ಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮಹದೇಶ್ವರ ಬೆಟ್ಟ ವಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಕಳೇಬರ ಪತ್ತೆಯಾಗಿದೆ.
ಚಿರತೆ ಗಂಡಾಗಿದ್ದು, ನಾಲ್ಕರಿಂದ ಐದು ವರ್ಷ ಎಂದು ಅಂದಾಜಿಸಲಾಗಿದೆ. ಚಿರತೆಯು ಮೃತಪಟ್ಟು 6-7 ದಿನಗಳ ಮೇಲಾಗಿದೆ ಎಂದು ಶಂಕಿಸಲಾಗಿದ್ದು, ಮೇಲ್ನೋಟಕ್ಕೆ ಚಿರತೆ ಸಾವು ಸ್ವಾಭಾವಿಕವಾಗಿ ಕಂಡರೂ ವಿಷಪ್ರಶನ ತಳ್ಳಿಹಾಕುವಂತಿಲ್ಲ.
ಈ ಸಂಬಂಧ ಡಿಎಫ್ಓ ಏಡುಕುಂಡಲು 'ಈಟಿವಿ ಭಾರತ್'ನೊಂದಿಗೆ ಮಾತನಾಡಿ, ಗುರುವಾರ ಚಿರತೆಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ವರದಿ ಬರುವ ತನಕ ಸಾವಿಗೆ ಕಾರಣ ಹೇಳಲಾಗುವುದಿಲ್ಲ ಎಂದಿದ್ದಾರೆ.