ETV Bharat / state

ಚಾಮರಾಜನಗರ: ಇಬ್ಬರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ: ಒಬ್ಬರು ಸಾಹಿತಿ, ಇನ್ನೊಬ್ಬರು ವಿಜ್ಞಾನಿ

ಗಡಿಜಿಲ್ಲೆ ಚಾಮರಾಜನಗರದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದರೆ, ಕೊಪ್ಪಳ ಜಿಲ್ಲೆಯಲ್ಲಿ ಮೂವರು, ಬೆಳಗಾವಿಯ ಇಬ್ಬರು ಹಾಗು ವಿಜಯನಗರ ಜಿಲ್ಲೆಯಲ್ಲಿ ಒಬ್ಬರಿಗೆ ಪ್ರಶಸ್ತಿ ದೊರಕಿದೆ.

ಪ್ರೊ.ಸಿ.ನಾಗಣ್ಣ, ಪ್ರೊ ಗೋಪಾಲನ್ ಜಗದೀಶ್ ರಾಜ್ಯೋತ್ಸವ ಪ್ರಶಸ್ತಿ

author img

By ETV Bharat Karnataka Team

Published : Oct 31, 2023, 9:53 PM IST

ಚಾಮರಾಜನಗರ: ನವೆಂಬರ್ 1ರಂದು 50ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಇಂದು ಬೆಂಗಳೂರಿನಲ್ಲಿ ಘೋಷಿಸಿದರು. ಚಾಮರಾಜನಗರದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದರೆ, ಕೊಪ್ಪಳ ಜಿಲ್ಲೆಯಲ್ಲಿ ಮೂವರು, ಬೆಳಗಾವಿ ಜಿಲ್ಲೆಯ ಇಬ್ಬರು, ವಿಜಯನಗರ ಜಿಲ್ಲೆಯಲ್ಲಿ ಒಬ್ಬರಿಗೆ ಪ್ರಶಸ್ತಿ ಸಿಕ್ಕಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಗಣ್ಯರ ವಿವರ ಹೀಗಿದೆ.

ಪ್ರೊ.ಸಿ.ನಾಗಣ್ಣ: ಮೈಸೂರು ವಿವಿಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಅವರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳು ಕರಗತವಾಗಿವೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ‌ ಚಿಕ್ಕಾಟಿ ಗ್ರಾಮದವಾರದ ನಾಗಣ್ಣ ಪದವಿ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ತೆರಳಿ ಅಲ್ಲೇ ನೆಲೆಗೊಂಡು ಸಾಹಿತ್ಯ ಸಂಶೋಧನೆ, ಅಧ್ಯಾಪನಾ ವೃತ್ತಿಗಳಲ್ಲಿ ಛಾಪು ಮೂಡಿಸಿದ್ದಾರೆ.

1989ರಲ್ಲಿ ಗಿಡದಡಿಯ ಲೋಕ ಎಂಬ ಕಾವ್ಯದ ಮೂಲಕ ಆರಂಭಗೊಂಡ ಇವರ ಸಾಹಿತ್ಯ ಪಯಣ ವಿಮರ್ಶೆ, ಅನುವಾದ, ಅಂಕಣ, ಬಾನುಲಿ ಸಾಹಿತ್ಯ, ಪ್ರವಾಸ ಕಥನ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಉತ್ತಮ ವಾಗ್ಮಿಯೂ ಆಗಿರುವ ನಾಗಣ್ಣ ಕಳೆದ 15 ವರ್ಷಗಳಿಂದ ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿಯ ವೀಕ್ಷಕ ವಿವರಣೆಕಾರರಾಗಿಯೂ ಗಮನ ಸೆಳೆದಿದ್ದಾರೆ. ಚಾಮರಾಜನಗರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಎಚ್.ಡಿ.ಚೌಡಯ್ಯ ಸಾಹಿತ್ಯ- ಸಂಸ್ಕೃತಿ, ವಿಶ್ವಮಾನವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳ ಜೊತೆಗೆ ಈಗ ರಾಜ್ಯೋತ್ಸವ ಪ್ರಶಸ್ತಿ ಇವರ ಮುಡಿಗೇರಿದೆ.

ಪ್ರೊ.ಗೋಪಾಲನ್ ಜಗದೀಶ್: ಈ ಬಾರಿ ವಿಜ್ಞಾನ ಕ್ಷೇತ್ರದಲ್ಲಿ ಕೊಳ್ಳೇಗಾಲದ ಪ್ರೊ.ಗೋಪಾಲನ್ ಜಗದೀಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಗೋಪಾಲನ್ ಜಗದೀಶ್ ಪ್ರಸ್ತುತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವೈಮಾನಿಕ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಸಂಶೋಧನೆಗಳಲ್ಲಿ ಇವರು ಪೇಟೆಂಟ್ ಕೂಡ ಪಡೆದಿದ್ದಾರೆ. ಮೈಸೂರು, ಬೆಂಗಳೂರಿನಲ್ಲಿ ಶಿಕ್ಷಣ ಮುಗಿಸಿದ ಜಗದೀಶ್ ಅವರಿಗೆ ತಾನು ಓದಿದ ಸಂಸ್ಥೆಯಲ್ಲೇ ಉದ್ಯೋಗ ಮಾಡುವ ಅವಕಾಶ ಲಭಿಸಿದೆ. ಇವರು ವಿಜ್ಞಾನ ಕ್ಷೇತ್ರದಲ್ಲಿ ಕೊಟ್ಟಿರುವ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ: ಕೊಪ್ಪಳ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಗೈದ ಮೂವರಿಗೆ ಪ್ರಶಸ್ತಿ ಅರಸಿ ಬಂದಿದೆ.

