ಚಾಮರಾಜನಗರ : ಮುತ್ತತ್ತಿರಾಯನ ಸೇವೆಯನ್ನು ಮಾಡುವ ಮೂಲಕ ಐದು ದಿನಗಳ ಚಿಕ್ಕಲ್ಲೂರು ಜಾತ್ರೆಗೆ ಮಂಗಳವಾರ ತೆರೆಬಿದ್ದಿತು.
ಹನೂರು ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ಧಾರ್ಮಿಕ ಪುಣ್ಯ ಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಿ, ಚಂದ್ರಮಂಡಲೋತ್ಸವ, ಹುಲಿವಾಹನೋತ್ಸವ, ಮುಡಿ ಸೇವೆ, ಪಂಕ್ತಿ ಸೇವೆ, ಹಾಗೂ ಕಂಡಾಯಗಳ ಉತ್ಸವ ಸೇರಿದಂತೆ ಕೊನೆ ದಿನ ಮುತ್ತತ್ತಿರಾಯನ ಸೇವೆ ಸಡಗರ ಸಂಭ್ರಮದಿಂದ ನೆರವೇರಿಸಲಾಯಿತು.
ಚಿಕ್ಕಲ್ಲೂರು ಪುಣ್ಯ ಕ್ಷೇತ್ರ ಸಮೀಪದ ಕಾವೇರಿ ನದಿ ಎಡದಂಡೆಗೆ ಮುತ್ತತ್ತಿರಾಯನ ವೈಷ್ಣವ ಕೇಂದ್ರವಿದೆ, ಹಲಗೂರಿಗೆ ಕಬ್ಬಿಣ ಭಿಕ್ಷೆಗೆ ಹೋಗುವಾಗ ಮುತ್ತತ್ತಿರಾಯ ಸಿದ್ದಪ್ಪಾಜಿ ಪವಾಡಗಳಿಗೆ ಸಾಕ್ಷಿಯಾಗುತ್ತಾನೆ ಇವರಿಬ್ಬರ ಸ್ನೇಹದ ಕುರುಹಾಗಿ ಚಿಕ್ಕಲ್ಲೂರು ಜಾತ್ರೆಯ ಕಡೆಯ ದಿನ ಮುತ್ತತ್ತಿರಾಯನ ಸೇವೆ ಜರುಗಲಿದೆ. ವಿಶೇಷವೆನೆಂದರೆ ಈ ದಿನ ನೀಲಗಾರರು ಶ್ರೀ ವೈಷ್ಣವ ಬಿರುದಾರರ ದಾಸಯ್ಯರನ್ನು ಪೂಜಾ ಕಾರ್ಯಗಳಿಗೆ ಅಹ್ವಾನಿಸುತ್ತಾರೆ ಸಸ್ಯಹಾರಿ ಹಾಗೂ ಮಾಂಸಹಾರದ ಅಡುಗೆ ಮಾಡಿ ಅವರ ದಂಡು, ಕೋಲು , ಕಣಜ ಅರಿಗೆಗಳಿಂಧ ಎಡೆಯಿಟ್ಟು ಪೂಜೆ ಸಲ್ಲಿಸಿಸುತ್ತಾರೆ. ಈ ವೇಳೆ ನೀಲಗಾರರು ಸಹ ಮೂರು ನಾಮವನ್ನು ಹಾಕಿಕೊಂಡು ಮುತ್ತತ್ತಿರಾಯನ ಭಕ್ತಿ ಪರಾಕಷ್ಟೆ ಮೆರೆಯುತ್ತಾರೆ.