ETV Bharat / state

ಗ್ರಾಮ ಅಲ್ಲ, ಆಸ್ಪತ್ರೆ... ಚಾಮರಾಜನಗರ ಜಿಲ್ಲಾಸ್ಪತ್ರೆಯಿಂದ ಸಚಿವ ಶ್ರೀರಾಮುಲು ವಾಸ್ತವ್ಯ ಶುರು - Health Minister B. Sriramulu

ಆರೋಗ್ಯ ಸಚಿವ ಬಿ.ಶ್ರೀರಾಮುಲು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕುಂದು-ಕೊರತೆ ಪರಿಶೀಲಿಸಿದರು.

ಚಾಮರಾಜನಗರ ಆಸ್ಪತ್ರೆಯಲ್ಲಿ ಶ್ರೀರಾಮುಲು ಮೊದಲ ವಾಸ್ತವ್ಯ
author img

By

Published : Sep 25, 2019, 3:25 AM IST

ಚಾಮರಾಜನಗರ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಯ ಕುಂದು-ಕೊರತೆ ಪರಿಶೀಲಿಸಿದರು.

ಮಾರ್ಗ ಮಧ್ಯೆ ಬೆಂಬಲಿಗರ ಸ್ವಾಗತ ಪಡೆದು ಯಳಂದೂರಿನ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರ ನಿರ್ಲಕ್ಷ್ಯಕ್ಕೆ ಕಿಡಿಕಾರಿದರು. ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಚಾಮರಾಜನಗರ ಆಸ್ಪತ್ರೆಯಲ್ಲಿ ಶ್ರೀರಾಮುಲು ಮೊದಲ ವಾಸ್ತವ್ಯ

ರಾತ್ರಿ 8.30ಕ್ಕೆ ಜಿಲ್ಲಾಸ್ಪತ್ರೆಗೆ ಬಂದ ಸಚಿವರು ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಕಣ್ಣಿನ ಶಸ್ತ್ರಚಿಕಿತ್ಸೆ ಒಳಗಾದವರೊಂದಿಗೆ ಆಪ್ತವಾಗಿ ಮಾತನಾಡಿದರು. ಈ ವೇಳೆ, ಸರ್ಕಾರ ನಿಮ್ಮ ಪರವಾಗಿರಲಿದ್ದು, ಯಾವೂದಕ್ಕು ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು.

ಬಳಿಕ, ತುರ್ತು ವಿಭಾಗಕ್ಕೆ ಭೇಟಿ ನೀಡಿ ಹಲವು ರೋಗಿಗಳನ್ನು ಮಾತನಾಡಿಸಿ ದಾಖಲಾದ ಹಿನ್ನೆಲೆ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ನಂಜದೇವನಪುರದ ಕ್ಯಾನ್ಸರ್ ರೋಗಿಯನ್ನು ಕೂಡಲೇ ಬೇರೆ ಆಸ್ಪತ್ರೆಗೆ ದಾಖಲಿಸಬೇಕು. ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಸಾರಿಗೆ ವೆಚ್ಚದ ಸಮೇತ ಬುಧವಾರ ಬೆಳಗ್ಗೆಯೇ ರವಾನಿಸಬೇಕು ಎಂದು ಸ್ಥಳದಲ್ಲೇ ವೈದ್ಯಾಧಿಕಾರಿಗೆ ಸೂಚಿಸಿದರು.

ಬಳಿಕ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾ ನೌಕರಿ ಕಳೆದುಕೊಂಡ 36 ಮಂದಿ ಕೆಲಸಗಾರರ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಿದ್ದೇವೆ. ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವುದನ್ನೇ ನಿಲ್ಲಿಸುವ ಚಿಂತನೆ ಇದ್ದು, ಶಾಶ್ವತ ಪರಿಹಾರ ನೀಡುವ ಆಶ್ವಾಸನೆ ನೀಡಿದರು.

ಇಷ್ಟಲಿಂಗ ಪೂಜೆ: ಹಲವಾರು ವರ್ಷಗಳಿಂದ ಇಷ್ಟಲಿಂಗ ಪೂಜೆ ಮಾಡುತ್ತ ಬಂದಿರುವ ಶ್ರೀರಾಮುಲು ತಮ್ಮ ವಾಸ್ತವ್ಯದ ಕೊಠಡಿಗೆ ಪೂಜೆ ಪರಿಕರಗಳನ್ನು ತಂದಿಟ್ಟುಕೊಂಡರು. ರಾತ್ರಿ ಬಾಳೆಹಣ್ಣು ಮತ್ತು ಹಾಲನ್ನಷ್ಟೇ ಸೇವಿಸಿ ಮಲಗಿದರು.