ಕೇಶಪ್ಪ ಶಿಳ್ಳಿಕ್ಯಾತರ: ಕೊಪ್ಪಳ ತಾಲೂಕಿನ ಮೊರನಹಳ್ಳಿ ಗ್ರಾಮದ ಕೇಶಪ್ಪ ಶಿಳ್ಳಿಕ್ಯಾತರ ಅವರು ತೊಗಲುಗೊಂಬೆ ಕಲಾ ಪ್ರದರ್ಶನಕ್ಕಾಗಿ ತಮ್ಮ ಬದುಕನ್ನೇ ಅರ್ಪಣೆ ಮಾಡಿಕೊಂಡವರು. ಜಿಲ್ಎ, ರಾಜ್ಯ, ದೇಶ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೊಗಲುಗೊಂಬೆ ಪ್ರದರ್ಶನ ನೀಡಿದ ಇವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಅರಸಿಬಂದಿದೆ. ತೊಗಲುಗೊಂಬೆ ಕಲಾವಿದೆಯಾಗಿದ್ದ ಕೇಶಪ್ಪ ಅವರ ತಾಯಿ ಭೀಮವ್ವ ಶಿಳ್ಳಿಕ್ಯಾತರ ಅವರಿಗೆ 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಈಗ ಮಗನಿಗೆ ಈ ಗೌರವ ಸಂದಿದೆ. ಬಾಲ್ಯದಲ್ಲಿಯೇ ಕಲಾ ಸೇವೆ ಆರಂಭಿಸಿರುವ ಕೇಶಪ್ಪ ತಮ್ಮ ದುಡಿಮೆಯ ಜೊತೆಗೆ ಕಲಾಸೇವೆ ಮುಂದುವರೆಸಿಕೊಂಡು ಹೊರಟಿದ್ದಾರೆ. ಮುಖ್ಯವಾಗಿ ಮಹಾಭಾರತ ಮತ್ತು ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದಿಂದ ಪ್ರದರ್ಶನ ಮಾಡಿ ಜನಮನ ಸೆಳೆದಿದ್ದಾರೆ.

ಗುಂಡಪ್ಪ ವಿಭೂತಿ,ಕೇಶಪ್ಪ ಶಿಳ್ಳಿಕ್ಯಾತರ, ಹುಚ್ಚಮ್ಮ ಚೌದ್ರಿಗೆ ರಾಜ್ಯೋತ್ಸವ ಪ್ರಶಸ್ತಿ
ಗುಂಡಪ್ಪ ವಿಭೂತಿ, ಕೇಶಪ್ಪ ಶಿಳ್ಳಿಕ್ಯಾತರ, ಹುಚ್ಚಮ್ಮ ಚೌದ್ರಿ

ಗುಂಡಪ್ಪ ವಿಭೂತಿ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಗುಂಡಪ್ಪ ವಿಭೂತಿ ಅವರ ಹಗಲುವೇಷದ ಕಲೆಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಅಲೆಮಾರಿಯ ಬುಡ್ಗಜಂಗಮ ಸಮುದಾಯದಲ್ಲಿ ಹುಟ್ಟಿ ಬೆಳೆದ ಗುಂಡಪ್ಪ ಹಗಲುವೇಷದ ರೂಪಕಗಳಲ್ಲಿ ನಮ್ಮ ಭವ್ಯವಾದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿನ್ನೆಲೆ ಉಳಿಸುವ ಕಾಯಕ ಮಾಡುತ್ತಿದ್ದಾರೆ. ಹಗಲುವೇಷ ಕಲೆಯ ಜೊತೆ ಜೊತೆಗೆ ಜನಪದ ಹಾಡು, ತತ್ವಪದ, ದಾಸರ ಪದ, ಭಕ್ತಿಗೀತೆ, ಭಾವಗೀತೆ ಮತ್ತು ವಚನ ಗಾಯನದ ಮೂಲಕವೂ ಹೆಸರು ಮಾಡಿದ್ದಾರೆ. ವಂಶಪರಂಪರೆಯಿಂದ ಹಗಲುವೇಷ ಕಲೆಯಲ್ಲಿ ತೊಡಗಿಕೊಂಡಿರುವ ಅವರು ಹಾರ್ಮೋನಿಯಂ, ತಬಲಾ, ದಮ್ಮಡಿ, ತಾಳ, ರಾಗಮಾಲೆ ಹೀಗೆ ಬೇರೆ ಬೇರೆ ಕಲೆಗಳ ಮೂಲಕವೂ ಗಮನ ಸೆಳೆದಿದ್ದಾರೆ.

