ಚಾಮರಾಜನಗರ: ನಾವು ಬಿಜೆಪಿಗೆ ಮರ್ಯಾದಸ್ತರನ್ನ ಮಾತ್ರ ಕರೆಯುತ್ತೇವೆ, ಡಿ.ಕೆ.ಶಿವಕುಮಾರ್ ಅವರನ್ನು ಯಾರೂ ಕರೆದಿಲ್ಲ ಎಂದು ಮಾಜಿ ಎಂಎಲ್ಸಿ ಗೋ.ಮಧುಸೂಧನ್ ಡಿಕೆಶಿ ಹೇಳಿಕೆಗೆ ಟಾಂಗ್ ಕೊಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನಗೆ ತಿಳಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಯಾರೂ ಕರೆದಿಲ್ಲ. ಡಿಕೆಶಿ ಅವರೇ ಸ್ಪಷ್ಟವಾಗಿ ಹೇಳಲಿ ಅವರನ್ನು ಯಾರು ಕರೆದಿದ್ದರು, ಏಕೆ ಕರೆದಿದ್ದರು, ಯಾವಾಗ ಕರೆದಿದ್ದರು ಎಂದು, ಬಿಜೆಪಿಗೆ ಮರ್ಯಾದಸ್ತರನ್ನು ಮಾತ್ರ ನಾವು ಕರೆಯೋದು ಎಂದು ವ್ಯಂಗ್ಯವಾಡಿದರು.
ಡಿಕೆಶಿ ಮೇಲಿನ ಭ್ರಷ್ಟಾಚಾರ ಆರೋಪ ಇನ್ನು ನ್ಯಾಯಾಲಯದಲ್ಲಿದೆ. ಬೇಲ್ ಮೇಲೆ ಅವರು ಈಚೆ ಬಂದಿದ್ದಾರಷ್ಟೇ ಅವರನ್ನು ದೋಷಮುಕ್ತರಾಗಿಲ್ಲ. ಆರ್ಥಿಕ ಅಪರಾಧ ಸೇರಿದಂತೆ ಕ್ರಿಮಿನಲ್ ಕಟ್ಲೆಗಳು ನಡೆಯುತ್ತಿದ್ದು, ಬಿಜೆಪಿ ವಿರುದ್ಧ ಮಾತನಾಡುವ ಮುನ್ನ ಅವರು ಸುತ್ತಲೂ ಕಟ್ಟಿಕೊಂಡಿರುವ ಗಾಜಿನ ಮನೆ ನೆನಪಿಟ್ಟುಕೊಂಡು ಮಾತನಾಡಲಿ ಎಂದು ಸಲಹೆ ನೀಡಿದರು.
ಇದೇ ವೇಳೆ, ವಿಧಾನಪರಿಷತ್ ಚುನಾವಣೆ ವಿಚಾರ ಮಾತನಾಡಿ, ಬಿಜೆಪಿಗೆ ಈ ಬಾರಿ ಮೇಲ್ಮನೆಯಲ್ಲಿ ಬಹುಮತ ಬರಲಿದ್ದು, ಮೈಸೂರು - ಚಾಮರಾಜನಗರ ಕ್ಷೇತ್ರದಲ್ಲಿ ರಘು ಕೌಟಿಲ್ಯ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬಿಜೆಪಿ ಸಂಪೂರ್ಣ ದುರ್ಬಲವಾಗಿದೆ ಎನ್ನುವುದಕ್ಕೆ ಬಿಎಸ್ವೈ ಮಾತೇ ಸಾಕ್ಷಿ: ಡಿಕೆಶಿ ವ್ಯಂಗ್ಯ