ETV Bharat / state

ವಿಷ ದುರಂತದ ಆರೋಪಿಗೆ ಜಮೀನು ಖಾತೆ: ಮೂವರ ತಲೆದಂಡ

ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಹೆಸರಿಗೆ ಸರ್ಕಾರಿ ನಿಯಮವನ್ನು ಗಾಳಿಗೆ ತೂರಿ ಜಮೀನು ಖಾತೆ ಮಾಡಿದ್ದು, ಪ್ರಕರಣ ಸಂಬಂಧ ಮೂವರು ಕಂದಾಯ ಇಲಾಖೆಯ ಮೂವರು ಸಿಬ್ಬಂದಿಯ ತಲೆದಂಡವಾಗಿದೆ.

ಆರೋಪಿಗಳು
author img

By

Published : Jun 1, 2019, 2:03 PM IST

ಚಾಮರಾಜನಗರ: ಜಿಲ್ಲೆಯ ಲಿಂಗಾನಪುರ ಗ್ರಾಮದ ಸರ್ವೇ ನಂ. 203 ರಲ್ಲಿ ಸರ್ಕಾರಿ ನಿಯಮ ಉಲ್ಲಂಘಿಸಿ 2.4 ಎಕರೆ ಜಮೀನನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತಾರದೆ ಸುಳ್ವಾಡಿ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಖಾತೆ ಮಾಡಿಕೊಡಲಾಗಿತ್ತು.

ಈ ವಿಚಾರ ಹೊರಬೀಳುತ್ತಿದ್ದಂತೆ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಡಿಸಿ ಕಾವೇರಿ, ಕಾನೂನು ಉಲ್ಲಂಘಿಸಿದ ನೌಕರರನ್ನು ಅಮಾನತುಗೊಳಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಕಂದಾಯ ಇಲಾಖೆಯ ನಿರೀಕ್ಷಕ ನಿರಂಜನ್, ಗ್ರಾಮ ಲೆಕ್ಕಿಗರಾದ ಸತೀಶ್ ಹಾಗೂ ಹೇಮಾ ಎಂಬುವರನ್ನು ಪ್ರಕರಣ ಸಂಬಂಧ ಅಮಾನತುಗೊಳಿಸಲಾಗಿದೆ.

Intro:ವಿಷ ದುರಂತ ಆರೋಪಿಗೆ ಜಮೀನು ಖಾತೆ: ಮೂವರ ತಲೆದಂಡ!

ಚಾಮರಾಜನಗರ: ಲಿಂಗಾನಪುರ ಗ್ರಾಮದ ಸರ್ವೇ ನಂ 203 ರಲ್ಲಿ ನಿಯಮ ಉಲ್ಲಂಘಿಸಿ 2.4 ಎಕರೆ ಜಮೀನನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ಸುಳ್ವಾಡಿ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿಗೆ ಖಾತೆ ಮಾಡಿಕೊಟ್ಟು ವಿವಾದಕ್ಕೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ತಲೆದಂಡವಾಗಿದೆ.

Body:ಕಂದಾಯ ಇಲಾಖೆಯ ಮೂರು
ರಾಜಸ್ವ ನಿರೀಕ್ಷಕ ನಿರಂಜನ್, ಗ್ರಾಮ ಲೆಕ್ಕಿಗರಾದ ಸತೀಶ್ ಹಾಗೂ ಹೇಮಾ ಅಮಾನತುಗೊಂಡ ಸಿಬ್ಬಂದಿಗಳು.

ಸುಳ್ವಾಡಿ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ
ಮಹಾದೇವಸ್ವಾಮಿ ಅವರ ಹೆಸರಿಗೆ ಸರ್ವೇ ನಂ 203 ರಲ್ಲಿ 2.44 ಎಕರೆ ಜಮೀನಿನನ್ನು ಮಹಾದೇವಪ್ರಭು ರವರಿಂದ ಹಳೆ ನಮೂನೆಯ ಆಧಾರದಲ್ಲಿ ಸರ್ಕಾರಿ ನಿಯಮ ಗಾಳಿಗೆ ತೂರಿ ಖಾತೆ ಮಾಡಲಾಗಿತ್ತು. ಈ ಪ್ರಕರಣ ಹೊರಬೀಳುತ್ತಿದ್ದಂತೆ ಮಾದ್ಯಮ ಹಾಗೂ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Conclusion:ಈ ಹಿನ್ನಲೆ ಎಚ್ಚೆತ್ತ ಡಿಸಿ ಕಾವೇರಿ ಕಾನೂನು ಉಲ್ಲಂಘಿಸಿದ ನೌಕರರನ್ನು ಅಮಾನತುಗೊಳಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.