋಟಿ ನೀಡಿ ಕೆಲವು ಮತಗಳ ಅಂತರದಿಂದ ಸೋಲಪ್ಪಿದ್ದ ಆರ್.ಧ್ರುವನಾರಯಣ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದು ಕಾಂಗ್ರೆಸ್ ಪಾಳೆಯಕ್ಕೆ ಹೊಸ ಹುರುಪು ನೀಡಿದಂತಾಗಿದೆ.

ಪರಾಭವದ ನೋವಿನ ಛಾಯೆ ಇದ್ದರೂ ತೋರಿಸಿಕೊಳ್ಳದೇ
ಯಳಂದೂರು ಹಾಗೂ ಹನೂರಿನಲ್ಲಿ ನಗುನಗುತ್ತಲೇ ಕಾರ್ಯಕರ್ತರತ್ತ ಕೈ ಬೀಸಿ ಪ್ರಚಾರ ನಡೆಸಿ ಎಲ್ಲರ ಗಮನ ಸೆಳೆದರು.

ಇನ್ನು, ಜಿಲ್ಲೆಯಿಂದ ೬ನೇ ಬಾರಿ ಆಯ್ಕೆಯಾಗಿರುವ ಹಳೇ ಹುಲಿ ವಿ.ಶ್ರೀನಿವಾಸಪ್ರಸಾದ್ ಗೆದ್ದ ಬಳಿಕ ಜಿಲ್ಲಾಕೇಂದ್ರಕ್ಕೆ ಭೇಟಿಯಿತ್ತು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಮಾತನಾಡಿಸಲಿದ್ದಾರೆ, ಲೋಕಲ್ ಕದನದಲ್ಲಿ ಕಮಲವನ್ನು ಅರಳಿಸಲಿದ್ದಾರೆ ಎಂಬ ಆಸೆ ಹುಸಿಯಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕಾರ್ಯಕರ್ತನ ಮಾತಾಗಿದೆ. ದೆಹಲಿಗೆ ತೆರಳಬೇಕಿದ್ದರಿಂದ ಬರಲಾಗಲಿಲ್ಲ ಎಂಬ ಸಮಜಾಯಿಷಿ ಕೇಳಿಬಂದಿದ್ದರೂ ಲೋಕಲ್ ಫೈಟಿನಲ್ಲಿ ನೂತನ ಸಂಸದ ವಿ.ಶ್ರೀ ಹುರುಪು ತುಂಬಬೇಕಿದೆ ಎಂಬುದು ಬಿಜೆಪಿಗರ ಮನದಾಳ.

Conclusion:ಒಟ್ಟಿನಲ್ಲಿ ಕಡಿಮೆ ಅಂತರದಿಂದ ಸೋಲಪ್ಪಿದ್ದ ಧ್ರುವನಾರಯಣರ
ಮುಂದಿನ ನಡೆ ರಾಜ್ಯ ರಾಜಕಾರಣವೇ ಎಂಬ ಮಾತು ಕೇಳಿಬರುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.