ಕೊಳ್ಳೇಗಾಲ: ಭೂ ಸುದಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ 8 ವಿವಿಧ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ಗೆ ಕೊಳ್ಳೇಗಾಲ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು ಸ್ಥಗಿತವಾಗಿದೆ.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್, ಡಾ. ರಾಜ್ ಕುಮಾರ್ ರಸ್ತೆ, ಡಾ. ವಿಷ್ಣುವರ್ಧನ್ ರಸ್ತೆ, ಚೌಡೇಶ್ವರಿ ರಸ್ತೆ ಮುಖ್ಯ ಹೆದ್ದಾರಿಯಲ್ಲಿ ತೆರೆಯಬೇಕಾದ ಅಂಗಡಿಗಳು, ಮಳಿಗೆಗಳು ಮುಚ್ಚಿವೆ. ಇನ್ನು ಆಟೋ, ಲಾರಿ ಚಾಲಕರು, ಟ್ಯಾಕ್ಸಿ ಮಾಲೀಕರ ಸಂಘಟನೆಗಳು ಬಂದ್ಗೆ ಸಹಕಾರ ನೀಡಿವೆ.
ಎಂದಿನಂತೆ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಔಷಧ ಅಂಗಡಿಗಳು ತೆರೆದಿದ್ದವು. ಪೆಟ್ರೋಲ್ ಬಂಕ್ಗಳು ಬಂದ್ ಆಗಿವೆ. ರಸ್ತೆಗಿಳಿದ ಕೆಲವು ಸರ್ಕಾರಿ ಬಸ್ಗಳು ಜನರಿಲ್ಲದೆ ಪುನಃ ಡಿಪೋ ಸೇರಿದವು. ಆರ್.ಎಂ.ಸಿ ಬಂದ್ ಆಗಿದ್ದು, ರೈತರ ಚಟುವಟಿಕೆ ಸ್ಥಗಿತವಾಗಿತ್ತು. ಬೆಳ್ಳಂಬೆಳ್ಳಗೆ ರಸ್ತೆಗಿಳಿದ ರೈತ ಮುಖಂಡರು ಬೈಕ್ಗಳಲ್ಲಿ ಪಟ್ಟಣದೊಳಗೆ ರೌಂಡ್ ನಡೆಸಿದರು.