ಚಾಮರಾಜನಗರ : ಹಸಿರು ಪಟಾಕಿ ಮಾರಾಟದ ಗೊಂದಲ ಏರ್ಪಟ್ಟು ಸೂಕ್ತ ಲೋಗೋ ಇಲ್ಲದ ಕಾರಣ ನಗರದ 9 ಪಟಾಕಿ ಅಂಗಡಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಲಿ ಬೀಗ ಹಾಕಿದ ಘಟನೆ ಸಂಜೆ ನಡೆಯಿತು.
ಬಿಡಿಯಾಗಿ ಪಟಾಕಿ ಮಾರುವಂತಿಲ್ಲ, ಪರಿಸರ ಸ್ನೇಹಿ ಪಟಾಕಿಗಳನ್ನಷ್ಟೇ ಮಾರಾಟ ಮಾಡುವುದು, ಸೂಕ್ತ ಸರ್ಟಿಫಿಕೇಟ್ ಇಲ್ಲದ ಮಾಲುಗಳನ್ನು ಮಾರಾಟ ಮಾಡಬಾರದು ಎಂಬ ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಪೊಲೀಸರ ಸಮಕ್ಷಮದಲ್ಲಿ ಅಂಗಡಿಗಳಿಗೆ ಬೀಗ ಹಾಕಿಸಿದರು.
ಸರ್ಟಿಫಿಕೇಟ್ ಇದ್ದರೂ ಕೂಡ ಅಧಿಕಾರಿಗಳು ಬೀಗ ಹಾಕಿದ್ದಾರೆ. ಲಕ್ಷಾಂತರ ರೂ. ಬಂಡವಾಳ ಹಾಕಿದ್ದೇವೆ. ಪಟಾಕಿ ಮಾರುವಂತಿಲ್ಲ ಎಂದು ತಿಂಗಳ ಹಿಂದೆ ಹೇಳಿದ್ದರೇ ಹಣವನ್ನೇ ಹಾಕುತ್ತಿರಲಿಲ್ಲ. ಈಗ ಬಂದು ಹಸಿರು ಪಟಾಕಿ ಎನ್ನುತ್ತಿದ್ದಾರೆ ಎಂದು ವ್ಯಾಪಾರಿಗಳು ಕಿಡಿಕಾರಿದರು.
ಇನ್ನು, ಮಕ್ಕಳ ಸಮೇತ ಪಾಲಕರು ಪಟಾಕಿ ಕೊಳ್ಳಲು ಎಡತಾಕಿ ನಿರಾಶೆಯಿಂದ ಮರಳುತ್ತಿದ್ದು ಸಾಮಾನ್ಯವಾಗಿತ್ತು.