ETV Bharat / state

ಬಿಜೆಪಿ ಸೇರಲು ತೀರ್ಮಾನಿಸಿಲ್ಲ, ಬೆಂಬಲ ಮಾತ್ರ ಬಿಎಸ್​ವೈಗೆ : ಶಾಸಕ ಎನ್. ಮಹೇಶ್ - MLA N. Mahesh news

ಬಿಜೆಪಿ ಸೇರ್ಪಡೆ ಕುರಿತು ಮುಂದೆ ಯೋಚಿಸುತ್ತೇನೆ. ನಾನು ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕಿದ್ದೇನೆ. ನನ್ನನ್ನು ಮಂತ್ರಿ ಮಾಡುವುದು-ಬಿಡುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

MLA N. Mahesh
ಕೊಳ್ಳೇಗಾಲ ಶಾಸಕ ಎನ್.ಮಹೇಶ್
author img

By

Published : Jan 12, 2021, 4:04 PM IST

ಚಾಮರಾಜನಗರ: ಬಿಜೆಪಿ ಸೇರುವ ಕುರಿತು ಅಂತಿಮ ತೀರ್ಮಾನ ಮಾಡಿಲ್ಲ. ‌ಆದರೆ ನನ್ನ ಬೆಂಬಲ ಯಾವತ್ತಿದ್ದರೂ ಸಿಎಂ ಯಡಿಯೂರಪ್ಪ ಅವರಿಗೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದ್ದಾರೆ.

ಬಿಎಸ್​ವೈಗೆ ಬೆಂಬಲ ಎಂದ ಕೊಳ್ಳೇಗಾಲ ಶಾಸಕ ಎನ್.ಮಹೇಶ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ಕುರಿತು ಮುಂದೆ ಯೋಚಿಸುತ್ತೇನೆ. ನಾನು ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕಿದ್ದೇನೆ. ನನ್ನನ್ನು ಮಂತ್ರಿ ಮಾಡುವುದು-ಬಿಡುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಗಳಿಗೆ ಅಡ್ಡಗೋಡೆ ಮೇಲೆ ದೀಪವಿಡುವ ಉತ್ತರ ಕೊಟ್ಟರು.

ಓದಿ:ನಾಳೆ ಸಚಿವ ಸಂಪುಟ ವಿಸ್ತರಣೆ.. ಸಿಎಂ ನಿರ್ಧಾರವೇ ಅಂತಿಮ ಎಂದ ಕಟೀಲ್..

ಇದೇ ವೇಳೆ ಮೈತ್ರಿ ಸರ್ಕಾರ ಪತನದ ವೇಳೆ ನಾನು ಬಿಜೆಪಿ ಬೆಂಬಲಿಸಿ ಗೈರಾಗಿರಲಿಲ್ಲ. ಯಾವ ಪಕ್ಷದ ಪರ-ವಿರೋಧವಾಗಿಯೂ ಮತ ಹಾಕಿಲ್ಲ. ಆದರೆ, ಈಗ ನಾನು ಸ್ವತಂತ್ರ ಶಾಸಕನಾಗಿದ್ದು, ಯಡಿಯೂರಪ್ಪ ಅವರಿಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇನೆ, ಸರ್ಕಾರ ಸುಭದ್ರವಾಗಿರಲಿದೆ ಎಂದು ಹೇಳಿದರು.

ಬಿಜೆಪಿ ಬ್ಯಾನರಿನಲ್ಲಿ ಫೋಟೋ ಹಾಕಿದ್ದರ ಕುರಿತು ಪ್ರತಿಕ್ರಿಯಿಸಿದ ಮಹೇಶ್​, ನನ್ನ ಮೇಲಿನ ಅಭಿಮಾನದಿಂದ ಭಾವಚಿತ್ರ ಬಳಸಿರಬಹುದು, ಹೆಚ್ಚೇನಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.