ETV Bharat / state

ಈ ಮೇಷ್ಟ್ರ ವಿಡಿಯೋಗಳಿಗೆ ಲಕ್ಷ-ಲಕ್ಷ ಪ್ರೇಕ್ಷಕರು: ಚಾಮರಾಜನಗರ ಭಾಷೆ ಸೊಗಡಿಗೆ ಕರುನಾಡೇ ಫಿದಾ!

'ಲೋ ಕುಮಾರ, ಕುಮಾರ ಕಾಲೇಜ್ ಗ್ ಹೋಗದ್ ಎಲ್ಲಾ ಬುಟ್ಟು ನೀನು ಶಾಸ್ತ್ರ ಕಲಿ, ಟಿವಿಲೀ ನೋಡಲ್ವ ನೀನು..ಕೊರೊನಾವಂತೆ ಕೊರೊನಾ ಅದ್ರ ಬಾಯ್ಗ್ ಮಣ್ಣ್ ಹಾಕ- ಇಸ್ಕೂಲ್ ಓಪನ್ ಮಾಡಿ ಪುಣ್ಯ ಕಟ್ಕಳಿ'. ಈ ರೀತಿ ಮಾತನಾಡಿ ನಗಿಸುವ ಜೊತೆಗೆ ಜಾಗೃತಿ ಮೂಡಿಸುವ ವಿಡಿಯೋಗಳನ್ನು ನೋಡೆ ಇರುತ್ತೀರಿ ಅಲ್ವಾ, ಅವರ ಬಗೆಗಿನ ವಿಶೇಷ ಸ್ಟೋರಿ ಇಲ್ಲಿದೆ ನೋಡಿ..

ಜಯಪ್ಪ.
ಜಯಪ್ಪ.
author img

By

Published : Jul 17, 2020, 4:56 PM IST

ಚಾಮರಾಜನಗರ: ವಿಡಿಯೋಗಳ ಮೂಲಕ ಮನೆ ಮಾತಾಗಿರುವ ಟಿ. ನರಸೀಪುರ ತಾಲೂಕಿನಲ್ಲಿರುವ ಎಡದೊರೆ ಸರ್ಕಾರಿ ಪ್ರೌಢಶಾಲೆಯ ಜಯಪ್ಪ ಮೇಷ್ಟ್ರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾರೆ.

ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಇವರು, ಚಾಮರಾಜನಗರ, ಮಂಡ್ಯ ಭಾಗದಲ್ಲಿನ ವಿಶಿಷ್ಟ ಭಾಷೆ ಸೊಗಡಿನ ಮೂಲಕವೇ ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ‌. ಇವರ ಮಾತಿನ ಶೈಲಿಗೆ, ಆರಿಸಿಕೊಳ್ಳುವ ವಿಷಯಕ್ಕೆ ಲಕ್ಷಾಂತರ ಮೆಚ್ಚುಗೆಗಳು ಬಂದಿವೆ.

ಕಡಿಮೆ ನೀರಿನಲ್ಲಿ ಉತ್ತಮ ಬೆಳೆಯ ವಿಡಿಯೋ, ಮಕ್ಕಳ ತುಂಟಾಟ ಸಹಿಸದೇ ಶಾಲೆಗಳನ್ನು ತೆರೆಯಬೇಕೆಂಬ ತಾಯಿ ಅಳಲು, ಯಶಸ್ವಿಯಾಗಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ಮಕ್ಕಳ ಬಗ್ಗೆ, ಪದವೀಧರ ಯುವಕರಿಗಿಂತ ಜ್ಯೋತಿಷಿಗಳೇ ಹೆಚ್ಚು ದುಡಿಯುತ್ತಿರುವ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿವೆ. ಇವರ ಮೊಣಚಾದ ಮಾತುಗಳಿಗೆ ಚಿಣ್ಣರಿಂದ ಹಿಡಿದು ಹಿರಿಯರ ತನಕ ಎಲ್ಲರೂ ಮಾರುಹೋಗಿದ್ದಾರೆ.

ಜಯಪ್ಪ
ಜಯಪ್ಪ

ಓದಿನಲ್ಲಿ ಟಾಪ್- ಜಮೀನಿನಲ್ಲಿ ಬೊಂಬಾಟ್:

ಜಯಪ್ಪ ಚಿಕ್ಕಂದಿನಿಂದಲೇ ಓದಿನಲ್ಲೂ ಮುಂದಿದ್ದು, ಪಿಯು ಪರೀಕ್ಷೆಯಲ್ಲಿ ತಾಲೂಕಿಗೆ ಮೊದಲಿಗರಾಗಿದ್ದರು. ಬಳಿಕ, ಬಿಪಿಎಡ್ ಹಾಗೂ ಎಂಪಿಇಡಿ​ಯಲ್ಲಿ ರ‍್ಯಾಂಕ್ ಪಡೆದು ಚಿನ್ನದ ಪದಕಗಳನ್ನು ಪಡೆದಿದ್ದಾರೆ‌. ಗಾಯನದಲ್ಲೂ ಆಸಕ್ತಿ ಹೊಂದಿದ್ದು ಉತ್ತಮವಾಗಿ ಹಾಡುಗಳನ್ನು ಸಹ ಹಾಡುತ್ತಾರೆ. ಇಷ್ಟೇ ಅಲ್ಲದೇ 6 ಎಕರೆ ಜಮೀನಿನಲ್ಲಿ ಬೊಂಬಾಟ್ ಆಗಿ ಬೆಳೆಯನ್ನು ಬೆಳೆದು ಪ್ರಗತಿಪರ ರೈತರಾಗಿದ್ದಾರೆ.

