ETV Bharat / state

ನಾಲ್ಕೈದು ತಿಂಗಳಾದರೂ ಬಾರದ ಪಿಂಚಣಿ: ಮತದಾನ ಬಹಿಷ್ಕರಿಸೊ ಎಚ್ಚರಿಕೆ ನೀಡಿದ ಜನ - withdrawn

ಕೆಲವು ಕಾರಣಗಳನ್ನು ಮುಂದಿಟ್ಟುಕೊಂಡು ನಮ್ಮ ಪಿಂಚಣಿಯನ್ನು ತಡೆಹಿಡಿಯಲಾಗಿದೆ. ಸರ್ಕಾರದ ಸವಲತ್ತನ್ನೇ ನಮಗೆ ನೀಡದ್ದರಿಂದ ಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮತದಾನ ಬಹಿಷ್ಕಾರಕ್ಕೆ ಎಚ್ಚರಿಕೆ ನೀಡಿದ ಫಲಾನುಭವಿಗಳು
author img

By

Published : Apr 2, 2019, 7:40 PM IST

ಚಾಮರಾಜನಗರ:ನಾಲ್ಕೈದುತಿಂಗಳಾದರೂ ವೃದ್ಧಾಪ್ಯ ವೇತನ, ವಿಧವಾ ವೇತನ ಬರದಿದ್ದರಿಂದ ಬೇಸತ್ತು ಪಿ.ಜಿ. ಪಾಳ್ಯದ ಫಲಾನುಭವಿಗಳು ಮತದಾನ ಬಹಿಷ್ಕರಿಸುವುದಾಗಿ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರಿಗೆ ದೂರು ನೀಡಿದ್ದಾರೆ.

ಕಳೆದ 4-5 ತಿಂಗಳಿನಿಂದ ಹಲವು ನೆಪಗಳನ್ನೊಡ್ಡಿ ಪಿಂಚಣಿಯನ್ನು ತಡೆ ಹಿಡಿದಿದ್ದಾರೆ. ಈಗ, ಮತ ಕೇಳಲು ಎಲ್ಲಾ ಅಭ್ಯರ್ಥಿಗಳು ಬರುತ್ತಿದ್ದು, ಪಿಂಚಣಿ ಕೊಡಿಸುವ ವ್ಯವಸ್ಥೆ ಮಾತ್ರ ಮಾಡಿಲ್ಲವೆಂದು ಆಕ್ರೋಶ ಹೊರಹಾಕಿದರು‌.

ಮತದಾನ ಬಹಿಷ್ಕಾರಕ್ಕೆ ಎಚ್ಚರಿಕೆ ನೀಡಿದ ಫಲಾನುಭವಿಗಳು

ಸರ್ಕಾರದ ಸವಲತ್ತನ್ನೇ ನಮಗೆ ನೀಡದ ಮೇಲೆ ಸರ್ಕಾರದ ಭಾಗವಾಗಿ ನಾವೇಕೆ ಮತ ಚಲಾಯಿಸಬೇಕು? ಹಲವಾರು ಬಾರಿ ಮನವಿ ಮಾಡಿದರೂ ನಮಗೆ ಪಿಂಚಣಿ ಬಂದಿಲ್ಲವೆಂದು ಪಿಂಚಣಿದಾರರು ಅಳಲು ತೋಡಿಕೊಂಡಿದ್ದಾರೆ. ಪಿಂಚಣಿ ನೀಡಿದರೇ ಮತಹಾಕುತ್ತೇವೆ, ಇಲ್ಲವೆಂದರೇ ತಟಸ್ಥರಾಗುತ್ತೇವೆ ಎಂದು ಗ್ರಾಮದ 60ಕ್ಕೂ ಹೆಚ್ಚು ಮಂದಿ ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ಜನತಂತ್ರದ ಹಬ್ಬದಲ್ಲಿ ಪ್ರತಿವೊಬ್ಬರು ಪ್ರಜೆಯು ಮತದಾನದಲ್ಲಿ ಭಾಗಿಯಾಗುವಂತೆ ಮಾಡಬೇಕಿರುವುದು ಕಾರ್ಯಾಂಗದ ಕೆಲಸವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮತದಾರರ ಕಷ್ಟವನ್ನು ಆಲಿಸಬೇಕಿದೆ.

Intro:೪-೫ ತಿಂಗಳಾದರೂ ಬರದ ಪಿಂಚಣಿ: ಮತದಾನ ಬಹಿಷ್ಕರಿಸುತ್ತೇವೆ ಎನ್ನುತ್ತಿರುವ ವೃದ್ಧರು- ವಿಧವೆಯರು

ಚಾಮರಾಜನಗರ: ೪-೫ ತಿಂಗಳಾದರು ವೃದ್ಧಾಪ್ಯ ವೇತನ, ವಿಧವಾ ವೇತನ ಬರದಿದ್ದರಿಂದ ಬೇಸತ್ತು ಪಿ.ಜಿ.ಪಾಳ್ಯದ ಫಲಾನುಭವಿಗಳು ಮತದಾನ ಬಹಿಷ್ಕರಿಸುತ್ತೇವೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ದೂರು ನೀಡಿದ್ದಾರೆ. 

Body:ಕಳೆದ ೪-೫ ತಿಂಗಳಿನಿಂದ ಹಲವಾರು ನೆಪವೊಡ್ಡಿ ಪಿಂಚಣಿಯನ್ನು ತಡೆ ಹಿಡಿದಿದ್ದಾರೆ. ಈಗ, ಮತ ಕೇಳಲು ಎಲ್ಲಾ ಅಭ್ಯರ್ಥಿಗಳು ಬರುತ್ತಿದ್ದು, ಪಿಂಚಣಿ ಕೊಡಿಸುವ ವ್ಯವಸ್ಥೆ ಮಾತ್ರ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು‌.

ಸರ್ಕಾರದ ಸವಲತ್ತನ್ನೇ ನಮಗೆ ನೀಡದ ಮೇಲೆ ಸರ್ಕಾರದ ಭಾಗವಾಗಿ ನಾವು ಏಕೆ ಮತ ಚಲಾಯಿಸಬೇಕು, ಹಲವಾರು ಬಾರಿ ಮನವಿ ಮಾಡಿದರೂ ನಮಗೆ ಪಿಂಚಣಿ ಬಂದಿಲ್ಲ ಎಂದು ಪಿಂಚಣಿದಾರರು ಅಳಲು ತೋಡಿಕೊಂಡಿದ್ದಾರೆ.

ಪಿಂಚಣಿ ನೀಡಿದರೇ ಮತಹಾಕುತ್ತೇವೆ ಇಲ್ಲವೆಂದರೇ ತಟಸ್ಥರಾಗುತ್ತೇವೆ ಎಂದು ಗ್ರಾಮದ ೬೦ ಕ್ಕೂ ಹೆಚ್ಚು ಮಂದಿ ಎಚ್ಚರಿಸಿದ್ದಾರೆ.

Conclusion:ಒಟ್ಟಿನಲ್ಲಿ, ಜನತಂತ್ರದ ಹಬ್ಬದಲ್ಲಿ ಪ್ರತಿಯೊರ್ವ ಪ್ರಜೆಯು ಮತದಾನದಲ್ಲಿ ಭಾಗಿಯಾಗುವಂತೆ ಮಾಡಬೇಕಿರುವುದು ಕಾರ್ಯಾಂಗದ ಕೆಲಸವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಮತದಾರರ ಕಷ್ಟವನ್ನು ಆಲಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.