ETV Bharat / state

ಐತಿಹಾಸಿಕ ಸಮೂಹ ದೇಗುಲಗಳಲ್ಲಿ ಮೂಲ ಸೌಲಭ್ಯಗಳ ಅವ್ಯವಸ್ಥೆ: ಭಕ್ತರ ಪರದಾಟ

author img

By

Published : Apr 9, 2021, 10:51 AM IST

ಕೊಳ್ಳೇಗಾಲ ಸತ್ತೇಗಾಲದಿಂದ ಕೆಲವೇ ಕಿಲೋ ಮೀಟರ್ ದೂರವಿರುವ ಸುಪ್ರಸಿದ್ಧ, ಐತಿಹಾಸಿಕ ಹಿನ್ನೆಲೆವುಳ್ಳ ಮಧ್ಯ ರಂಗನಾಥ ಸ್ವಾಮಿ ದೇವಾಲಯ, ಮೀನಾಕ್ಷಿಸಮೇತ ಸೋಮೇಶ್ವರ ದೇವಾಲಯ ಹಾಗೂ ಆದಿಶಕ್ತಿ ಮಾರಮ್ಮ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆಗೊಂಡಿದ್ದು, ಭಕ್ತರ ಗೋಳು ಕೇಳುವವರಿಲ್ಲದಂತಾಗಿದೆ.

kollegala
ದೇವಸ್ಥಾನ ಸುತ್ತಮುತ್ತ ಅವ್ಯವಸ್ಥೆ

ಕೊಳ್ಳೇಗಾಲ: ಅಶುಚಿತ್ವ, ಅಸಮರ್ಪಕ ನಿರ್ವಹಣೆಯಿಂದ ಗಬ್ಬೆದ್ದು ನಾರುತ್ತಿರುವ ಶೌಚಗೃಹ. ಕುಡಿಯುವ ನೀರಿನ ಸಮಸ್ಯೆ ಇಂತಹ ಮೂಲಭೂತಸೌಲಭ್ಯಗಳ ಕೊರತೆ ಇಲ್ಲಿನ ಸುಪ್ರಸಿದ್ಧ ಸಮೂಹ ದೇವಾಲಯಗಳನ್ನು ಕಾಡುತ್ತಿದೆ.

ತಾಲೂಕಿನ ಸತ್ತೇಗಾಲದಿಂದ ಕೆಲವೇ ಕಿಲೋ ಮೀಟರ್ ದೂರವಿರುವ ಸುಪ್ರಸಿದ್ಧ, ಐತಿಹಾಸಿಕ ಹಿನ್ನೆಲೆವುಳ್ಳ ಮಧ್ಯ ರಂಗನಾಥ ಸ್ವಾಮಿ ದೇವಾಲಯ, ಮೀನಾಕ್ಷಿಸಮೇತ ಸೋಮೇಶ್ವರ ದೇವಾಲಯ ಹಾಗೂ ಆದಿಶಕ್ತಿ ಮಾರಮ್ಮ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯಗಳು ಮರೀಚಿಕೆಗೊಂಡಿದ್ದು, ಭಕ್ತರ ಗೋಳು ಕೇಳುವವರಿಲ್ಲದಂತಾಗಿದೆ.

ದೇವಸ್ಥಾನ ಸುತ್ತಮುತ್ತ ಅವ್ಯವಸ್ಥೆ

ಐತಿಹಾಸಿಕ ಸಮೂಹ ದೇವಾಲಯಗಳು: ಮಧ್ಯರಂಗನಾಥ ಸ್ವಾಮಿಯ ದೇವಾಲಯವು ಗಂಗರು ಮತ್ತು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು ಇದಕ್ಕೆ 400 ವರ್ಷಗಳ ಇತಿಹಾಸವಿದೆ. ಇದು ಸುಮಾರು 250 ವರ್ಷಗಳ ಹಿಂದೆ ದ್ವೀಪ ಗ್ರಾಮವಾಗಿತ್ತು. ಆ ನಂತರ ಚೋಳರು ಐತಿಹಾಸಿಕ ವೆಸ್ಲಿ ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಈ ಹಿಂದೆ ಶೈವ ಮತ್ತು ನಾಥ ಪಂಥಕ್ಕೆ ಸೇರಿತ್ತು. ಹೊಯ್ಸಳದ ರಾಜ ವಿಷ್ಣುರ್ಧನನ ಆಳ್ವಿಕೆ ಕಾಲದಲ್ಲಿ ತಮಿಳುನಾಡಿನಿಂದ ರಾಮಾನುಜಾಚಾರ್ಯರು ಬಂದು ಮಧ್ಯರಂಗನಾಥ ದೇವಾಲಯವನ್ನು ವೈಷ್ಣವ ದೇವಾಲಯವನ್ನಾಗಿ ಪರಿರ್ವತಿಸಿದ್ದರು.

