ETV Bharat / state

ದ್ವೀಪ ಗ್ರಾಮಕ್ಕೆ ಸೇತುವೆ ಕಟ್ಟಿ ಸುಮ್ಮನಾದ ಸರ್ಕಾರ... ಆದರೂ ಇಲ್ಲಿನವರ ಬದುಕು...? - ಮೂಲಸೌಕರ್ಯಗಳ ಕೊರತೆ

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಯಡಕುರಿಯ ಗ್ರಾಮಕ್ಕೆ ಸೇತುವೆ ನಿರ್ಮಾಣಗೊಂಡಿದ್ದೇ ಭಾಗ್ಯವಾಗಿದೆ. ಆದರೆ, ಅಭಿವೃದ್ಧಿ ಮರೀಚಿಕೆಯಾಗಿದೆ.

ಮೂಲಸೌಕರ್ಯದಿಂದ ವಂಚಿತವಾದ ಯಡಕುರಿಯ ಗ್ರಾಮ
author img

By

Published : Aug 2, 2019, 9:24 AM IST

ಚಾಮರಾಜನಗರ: ಕಳೆದ ವರ್ಷದ ತನಕವೂ ದ್ವೀಪ ಗ್ರಾಮವೇ ಆಗಿದ್ದ ಜಿಲ್ಲೆಯ ಹನೂರು ಕ್ಷೇತ್ರದ ಯಡಕುರಿ ಗ್ರಾಮಕ್ಕೆ ಸೇತುವೆ ನಿರ್ಮಾಣಗೊಂಡಿದ್ದೇ ಭಾಗ್ಯವಾಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ.

ಮೂಲಸೌಕರ್ಯದಿಂದ ವಂಚಿತವಾದ ಯಡಕುರಿಯ ಗ್ರಾಮ

450 ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮವನ್ನು ಕಾವೇರಿ ನದಿ ಸುತ್ತುವರೆದಿದ್ದು, ದೋಣಿಯಲ್ಲೇ ಇವರ ಸಂಚಾರ - ಬದುಕು ಸಾಗುತ್ತಿದೆ. ಈಗ, ಸೇತುವೆ ನಿರ್ಮಾಣಗೊಂಡಿರುವುದರಿಂದ ಸಂಚಾರ ದುಸ್ತರವಾಗದಿದ್ದರೂ ಗ್ರಾಮದೊಳಕ್ಕೆ ವಾಹನ ಬರಬೇಕೆಂದರೆ ರಸ್ತೆ ಇಲ್ಲದೇ ಹರಸಾಹಸ ಪಡಬೇಕಿದೆ.

ಚರಂಡಿ ಅವ್ಯವಸ್ಥೆ: ಗ್ರಾಮದೊಳಗೆ ಎಲ್ಲವೂ ಕಚ್ಚಾ ರಸ್ತೆಯಾಗಿದ್ದು ಚರಂಡಿಗಳೇ ಇಲ್ಲದೇ ಮನೆ ಮುಂದೆ ನೀರು ನಿಲ್ಲುವ ಪರಿಸ್ಥಿತಿ ಗ್ರಾಮದಲ್ಲಿದೆ. ಆಗಾಗ್ಗೆ ಕೈಕೊಡುವ ವಿದ್ಯುತ್​ನಿಂದ ರೋಸಿ ಹೋಗಿರುವ ಗ್ರಾಮಸ್ಥರು ಬುಡ್ಡಿ ದೀಪಗಳನ್ನೇ ಆಶ್ರಯಿಸುತ್ತಾರೆ.

ಕುಡಿವ ನೀರಿಗೆ ಕೆಲಮೊಮ್ಮೆ ಕಾವೇರಿ ಹೊಳೆಯನ್ನೇ ಆಶ್ರಯಿಸುವ ಗ್ರಾಮಸ್ಥರು ನದಿ ನೀರನ್ನೆ ಕುದಿಸಿ ಬಳಸುತ್ತಾರೆ. ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ, ಕುಡಿವ ನೀರು, ವಿದ್ಯುತ್ ವ್ಯವಸ್ಥೆ ಇಲ್ಲದೇ ದಿನವೂ ಇಲ್ಲಿನವರದ್ದು ಪಡಿಪಾಟಲಾಗಿದೆ.

ದಶಕಗಳ ಹೋರಾಟದ ಫಲವಾಗಿ ಸೇತುವೆ ಭಾಗ್ಯ ಕಂಡ ಯಡಕುರಿಯ ಗ್ರಾಮದ ಗ್ರಾಮಸ್ಥರು ಮೂಲಸೌಕರ್ಯಕ್ಕಾಗಿ ಮತ್ತಷ್ಟು ವರ್ಷಗಳ ಹೋರಾಟ ಮಾಡಬೇಕಿದೆ. ಇದು ಜನರನ್ನು ಆಳುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ.

