ETV Bharat / state

ವಿವಾದಕ್ಕೆ ಸಿಲುಕಿದ 'ಗಗವೃವಾ' ಚಿತ್ರ.. ಕೊಲೆ ದೃಶ್ಯಕ್ಕೆ ಮಾದಪ್ಪನ ಹಾಡು ಬಳಕೆಗೆ ಭಕ್ತರ ಕಿಡಿ..

author img

By

Published : Nov 29, 2021, 10:54 PM IST

ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೆ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ? ಜಾನಪದ ಎಂದ ಮಾತ್ರಕ್ಕೆ ಯಾವುದಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

garuda-gamana-vrishabha-vahana-movie-controversy
ಗರುಡ ಗಮನ-ವೃಷಭ ವಾಹನ ಸಿನೆಮಾ ಪೋಸ್ಟರ್​

ಚಾಮರಾಜನಗರ : ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ 'ಗರುಡ ಗಮನ-ವೃಷಭ ವಾಹನ' ಚಿತ್ರವೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಕೊಲೆ ದೃಶ್ಯವೊಂದಕ್ಕೆ 'ಸೋಜುಗದ ಸೂಜಿ ಮಲ್ಲಿಗೆ' ಎಂಬ ಮಹದೇಶ್ವರನ ಹಾಡನ್ನು ಬಳಸಿಕೊಂಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಗರುಡ ಗಮನ-ವೃಷಭ ವಾಹನ ಸಿನೆಮಾ ವಿವಾದದ ಬಗ್ಗೆ ಜಾನಪದ ಗಾಯಕ ಸಿ. ಎಂ ನರಸಿಂಹಮೂರ್ತಿ ಮಾತನಾಡಿರುವುದು..

ಭಕ್ತಿ, ಭಾವ ಸೂಚಿಸಲು ಬಳಸುವ ಒಂದು ದೈವಿಕ ಜನಪದ ಗೀತೆಯನ್ನ ಹೀಗೆ ಕೊಲೆ ದೃಶ್ಯಕ್ಕೆ ಬಳಸಿಕೊಳ್ಳುವುದು ಸರಿಯೇ? ಜಾನಪದ ಎಂದ ಮಾತ್ರಕ್ಕೆ ಯಾವುದಕ್ಕೆ ಬೇಕಾದರೂ ಬಳಸಿಕೊಳ್ಳಬಹುದೇ? ಯಾರೂ ಕೇಳುವಂತಿಲ್ಲವೇ? ಯಾವ ಹಾಡನ್ನು ಯಾವ ಸನ್ನಿವೇಶಕ್ಕೆ ಬಳಸಿಕೊಳ್ಳಬೇಕೆಂಬ ಸಣ್ಣ ಪ್ರಜ್ಞೆಯೂ ಇರಲಿಲ್ಲವೇ? ಎಂದು ಮಾದಪ್ಪನ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರ ತಂಡ ಈ ಬಗ್ಗೆ ಗಮನಿಸಬೇಕು. ಈ ಕೂಡಲೇ ಈ ದೃಶ್ಯ ತೆಗೆದು ಹಾಕಬೇಕು ಹಾಗೂ ನಿರ್ದೇಶಕರು ಕ್ಷಮೆಯಾಚಿಸಬೇಕು ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಹಾಗೂ ಜಾನಪದ ಗಾಯಕ ಸಿ.ಎಂ ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.

ಸಾವಿರಾರು ಮಂದಿ ಭಕ್ತರು ಈ ಹಾಡಿನ ಬಳಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ‌. ಈ ಹಿಂದೆ ಗಾಯಕ ಚಂದನ್ ಶೆಟ್ಟಿಯೂ ಕೂಡ ಮಹದೇಶ್ವರನ ಹಾಡಿಗೆ ಅಶ್ಲೀಲ ನೃತ್ಯ ಸಂಯೋಜನೆ ಮಾಡಿದ್ದರೆಂದು ಆಕ್ರೋಶ ವ್ಯಕ್ತವಾಗಿತ್ತು.

ಸದ್ಯ ಚಿತ್ರಮಂದಿರಗಳಲ್ಲಿ 'ಗರುಡ ಗಮನ ವೃಷಭ ವಾಹನ' ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ರಾಜ್ ಬಿ.ಶೆಟ್ಟಿ, ರಿಷಬ್​ ಶೆಟ್ಟಿ ಮತ್ತಿತ್ತರ ತಾರಾಬಳಗ ಈ ಚಿತ್ರದಲ್ಲಿದೆ.

ಓದಿ: ಸಿದ್ದಗಂಗಾ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ ಲವ್​ ಮಾಕ್​ಟೈಲ್​​​​ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.