ಹುಚ್ಚಮ್ಮ ಚೌದ್ರಿ: ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸಮಾಜ ಸೇವಕಿ ಕೊಪ್ಪಳ ತಾಲೂಕಿನ ಕುಣಿಕೇರಿಯ ಹುಚ್ಚಮ್ಮ ಚೌದ್ರಿ ಅವರಿಗೆ ದೊರಕಿದೆ. 68 ವರ್ಷದ ಹುಚ್ಚಮ್ಮ ಚೌದ್ರಿ ಅವರಿಗೆ ಮಕ್ಕಳಾಗಿಲ್ಲ. ಆಕೆಯ ಉಪಜೀವನಕ್ಕಿದ್ದ ಕೇವಲ 2 ಎಕರೆ ಭೂಮಿಯನ್ನು ತನ್ನೂರಿನ ಶಾಲೆಗೆ ದಾನವಾಗಿ ನೀಡಿದ್ದಾರೆ. ತನ್ನ ಜೀವನಕ್ಕೆ ಇದೇ ಶಾಲೆಯಲ್ಲಿ ಬಿಸಿಯೂಟ ತಯಾರಕಳಾಗಿ ಕೆಲಸ ಮಾಡುತ್ತಾ ತನಗೆ ಮಕ್ಕಳು ಇಲ್ಲ ಎಂಬ ಕೊರಗನ್ನು ತನ್ನೂರಿನ ಶಾಲಾ ಮಕ್ಕಳು ತನ್ನ ಮಕ್ಕಳೆಂದು ತಿಳಿದು ಸೇವೆ ಮಾಡುತ್ತಿದ್ದಾಳೆ.ಹುಚ್ಚಮ್ಮನಿಗೆ ನಾಡಿನ ಮಠಗಳು, ಸಂಘ ಸಂಸ್ಥೆಗಳು ತಾವಾಗಿ ಹುಡುಕಿಕೊಂಡು ಬಂದು ಪ್ರಶಸ್ತಿ ನೀಡಿ ಗೌರವಿಸಿವೆ. ಈ ಮಧ್ಯೆ ರಾಜ್ಯ ಸರಕಾರದ ಪ್ರತಿಷ್ಠಿತ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಜಿಲ್ಲೆಯ ಜನರಿಗೆ ಹರ್ಷ ತಂದಿದೆ.

ಬಿಸ್ನಳ್ಳಿಯ ದಳವಾಯಿ ಸಿದ್ದಪ್ಪ ಹಂದಿಜೋಗಿಗೆ ರಾಜ್ಯೋತ್ಸವ ಪ್ರಶಸ್ತಿ
ಬಿಸ್ನಳ್ಳಿಯ ದಳವಾಯಿ ಸಿದ್ದಪ್ಪ ಹಂದಿಜೋಗಿ

ವಿಜಯನಗರ- ದಳವಾಯಿ ಸಿದ್ದಪ್ಪಗೆ ಪ್ರಶಸ್ತಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಿಸ್ನಳ್ಳಿಯ ದಳವಾಯಿ ಸಿದ್ದಪ್ಪ ಹಂದಿಜೋಗಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಬಯಲಾಟ ಕ್ಷೇತ್ರದಲ್ಲಿ ಸಾಧನೆ ತೋರಿದ ದಳವಾಯಿ ಸಿದ್ದಪ್ಪ ಹಂದಿಜೋಗಿ ಪ್ರಶಸ್ತಿ ಸಿಕ್ಕಿದೆ.

ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ರಾಜ್ಯೋತ್ಸವ ಪ್ರಶಸ್ತಿ
ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ

ಬೆಳಗಾವಿ ಇಬ್ಬರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ: ಬೆಳಗಾವಿ ಜಿಲ್ಲೆಗೆ ಈ ಬಾರಿ ಎರಡು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಮಾಜಸೇವೆ ಕ್ಷೇತ್ರದಿಂದ ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಂಗೀತ ನೃತ್ಯ ಕ್ಷೇತ್ರದಿಂದ ಡಾ.ಬಾಳೇಶ ಭಜಂತ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಸೇರಿದಂತೆ 25 ಗ್ರಾಂ ಚಿನ್ನದ ಮೆಡಲ್ ಒಳಗೊಂಡಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 1ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣ್ಯರನ್ನು ಸನ್ಮಾನಿಸುವರು.

ಇದನ್ನೂಓದಿ: ಧಾರವಾಡ ಜಿಲ್ಲೆಯ ನಾಲ್ವರು ಸಾಧಕರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ.. ಖುಷಿ ಹಂಚಿಕೊಂಡ ಕುಸ್ತಿಪಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.