ಚಾಮರಾಜನಗರ: ನರೇಗಾದಲ್ಲಿ ಸಮರ್ಪಕವಾಗಿ ಉದ್ಯೋಗಾವಕಾಶ ಕಲ್ಪಿಸದಿದ್ದಕ್ಕೆ ಹನೂರು ಶಾಸಕ ಆರ್.ನರೇಂದ್ರ ಕೆಂಡಾಮಂಡಲವಾದ ಘಟನೆ ಮಂಗಲ ಗ್ರಾಮದಲ್ಲಿ ನಡೆದಿದೆ.
ಶಾಸಕರು ಇಂದು ಪಂಚಾಯತಿ ಕಚೇರಿಗೆ ದಿಢೀರ್ ಭೇಟಿ ನೀಡಿ ನರೇಗಾ ಕುರಿತು ಪರಿಶೀಲಿಸಿದ ವೇಳೆ 1100 ಜಾಬ್ ಕಾರ್ಡ್ ನೀಡಿದ್ದರೂ ಕೇವಲ 100-150 ಮಂದಿಗೆ ಮಾತ್ರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್ ನೌಕರಿ ನೀಡಿದ್ದರಿಂದ ಗರಂ ಆದ ನರೇಂದ್ರ, ಸುಮ್ನೇ ಆಟ ಆಡ್ಕೊಂಡ್ ಹೋಗಲು ಬರ್ತಿಯಾ, ಇವನ್ನ ಇಲ್ಲೇ ಇಟ್ಕಂಡ್ರೆ ಪಂಚಾಯಿತಿ ಉದ್ಧಾರ ಮಾಡಕ್ಕಾಗಲ್ಲ. ಬಡಜನರು ಇರುವ ಸ್ಥಳದಲ್ಲಿ ನೀವು ಕೆಲಸ ಕೊಡದಿದ್ದರೆ ಹೇಗೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಇವನ್ನ ಇಟ್ಕಂಡ್ರೆ ಊರು ಉದ್ಧಾರವಾಗಲ್ಲ... ಪಿಡಿಒ ವಿರುದ್ಧ ಶಾಸಕ ನರೇಂದ್ರ ಗರಂ! - ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್ ನೌಕರಿ
ಲಾಕ್ಡೌನ್ ವೇಳೆ ಬೇರೆ ಕಡೆಯಲ್ಲೆಲ್ಲಾ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರು ಹೆಚ್ಚು ಕೆಲಸ ಕೇಳುತ್ತಾರೆ. ಹೆಚ್ಚಿನ ಜನರಿಗೆ ಉದ್ಯೋಗ ಕೊಡಿ ಎಂದು ಶಾಸಕರು ಸೂಚಿಸಿದರು.