ಶ್ರೀರಂಗಪಟ್ಟಣದಲ್ಲಿ ಇರುವ ಆದಿರಂಗ ದೇವಸ್ಥಾನ, ಶಿವನಸಮುದ್ರದ ಮಧ್ಯರಂಗ ದೇವಸ್ಥಾನ ಹಾಗೂ ತಮಿಳುನಾಡಿನ ಶ್ರೀರಂಗದಲ್ಲಿರುವ ಅಂತ್ಯರಂಗ ದೇವಸ್ಥಾನವನ್ನು ವೈಕುಂಠ ಏಕಾದಶಿ ದಿನದಂದು ಸೂರ್ಯ ಉದಯಿಸುವುದರಿಂದ ಸೂರ್ಯ ಮುಳುಗಡೆಯಾಗುವುದರ ಒಳಗೆ ನೋಡಿದರೆ ಶುಭವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಿಂದ ಭಕ್ತ ಗಣ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಸದ್ಯ ದೇವಾಲಯದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿದ್ದು ಭಕ್ತರಿಗೆ ಬಾಲಮಂದಿರವನ್ನು ತೆರೆದು ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಇನ್ನು, ಮೀನಾಕ್ಷಿ ಸಮೇತ ಸೋಮೇಶ್ವರ ದೇವಾಯದಲ್ಲಿ ಸ್ವತಃ ಶಂಕರಾಚಾರ್ಯರು ಕೊಟ್ಟ ಶ್ರೀಚಕ್ರವಿದ್ದು ಮೀನಾಕ್ಷಿ ಅಮ್ಮನವರು ಶ್ರೀ ಚಕ್ರವನ್ನೆ ನೋಡುತ್ತ ಚಕ್ರಾಂಕಿತ ಪ್ರಸನ್ನ ಮೀನಾಕ್ಷಿಯಾಗಿ ನೆಲೆಸಿದ್ದು ಇಷ್ಟಾರ್ಥ ಸಿದ್ಧಿಯಾಗುವ ನಂಬಿಕೆಗೆ ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಆದಿಶಕ್ತಿ ಮಾರಮ್ಮನ ದೇವಾಲಯವು ಪಕ್ಕದಲ್ಲಿಯೇ ಇರುವ ಮೀನಾಕ್ಷಿ ದೇವಿಯೇ ಆದಿಶಕ್ತಿಯ ಇನ್ನೊಂದು ಸ್ಬರೂಪ ಎಂಬುದು ಇತಿಹಾಸ. ಲಕ್ಷಾಂತರ ಭಕ್ತರು ಭೇಟಿ ನೀಡುವ ಈ ಪುಣ್ಯ ಕ್ಷೇತ್ರವಾದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಇಲ್ಲಿನ ಆಡಳಿತ ಮಂಡಳಿ ವ್ಯವಸ್ಥಿತ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಭಕ್ತರು ಹಾಗೂ ಪ್ರವಾಸಿಗರು ಆರೋಪಿಸಿದ್ದಾರೆ.

ಮಾರಮ್ಮನ ದೇವಾಲಯದಲ್ಲಿ ಶೌಚಾಗೃಹದ ಬಾಗಿಲು ಸುತ್ತಲೂ ಅನೈರ್ಮಲ್ಯ ತಾಣವಾಗಿ ಮಾರ್ಪಡಾಗಿದ್ದು ಕಸ, ಪ್ಲಾಸ್ಟಿಕ್, ತ್ಯಾಜ್ಯಗಳು ರಾರಾಜಿಸುತ್ತಿದೆ. ಸಾರ್ವಜನಿಕರ ನೀರಿನ ನಲ್ಲಿಗಳಿಂದ ಹರಿದು ಹೋಗುವ ನೀರು ರಸ್ತೆಯಲ್ಲೆ ನಿಂತು ಕೊಳಚೆ ನೀರಾಗಿ ಪರಿವರ್ತನೆಗೊಂಡಿದೆ.

ದಾಸೋಹ ಸ್ಥಗಿತ: ಕೋವಿಡ್ ಹಿನ್ನಲೆ ಮಧ್ಯರಂಗನಾಥ ದೇವಾಲಯದಲ್ಲಿ ಕಳೆದ ಮೂರು ದಿನಗಳಿಂದ ದಾಸೋಹದ ವ್ಯವಸ್ಥೆ ಸ್ಥಗಿತವಾಗಿತ್ತು. ಬೆಂಗಳೂರು, ಮೈಸೂರು ಸೇರಿದಂತೆ ದೂರದ ಜಿಲ್ಲೆಗಳಿಂದ ಬರುವ ಭಕ್ತರಿಗೆ ಸಿಗುತ್ತಿದ್ದ ಪ್ರಸಾದ ವಿತರಣೆಯನ್ನು ನಿಲ್ಲಿಸಲಾಗಿತ್ತು. ದಾಸೋಹ ನಿಂತಿರುವುದರಿಂದ ದೂರದ ಊರುಗಳಿಂದ ಬರುವ ಭಕ್ತರಿಗೆ ಪ್ರಸಾದ ವಿತರಣೆ ಇಲ್ಲದೆ ನಿರಾಸೆಯಿಂದ ತೆರಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಮೂಹ ದೇವಾಲಯಗಳ ಉಸ್ತುವಾರಿ ಉಪವಿಭಾಗಧಿಕಾರಿ ದಿಲೀಪ್ ಗಿರೀಶ್ ಬದೋಲೆ, "ಮೂಲಭೂತ ಸೌಲಭ್ಯಗಳಾದ ವ್ಯವಸ್ಥಿತ ಶೌಚಾಲಯ, ಕುಡಿಯುವ ನೀರು ಹಾಗೂ ಸ್ವಚ್ಛತೆಯನ್ನು ಸಮೂಹ ದೇವಾಲಯಗಳಿಲ್ಲಿ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ. ಮಾರಮ್ಮನ ದೇವಾಲಯದಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. ಶೌಚಾಲಯದಲ್ಲಿನ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸಿಲಾಗುವುದು. ಇನ್ನೂ ಕೋವಿಡ್​ನಿಂದ ತಾತ್ಕಾಲಿಕವಾಗಿ ದಾಸೋಹದ ವ್ಯವಸ್ಥೆಯನ್ನು ನಿಲ್ಲಿಸಲಾಗಿತ್ತು. ಆದರೆ, ಭಕ್ತರ ಹಿತದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಪ್ಯಾಕೇಟ್​ಗಳಲ್ಲಿ ಪ್ರಸಾದವನ್ನು ವಿತರಿಸಲು ಕ್ರಮವಹಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.