ETV Bharat / state

ತಿರುವಿನಲ್ಲಿ ಲಾರಿ ಪಲ್ಟಿ.. ಬೆಂಗಳೂರು - ದಿಂಡಿಗಲ್ ರಸ್ತೆಯಲ್ಲಿ 5 ತಾಸು ನಿಂತಲ್ಲೇ ನಿಂತ ವಾಹನಗಳು..! - ಬೆಂಗಳೂರು ದಿಂಡಿಗಲ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಲಾರಿ ಪಲ್ಟಿಯಾದ ಹಿನ್ನೆಲೆ, ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ತಾಸು ಟ್ರಾಫಿಕ್ ಜಾಮ್ ಉಂಟಾಗಿತ್ತು.

traffic jam
ಟ್ರಾಫಿಕ್ ಜಾಮ್​​
author img

By

Published : Sep 30, 2021, 11:26 AM IST

ಚಾಮರಾಜನಗರ: ರಸ್ತೆ ತಿರುವಿನಲ್ಲಿ ತೆಂಗಿನಕಾಯಿ ಮಟ್ಟೆ/ಚಿಪ್ಪು ತುಂಬಿದ ಲಾರಿ ಪಲ್ಟಿಯಾದ ಹಿನ್ನೆಲೆ, ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ 5 ತಾಸು ಟ್ರಾಫಿಕ್ ಜಾಮ್ ಉಂಟಾಗಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.

ದಿಂಬಂನ 7ನೇ ತಿರುವಿನಲ್ಲಿ ಚಾಮರಾಜನಗರದಿಂದ ತೆಂಗಿನಕಾಯಿ ಮಟ್ಟೆ ತುಂಬಿಕೊಂಡು ತೆರಳಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ, ಸರಕು ತುಂಬಿದ ವಾಹನಗಳು ಸೇರಿದಂತೆ ಸಾರಿಗೆ ಸಂಸ್ಥೆ ಬಸ್​ಗಳು, ಕಾರುಗಳು ಮುಂದಕ್ಕೂ ಚಲಿಸಲಾಗದೇ ಹಿಂದಕ್ಕೂ ತೆರಳಲಾಗದೇ 5 ತಾಸು ನಿಂತಲ್ಲೇ ನಿಂತು ಪ್ರಯಾಣಿಕರು, ಚಾಲಕರು ಹೈರಾಣಾಗಿದ್ದಾರೆ.

ವಿಚಾರ ಅರಿತು ಸತ್ಯಮಂಗಲಂ‌‌ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪಲ್ಟಿಯಾಗಿದ್ದ ಲಾರಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮುಂಜಾನೆಯಿಂದ ಬೆಳಗ್ಗೆ 9.30ರ ತನಕ‌ 5 ತಾಸು ಟ್ರಾಫಿಕ್ ಜಾಮ್ ಉಂಟಾಗಿತ್ತು ಎಂದು ತಿಳಿದು ಬಂದಿದೆ.‌

ಇದನ್ನೂ ಓದಿ: ಶಾಸಕಿ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ

ಭಾರಿ ವಾಹನಗಳು ನಿಯಂತ್ರಣ ತಪ್ಪಿ ಈ ರಸ್ತೆಯಲ್ಲಿ ಪಟ್ಟಿಯಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ವಾಹನ ಸವಾರರು ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.