Intro:ದ್ವೀಪ ಗ್ರಾಮಕ್ಕೆ ಸೇತುವೆ ಕಟ್ಟಿ ಸುಮ್ಮನಾದ ಸರ್ಕಾರ: ಮೂಲಸೌಕರ್ಯಕ್ಕಾಗಿ ಮತ್ತೆಷ್ಟು ದಶಕ ಕಾಯಬೇಕು ಯಡಕುರಿಯಾ?

ಚಾಮರಾಜನಗರ: ಕಳೆದ ವರ್ಷದ ತನಕವೂ ದ್ವೀಪ ಗ್ರಾಮವೇ ಆಗಿದ್ದ ಹನೂರು ಕ್ಷೇತ್ರದ ಯಡಕುರಿಯ ಗ್ರಾಮಕ್ಕೆ ಸೇತುವೆ ನಿರ್ಮಾಣಗೊಂಡಿದ್ದೇ ಭಾಗ್ಯವಾಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ.

Body:ಅಂದಾಜು ೪೫೦ ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮವನ್ನು ಕಾವೇರಿ ನದಿ ಸುತ್ತುವರೆದಿದ್ದು ದೋಣಿಯಲ್ಲೇ ಇವರ ಸಂಚಾರ-ಬದುಕು ಸಾಗುತ್ತಿತ್ತು.ಈಗ, ಸೇತುವೆ ನಿರ್ಮಾಣಗೊಂಡಿರುವುದರಿಂದ ಸಂಚಾರ ದುಸ್ತರವಾಗದಿದ್ದರೂ ಗ್ರಾಮದೊಳಕ್ಕೆ ವಾಹನ ಬರಬೇಕೆಂದರೆ ರಸ್ತೆ ಇಲ್ಲದೇ ಹರಸಾಹಸ ಪಡಬೇಕಿದೆ.

ಚರಂಡಿ ಅವ್ಯವಸ್ಥೆ: ಗ್ರಾಮದೊಳಗೆ ಎಲ್ಲವೂ ಕಚ್ಚಾರಸ್ತೆಯಾಗಿದ್ದು ಚರಂಡಿಗಳೇ ಇಲ್ಲದೇ ಮನೆಮುಂದೆ ನೀರು ನಿಲ್ಲುವ ಪರಿಸ್ಥಿತಿ ಗ್ರಾಮದಲ್ಲಿದೆ. ಆಗಾಗ್ಗೆ ಕೈಕೊಡುವ ವಿದ್ಯುತ್ ನಿಂದ ರೋಸಿ ಹೋಗಿರುವ ಗ್ರಾಮಸ್ಥರು ಬುಡ್ಡಿ ದೀಪಗಳನ್ನೇ ಆಶ್ರಯಿಸುತ್ತಾರೆ.

ಕುಡಿಯುವ ನೀರಿಗೆ ಕೆಲಮೊಮ್ಮೆ ಕಾವೇರಿ ಹೊಳೆಯನ್ನೇ ಆಶ್ರಯಿಸುವ ಗ್ರಾಮಸ್ಥರು ನದಿ ನೀರನ್ನೆ ಕುದಿಸಿ ಬಳಸುತ್ತಾರೆ. ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಇಲ್ಲದೇ ದಿನವೂ ಇಲ್ಲಿನವರದ್ದು ಪಡಿಪಾಟಲಾಗಿದೆ.

Conclusion:ದಶಕಗಳ ಹೋರಾಟದ ಫಲವಾಗಿ ಸೇತುವೆ ಭಾಗ್ಯ ಕಂಡ ದ್ವೀಪ ಗ್ರಾಮಸ್ಥರು ಮೂಲಸೌಕರ್ಯಕ್ಕಾಗಿ ಮತ್ತಷ್ಟು ದಶಕಗಳ ಹೋರಾಟಕ್ಕೆ ಸಜ್ಜಾದಂತೆ ಅವರ ಅಳಲು ಪ್ರತಿ ಮಾತಿನಲ್ಲೂ ನುಸುಳುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

ಬೈಟ್: ರತ್ನಮ್ಮ , ಯಡಕುರಿಯ ನಿವಾಸಿ

ಬೈಟ್೨- ಶಿವಪ್ಪ, ಯಡಕುರಿಯ ನಿವಾಸಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.