ವೃತ್ತಿಯಲ್ಲಿ 18 ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಜಯಪ್ಪ ಅವರ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಹಾಗೂ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ವಿವಿಧ ಕ್ರೀಡೆಯಲ್ಲಿ ಪ್ರತಿನಿಧಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕುವ ಯವಕರಿಗೆ, ಇನ್ನಿತರರಿಗೆ ಕ್ರೀಡೆಯಲ್ಲಿ ಇವರು ತರಬೇತಿ ನೀಡಲಿದ್ದು, ಯುವ ರೈತರಿಗೆ ವ್ಯವಸಾಯದ ಮಾರ್ಗದರ್ಶನವನ್ನು ಸಹ ನೀಡುತ್ತಾ ಬರುತ್ತಿದ್ದಾರೆ.

ವಿಶಿಷ್ಟ ವಿಡಿಯೋ ಮೂಲಕ ಮನೆಮಾತಾದ ಶಿಕ್ಷಕ

ಜಯಪ್ಪ ಅವರು ಸಾಹಸ ಸಿಂಹ ವಿಷ್ಟುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ತಮ್ಮ 5 ನೇ ಮಗುವಿಗೆ ವಿಷ್ಣುವರ್ಧನ್ ಅಂತಾನೇ ಹೆಸರಿಟ್ಟು, ಅಭಿಮಾನ ಮೆರೆದಿದ್ದಾರೆ. ಮಗ ಹೆಸರು ಮಾಡುತ್ತಿರುವುದಕ್ಕೆ ತಂದೆ ಮಹಾದೇವಪ್ಪ ತಾಯಿ ನಾಗಮ್ಮ ಕೂಡ 'ಈಟಿವಿ ಭಾರತ'ದೊಂದಿಗೆ ಹರ್ಷ ವ್ಯಕ್ತಪಡಿಸಿದರು.

ಪತ್ನಿ ಭಾರತಿ ಮಾತನಾಡಿ, ನಮ್ಮ ಯಜಮಾನ್ರು ಮನೆಯಲ್ಲಿ ಎಲ್ಲರ ಜೊತೆ ಖುಷಿಯಿಂದರಲಿದ್ದು, ಸಮಾಜದ ಆಗುಹೋಗುಗಳ ಬಗ್ಗೆಯೂ ಚಿಂತನೆ ನಡೆಸುವ ಅವರು ಪತಿಯಾಗಿರುವುದು ನನ್ನ ಪುಣ್ಯ ಎಂದು ಸಂತಸ ಹಂಚಿಕೊಂಡಿದ್ದಾರೆ.

ನನ್ನ ಅಭಿಪ್ರಾಯ ಹಂಚಿಕೊಂಡೆ:

ಜಯಪ್ಪ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ನಾನು ದಿನನಿತ್ಯ ಆಡುವ ಭಾಷಾ ಶೈಲಿಯಲ್ಲೇ ಸಮಾಜಕ್ಕೇನಾದರೂ ಸಂದೇಶ ನೀಡಬೇಕೆಂದು ವಿಡಿಯೋ ಮಾಡಿದೆ. ಮೊದಲು ಬೆಳೆಗಳ ಬಗ್ಗೆ ಮಾಡಿದ್ದಕ್ಕೂ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ, ಶಾಲೆ ತೆರೆಯಿರಿ ಎಂಬ ವಿಡಿಯೋವನ್ನು 7 ಲಕ್ಷಕ್ಕೂ ಅಧಿಕ ಮಂದಿ ನೋಡಿದಾಗ ನನಗೆ ಅಚ್ಚರಿಯಾಯಿತು. ನನ್ನ ಮಾತನ್ನು ಜನರು ಆಲಿಸುತ್ತಾರೆಂದು ತಿಳಿದು ಮತ್ತಷ್ಟು ವಿಡಿಯೋಗಳನ್ನು ಮಾಡಿದೆ. ನಾನು ಯಾವುದೇ ರಿಹರ್ಸಲ್ ಮಾಡದೇ ವಿಡಿಯೋ ಮಾಡಲಿದ್ದು, ಜ್ಯೋತಿಷ್ಯದ ವಿಡಿಯೋ ಎರಡ್ಮೂರು ಬಾರಿ ಮಾಡಿದೆ‌. ನನ್ನದೇ ಭಾಷೆಯಲ್ಲಿ ಸಂದೇಶ ನೀಡಬೇಕೆಂದು ಇದರಲ್ಲಿ ತೊಡಗಿದ್ದೇನೆ ಎಂದರು.

ಚಾಮರಾಜನಗರ ಭಾಷೆಯ ಶೈಲಿ ಕುರಿತು ಬೇರೆ ಜಿಲ್ಲೆಯವರ ಏನೆಂದರು ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ಉತ್ತರ ಕರ್ನಾಟಕ, ಮಂಗಳೂರು, ಬೆಂಗಳೂರಿನಿಂದಲೂ ಕರೆ ಬಂದಿದೆ. ಎಲ್ಲರೂ ಮೆಚ್ಚಿಕೊಂಡಿದ್ದಾರೆ. ನಾನು ಮಾತನಾಡುವುದು ಅವರಿಗೆಲ್ಲಾ ಅರ್ಥವಾಗಿದೆ. ಅಮೆರಿಕ, ಆಸ್ಟ್ರೇಲಿಯಾದಿಂದಲೂ ಕೆಲವರು ಕರೆ ಮಾಡಿ ಮಾತನಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.