ಚಾಮರಾಜನಗರ: ಮೈಸೂರು ಗಡಿ ನಂಜನಗೂಡು ತಾಲೂಕಿನ ದೇವನೂರಿನ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ಚಿರತೆ ಮರಿ ಸಿಕ್ಕಿದೆ.
ಗ್ರಾಮದ ಅಣ್ಣಯ್ಯಪ್ಪ ಎಂಬುವರ ಜಮೀನಿನಲ್ಲಿ ಚಿರತೆ ಮರಿ ಸಿಕ್ಕಿದೆ. ಇದು ಅಂದಾಜು ಒಂದೆರೆಡು ವಾರಗಳ ಹಿಂದೆ ಜನಿಸಿರುವ ಮರಿ ಎನ್ನಲಾಗಿದೆ. ಕೆಲವು ದಿನಗಳಿಂದ ಗ್ರಾಮದ ಜಮೀನುಗಳಲ್ಲಿ ಆಗಾಗ ಚಿರತೆಯೊಂದು ಪ್ರತ್ಯಕ್ಷವಾಗುತ್ತಿದ್ದ ಹಿನ್ನೆಲೆ 15 ದಿನಗಳಿಂದ ಅರಣ್ಯ ಇಲಾಖೆ ಬೋನಿಟ್ಟಿತ್ತು. ಆದರೆ, ಅದು ಬೋನಿಗೆ ಬಿದ್ದಿರಲಿಲ್ಲ. ಇದೀಗ ಅದರ ಮರಿ ಸಿಕ್ಕಿದೆ.
ಚಿರತೆ ಮರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಆರೈಕೆ ಮಾಡಿದ್ದಾರೆ. ಸಂಜೆ ಬೋನಿನ ಸಮೀಪವೇ ಮರಿ ಬಿಟ್ಟು ಚಿರತೆ ಸೆರೆಗೆ ಅರಣ್ಯ ಇಲಾಖೆ ಪ್ಲಾನ್ ಮಾಡಿದೆ. ತಾಯಿ ಚಿರತೆ ಬರುತ್ತದೆಯೋ? ಇಲ್ಲವೋ? ಎಂಬುದು ರಾತ್ರಿ ವೇಳೆಗೆ ತಿಳಿಯಲಿದೆ.
ಓದಿ: ದೇಗುಲ ಪ್ರವೇಶಕ್ಕೆ ದಲಿತ ಯುವಕನಿಗೆ ತಡೆ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಳು