ಚಾಮರಾಜನಗರ: ಜಾತಿನಿಂದನೆ, ಪೊಲೀಸರ ಮೇಲೆ ಗುಂಪು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಆರೋಪಿ ಫೇಸ್ಬುಕ್ನಲ್ಲಿ ಆ್ಯಕ್ಟಿವ್ ಆಗಿದ್ದು ಆತನನ್ನು ಬಂಧಿಸುವಲ್ಲಿ ಬೇಗೂರು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹೊಣಕನಪುರ ಗ್ರಾಮದ ಸಿದ್ದರಾಜು ಪೊಲೀಸರಿಂದ ತಲೆ ಮರೆಸಿಕೊಂಡು ಫೇಸ್ಬುಕ್ನಲ್ಲಿ ಆ್ಯಕ್ಟಿವ್ ಆಗಿದ್ದಾನೆ. ಕಳೆದ ಮಂಗಳವಾರ ರಾತ್ರಿ ಜಾತಿನಿಂದನೆ ಕೇಸ್ನಡಿ ಬಂಧಿಸಲು ತೆರಳಿದ್ದ ವೇಳೆ ಸಿದ್ದರಾಜು ಹಾಗೂ ಸಂಬಂಧಿಕರು ಐವರು ಪೊಲೀಸರ ಮೇಲೆ ಗುಂಪು ಹಲ್ಲೆ ನಡೆಸಿದ್ದರು. ಆ ವೇಳೆ, ಆರೋಪಿ ಸಿದ್ದರಾಜು ಪರಾರಿಯಾಗಿದ್ದ.
ಬಳಿಕ, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಕದಲ್ಲಿ ಕಾಣಿಸಿಕೊಂಡು ಪ್ರಕರಣದಿಂದ ಬಚಾವಾಗಲು ಯತ್ನಿಸಿದ್ದು ಸುದ್ದಿಯಾಗಿತ್ತು. ಇದೀಗ ಪೊಲೀಸರೇ ದೌರ್ಜನ್ಯ ನಡೆಸಿದ್ದಾರೆ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುತ್ತಿದ್ದಾನೆ.
ಇದನ್ನೂ ಓದಿ: ಲಂಚ ಆರೋಪ: ರವಿ ಚನ್ನಣ್ಣನವರ ಅಮಾನತಿಗೆ ಆಪ್ ಒತ್ತಾಯ
ಹೀಗಾಗಿ, ಆರೋಪಿ ಪಾದಯಾತ್ರೆಯಲ್ಲಿ ಕಾಣಿಸಿಕೊಂಡು, ಫೇಸ್ಬುಕ್ನಲ್ಲಿ ಸಕ್ರಿಯವಾಗಿದ್ದರೂ ಆತನನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆಂಬ ಆರೋಪ ಕೇಳಿಬಂದಿದೆ.