ಚಾಮರಾಜನಗರ: ತಮ್ಮ ಪರ ಸ್ಪಷ್ಟ ಬಹುಮತವಿದ್ದರೂ ಗ್ರಾಪಂ ಗದ್ದುಗೆ ಹಿಡಿಯಲಾಗದಿರುವ ಘಟನೆ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದ್ದು, ಇದಕ್ಕೆಲ್ಲಾ ಚುನಾವಣಾಧಿಕಾರಿಯೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಸಾಮಾನ್ಯವಾಗಿ ಬಹು ಸಂಖ್ಯೆ ಬಲ ಹೊಂದಿದ ಸದಸ್ಯರಿಗೆ ಅಧಿಕಾರ ಸಿಗುತ್ತದೆ. ಇಲ್ಲ ಚುನಾವಣೆಯಲ್ಲಿ ಸದಸ್ಯರು ಉಲ್ಟಾ ಮಾಡಿದರೆ ಅಧಿಕಾರ ಸಿಗುತ್ತದೆ. ಆದರೆ ಇಲ್ಲಿ ಮಾತ್ರ ಇದಕ್ಕೆ ಬೇರೆಯ ರೀತಿಯಲ್ಲೇ ಚುನಾವಣೆ ನಡೆದು ಅಧಿಕಾರವೇ ಸಿಗುವುದಿಲ್ಲ ಎನ್ನುವವರಿಗೆ ಅಧಿಕಾರ ಸಿಗುವ ಮೂಲಕ ರಾಜಕೀಯದಲ್ಲಿ ಅದೃಷ್ಟ ಬೇಕು ಎನ್ನುವುದು ಇಲ್ಲಿ ಸಾಬೀತಾಗಿದೆ.
ಹೊಂಗನೂರು ಗ್ರಾಪಂನಲ್ಲಿ 19 ಸದಸ್ಯರ ಬಲ ಹೊಂದಿದ್ದು, ಇದರಲ್ಲಿ ಎರಡು ಬಣಗಳಿವೆ. ಒಂದು ಬಣದಲ್ಲಿ ಹತ್ತು ಜನ ಹಾಗೂ ಮತ್ತೊಂದು ಬಣದಲ್ಲಿ ಏಳು ಜನ ಹಾಗೂ ಇಬ್ಬರು ತಟಸ್ಥರಾಗಿದ್ದಾರೆ. ಫೆ.2ರಂದು ಚುನಾವಣೆ ನಿಗದಿಯಾಗಿತ್ತು. ಅಂದು ಬೆಳಗ್ಗೆ 10 ರಿಂದ 12 ಗಂಟೆ ಒಳಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಮೊದಲಿಗೆ ಬಂದ ಏಳು ಸದಸ್ಯರನ್ನು ಹೊಂದಿರುವ ಬಣ ಸರಿಯಾದ ವೇಳೆಗೆ ನಾಮಪತ್ರ ಸಲ್ಲಿಸಿದ್ದು, ಹತ್ತು ಸದಸ್ಯರ ಬಣದವರು ಕೊನೆಯ ವೇಳೆ ಬಂದರೂ ನಾಮಪತ್ರ ಸಲ್ಲಿಸಲಾಗಲಿಲ್ಲ ಎನ್ನಲಾಗಿದೆ.
ಈ ಕಾರಣದಿಂದ ಇಂದು ನಿನ್ನೆ ನಾಮಪತ್ರ ಸಲ್ಲಿಸಿದವರನ್ನೇ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಕಡಿಮೆ ಸದಸ್ಯರು ಇರುವ ಬಣವೇ ಅಧಿಕಾರ ಹಿಡಿಯುವಂತಾಗಿದೆ. ಆದರೆ, ಹೆಚ್ಚು ಸಂಖ್ಯಾಬಲ ಹೊಂದಿರುವ ಬಣ ಚುನಾವಣಾಧಿಕಾರಿ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದು, ಚುನಾವಣೆಯನ್ನು ಫೆ.3ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಮಧುಸೂದನ್ ತಿಳಿಸಿದರು. ಅವರ ಮಾತಿನಂತೆ ನಾಮಪತ್ರ ಸಲ್ಲಿಸದೆ ಹೊರ ನಡೆದವು.
ಓದಿ: ಪಕ್ಷ ಸಂಘಟನೆ, ಬಲವರ್ಧನೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಿಎಲ್ಪಿಯಲ್ಲಿ ಸುದೀರ್ಘ ಚರ್ಚೆ
ಆದರೆ, ಫೆ.3 ರಂದು ನಾಮಪತ್ರ ಸಲ್ಲಿಸಲು ಬಂದ ಸದಸ್ಯರಿಗೆ ಅವಕಾಶ ನಿರಾಕರಿಸಿ ಘೋಷಣೆ ಮಾತ್ರ ಉಳಿದಿದೆ ಎಂದು ಚುನಾವಣಾಧಿಕಾರಿಗಳು ಮಾತು ಬದಲಿಸಿ ಮೋಸ ಮಾಡಿದ್ದಾರೆಂದು ಕಿಡಿಕಾರಿದ್ದಾರೆ. ನಿಗದಿತ ಅವಧಿಯೊಳಗೆ ಬಂದರೂ ಚುನಾವಣಾಧಿಕಾರಿ ಮಧುಸೂದನ್ ದಿಕ್ಕು ತಪ್ಪಸಿ ಬಹುಮತ ಇಲ್ಲದ ಗುಂಪಿನ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ ಎಂಬುದು ಬಹುಜನ ಸಂಖ್ಯೆ ಬಲ ಹೊಂದಿದವರ ಆರೋಪವಾಗಿದೆ.
ಚುನಾವಣಾ ಪ್ರಕ್ರಿಯೆಯು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ಪರಿಶೀಲಿಸಬೇಕು. ಚುನಾವಣೆ ಪ್ರಕ್ರಿಯೆಯನ್ನು ಅಸಿಂಧುಗೊಳಿಸಬೇಕು. ಚುನಾವಣಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದು, ಈ ಅಕ್ರಮದ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ಗುಡುಗಿದ್ದಾರೆ. ಸದ್ಯ ಹೊಂಗನೂರು ಗ್ರಾಪಂ ಅಧ್ಯಕ್ಷರಾಗಿ ರವಿಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಚೈತ್ರಾ ಆಯ್ಕೆಯಾಗಿದ್ದಾರೆ.