ಆಸ್ಪತ್ರೆ ವಾಸ್ತವ್ಯ ಹೂಡುವ ಯೋಜನೆ ಹಾಕಿಕೊಂಡಿರುವ ಶ್ರೀರಾಮುಲು ಮೊದಲ ಬಾರಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದು, ಬುಧವಾರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

Intro:ಚಾಮರಾಜನಗರ ಆಸ್ಪತ್ರೆಯಲ್ಲಿ ಶ್ರೀರಾಮುಲು ಮೊದಲ ವಾಸ್ತವ್ಯ: ರೋಗಿಗಳನ್ನು ಕಂಡು ಗದ್ಗಧಿತ, ನೆರವಿನ ಭರವಸೆ

ಚಾಮರಾಜನಗರ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿಗಳ ಕುಂದು-ಕೊರತೆ ಪರಿಶೀಲಿಸಿದರು.

Body:ಮಾರ್ಗಮಧ್ಯೆ ಬೆಂಬಲಿಗರ ಸ್ವಾಗತ ಪಡೆದು ಯಳಂದೂರಿನ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವೈದ್ಯರ ನಿರ್ಲಕ್ಷ್ಯಕ್ಕೆ ಕಿಡಿಕಾರಿದರು. ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾತ್ರಿ ೮.೩೦ಕ್ಕೆ ಜಿಲ್ಲಾಸ್ಪತ್ರೆಗೆ ಬಂದ ಸಚಿವರು ಒಳರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಕಣ್ಣಿನ ಶಸ್ತ್ರಚಿಕಿತ್ಸೆ ಒಳಗಾದವರೊಂದಿಗೆ ಆಪ್ತವಾಗಿ ಮಾತನಾಡಿದರು. ಈ ವೇಳೆ, ಸರ್ಕಾರ ನಿಮ್ಮ ಪರವಾಗಿರಲಿದ್ದು ಯಾವೂದಕ್ಕು ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು.

ಬಳಿಕ, ತುರ್ತು ವಿಭಾಗಕ್ಕೆ ಭೇಟಿ ನೀಡಿ ಹಲವು ರೋಗಿಗಳನ್ನು ಮಾತನಾಡಿಸಿ ದಾಖಲಾದ ಹಿನ್ನೆಲೆ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ನಂಜದೇವನಪುರದ ಕ್ಯಾನ್ಸರ್ ರೋಗಿಯನ್ನು ಕೂಡಲೇ ಬೇರೆ ಆಸ್ಪತ್ರೆಗೆ ದಾಖಲಿಸಬೇಕು, ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ, ಸಾರಿಗೆ ವೆಚ್ಚದ ಸಮೇತ ಬುಧವಾರ ಬೆಳಗ್ಗೆಯೇ ರವಾನಿಸಬೇಕು ಎಂದು ಸ್ಥಳದಲ್ಲೇ ವೈದ್ಯಾಧಿಕಾರಿಗೆ ಸೂಚಿಸಿದರು.

ಬಳಿಕ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾ ನೌಕರಿ ಕಳೆದುಕೊಂಡ ೩೬ ಮಂದಿ ಕೆಲಸಗಾರರ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಿದ್ದು ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವುದನ್ನೇ ನಿಲ್ಲಿಸುವ ಚಿಂತನೆ ಇದ್ದು ಶಾಶ್ವತ ಪರಿಹಾರ ನೀಡುವ ಆಶ್ವಾಸನೆ ನೀಡಿದರು.

ಇಷ್ಟಲಿಂಗ ಪೂಜೆ: ಹಲವಾರು ವರ್ಷಗಳಿಂದ ಇಷ್ಟಲಿಂಗ ಪೂಜೆ ಮಾಡುತ್ತ ಬಂದಿರುವ ಶ್ರೀರಾಮುಲು ತಮ್ಮ ವಾಸ್ತವ್ಯದ ಕೊಠಡಿಗೆ ಪೂಜೆ ಪರಿಕರಗಳನ್ನು ತಂದಿಟ್ಟುಕೊಂಡರು. ರಾತ್ರಿ ಬಾಳೆಹಣ್ಣು ಮತ್ತು ಹಾಲನ್ನಷ್ಟೇ ಸೇವಿಸಿ ಮಲಗಿದರು.

Conclusion:ಆಸ್ಪತ್ರೆ ವಾಸ್ತವ್ಯ ಹೂಡುವ ಯೋಜನೆ ಹಾಕಿಕೊಂಡಿರುವ ಶ್ರೀರಾಮುಲು ಮೊದಲ ಬಾರಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದು ಬುಧವಾರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.