ETV Bharat / state

ಕಾಡು ಹಂದಿ ಮಾಂಸ ಸಾಗಾಟ: ಅಧಿಕಾರಿಗಳ ಕಂಡು ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾದ ಖದೀಮರು - Wild boar trafficking illegally on a bike

ಕೊಳ್ಳೇಗಾಲ ತಾಲೂಕಿನ ಸೂರಪುರ ಸಮೀಪದ ಕುಣಗಳ್ಳಿ ರಸ್ತೆ ಮಾರ್ಗವಾಗಿ ಪಟ್ಟಣದ ಕಡೆ ಸಾಗಿಸುತ್ತಿದ್ದಾಗ, ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಕಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅನುಮಾನಗೊಂಡು ಬೈಕ್ ಹಿಂಬಾಲಿಸಿದಾಗ ಬೈಕ್​ ಬಿಟ್ಟು ಪರಾರಿಯಾಗಿದ್ದಾರೆ.

illegally-transporting-wild-boar-meat
ಕಾಡು ಹಂದಿ ಮಾಂಸ ಸಾಗಾಟ
author img

By

Published : Oct 22, 2020, 5:16 PM IST

ಕೊಳ್ಳೇಗಾಲ (ಚಾಮರಾಜನಗರ): ಬೈಕ್​​ನಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಖದೀಮರು ಅರಣ್ಯ ಇಲಾಖೆ ಅಧಿಕಾರಿಗಳ ಕಂಡು ಬೈಕ್​​ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.

ಇಲ್ಲಿನ ಕುಣಗಳ್ಳಿ ಗ್ರಾಮದ ರಸ್ತೆಯಲ್ಲಿ ಎಕ್ಸ್​ಎಲ್ ಬೈಕ್​ನಲ್ಲಿ ಅಕ್ರಮವಾಗಿ ಎರಡು ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಆರೋಪಿಗಳು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸೂರಪುರ ಸಮೀಪದ ಕುಣಗಳ್ಳಿ ರಸ್ತೆ ಮಾರ್ಗವಾಗಿ ಪಟ್ಟಣದ ಕಡೆ ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಬೈಕ್ ಹಿಂಬಾಲಿಸಿದ್ದಾರೆ. ಈ ವೇಳೆ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಸ್ಥಳದಲ್ಲಿ ಕಾಡು ಹಂದಿ ಮಾಂಸ ಹಾಗೂ ಬೈಕ್ ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್​​​ಎಫ್​​​​​ಓ ಪ್ರವೀಣ್ ರಾಮಪ್ಪ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.